ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

110 ಪದ್ಯಸಾರ 28, ದಧಿಮುಖನ ಶಿರಂ ಪದ ಕಥೆ. ವೃತ್ತವಿಲಾಸನೆಂಬ ಒಬ್ಬ ಜೈನಕವಿಯು ಕನ್ನಡದಲ್ಲಿ “ ಧರ್ಮಪರೀಕ್ಷೆ !” ಎಂಬ ಒಂದು ಗ್ರಂಥವನ್ನು ರಚಿಸಿರುವನು, ಇಲ್ಲಿ ಕೊಟ್ಟಿರುವ ಪದ್ಯಗಳು ಅವ ರೊಳಗಣಿಂದ ಉತವಾಗಿವೆ. ಈ ಗ್ರಂಥವನ್ನು ಮೊದಲಲ್ಲಿ ಅಮಿತಗತಿ ಎಂಬಾ ತನು ಸಂಸ್ಕೃತದಲ್ಲಿ ರಚಿಸಿಯಿದ್ದಂತೆಯೂ ಅದನ್ನು ತಾನು ಕನ್ನಡಿಸಿದಂತೆಯೂ ಹೇಳಿಕೊಂಡಿರುತ್ತಾನೆ. ಇದಲ್ಲದೆ ಈತನು ಶಾಸ್ತ್ರ ಸಾರವೆಂಬ ಮತ್ತೊಂದು ಗುಂಥವನ್ನೂ ರಚಿಸಿರುವಂತೆ ತಿಳಿಯಬರುತ್ತದೆ. ಈತನಿದ್ದ ಕಾಲವು ಸರಿಯಾಗಿ ತಿಳಿಯದು ; ಸುಮಾರು ಕ್ರಿ ಶ. 1160ರಲ್ಲಿ ಇದ್ದಿರಬಹುದೆಂದು ಇತರವೃತ್ತಾಂ ತದಿಂದ ಊಹಿಸಬೇಕಾಗಿದೆ. ಈತನ ಬಂಧವು ಸುಲಭವಾಗಿಯೂ ಲಲಿತವಾಗಿಯೂ ಇದೆ. ಧರ್ಮಪರೀಕ್ಷೆ ಎಂಬುದು ಚಂಪೂರೂಪವಾಗಿದೆ. ಇದರಲ್ಲಿ ಹೇಳಿರುವ ಕಥಾಸಾರವೇನೆಂದರೆ :-ವಾಯುವೇಗ ಮನೋವೇಗರೆಂಬ ರಾಜಕುಮಾರರಿಬ್ಬರು ಪೂರ್ವದಲ್ಲಿ ಪ್ರಖ್ಯಾತವಾಗಿದ್ದ ಪಾಟಲಿ' ಪುರಕ್ಕೆ ಹೋಗಿ ಅಲ್ಲಿ ಬ್ರಹ್ಮನ ದೇವಸ್ಥ ನಾಂತರ್ಗತವಾದ ಸಭಾಭವನವನ್ನು ಎಂಟುದಿನಗಳವರೆಗೆ ಅದಕ್ಕಿರುವ ಎಂಟು ಬಾಗಿಲುಗಳಿಂದ ಎಂಟು ವಿಧವಾದ ಬೇರೆ ಬೇರೆ ವೇಷಗಳನ್ನು ದಿನಕ್ಕೊಂದರಂತೆ ಧರಿಸಿ ಪುವೇಶಿಸಿ, ಅಲ್ಲಿದ್ದ ಛೇರಿಯನ್ನು ಹೊಡೆದು ಅಲ್ಲಿದ್ದ ಸಿಂಹಾಸನದಲ್ಲಿ ಕುಳಿತು ಕೊಳ್ಳುತ್ತಾರೆ ಆಗ ಅಲ್ಲಿನ ಶಾಸ್ತ್ರಜ್ಞರಾಗ ಬ್ರಾಹ್ಮಣರು ಬಂದು ( ವಿದ್ವಾಂಸರಾ ದವರು ವಾದಾರ್ಥದಿಂದ ಬಂದು ಛೇರಿಯನ್ನು ಹೊಯ್ದು ವಾದದಲ್ಲಿ ಗೆದ್ದಲ್ಲದೆ 20 ಹಾಸನದಲ್ಲಿ ಕುಳ್ಳಿರಬಾರದು ” ಎಂದು ಆಕ್ಷೇಪಿಸುತ್ತಾರೆ. ಅದಕ್ಕೆ ಅವರು ಹಾಗೆ ಯೇ ಆಗಲಿ ಎಂದು ಕೆಳಗೆ ಕುಳಿತ ನಾದಕ್ಕುಪಕ್ರಮಿಸಿ ನಿತ್ಯವೂ ನಾನಾ ಕಥೆಗೆ ಳನ್ನು ಹೇಳಿ ಬ್ರಾಹ್ಮಣರ ಮತವನ್ನು ನಿರಾಕರಿಸಿ ಜಯಪತ್ರವನ್ನು ಪಡೆದು ಕೊಂಡು ಹೋಗುತ್ತಾರೆ. ಕಂ|| ಭರವಶದಿಂ ಖೇಚರಭೋ | ವರನಾದಿವಸದೋಳ ಸಖಸಮೇತಂ ತ್ರೇತಾಂ || ಬರವೇಷಧಾರಿಯಾಗ | ಚ್ಚರಿಯೆನಿಸಲೆ ಪಾಟಲೀಪುರಕ್ಕೆ ತಂದಂ ೫೬oll ಆಪುರದಗ್ನಿ ಯ ಭಾಗದ | ಗೋಪುರದಬ್ಬಜನಿವಾಸಮಂ ಪೊಕ್ಕು ಜಯ || ಶ್ರೀಪತಿ ದುಂದುಭಿಯಂ ಪೊ | ಯಾಪದದೊಳೆ ಕುಳ್ಳಿದಂ ಮೃಗೇಂದ್ರಾಸನದೊಳೆ ೫೬೩||