ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

P A D Y AS A R A. PART II. ಪ ದ್ಬ ಸಾ ರ . ೨ನೆಯ ಭಾಗ. +----- 1. ಕರ್ಣಾಟಕಭಾಷೆ. ನೃಪತುಂಗನು ರಾಷ್ಟ್ರಕೂಟವಂಶದ ರಾಜನು ಈತನು 814ರಿಂದ 877ರ ವರೆಗೆ ರಾಜ್ಯಭಾರವಾದಂತೆ ತಿಳಿದುಬರುತ್ತದೆ. ಆಗ ಹೈದರಾಬಾದ ಸೀಮಯಲ್ಲಿರುವ ವಾಲಿ ಎಂಬುದೇ ಈತನ ರಾಜಧಾನಿಯಾಗಿದ್ದಿತೆಂದು ಹೇ ಳುತ್ತಾರ ಈತನು 62 ವರ್ಷಕಾಲ ರಾಜ್ಯವಾಳಿ ಬಳಿಕ ತಾನಾಗಿ ರಾಜ್ಯವನ್ನು ಬಿಟ್ಟು ಬಿಟ್ಟಂತೆ ತಿಳಿಯಬರುತ್ತದೆ. ಈತನು ಜೈನಮತದವನು, ಈತನ ಗುರು ಜಿನಸೇನಭಟ್ಟಾರಕರು ಈತನು ಸಂಸ್ಕೃತದಲ್ಲಿ ಪುತ್ತರವಾಲೆಯೆಂಬ ಗ್ರಂಥವನ್ನೂ ಕನ್ನಡದಲ್ಲಿ ಕವಿರಾಜಮಾರ್ಗವೆಂಬ ಲಕ್ಷಣ ಗ್ರಂಥವನ್ನೂ ಬರೆದಿ ದ್ದಾನೆ ಈ ಕನ್ನಡದ ಗ್ರಂಧದಿಂದ ಕರ್ಣಾಟಕಭಾಷಾವಿಷಯವಾದ ಈ ಪದ್ಯ ಗಳು ಉತವಾಗಿವೆ, Foll ಕಾವೇರಿಯಿಂದ ಮಾಗೋ || ದಾವರಿವರಮಿರ್ಪ ನಾಡದಾ ಕನ್ನಡದೊಳೆ || ಭಾವಿಸಿದ ಜನಪದಂ ವಸು || ಧಾವಳಯವಿಲೀನವಿಶದವಿಷಯವಿಶೇಷಂ ||೧|| ಅದಳಗಂ ಕಿಸುವೊಅಲಾ | ವಿದಿತಮಹಾಕೊಸನಗರದಾ ಪುರಿಗೆಜಿಯಾ ||| ಸದಭಿಸ್ತುತಮಪ್ರೊಂಕಂ | ದದ ನಡುವಣ ನಾಡೆ ನಾಡೆ ಕನ್ನಡದ ತಿರುಳೆ ||೨||