ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

& M ವೇದಿಕೆ ಪತ್ರ-8 ನಾವು, ಭಾಷೆ ಮತ್ತು ಸಾಮಾಜಿಕ ವ್ಯವಸ್ಥೆ ಮಿತ್ರರೇ, ದಯವಿಟ್ಟು ಯೋಚಿಸಿ : 1. ನನ್ನ ಭಾಷಾಭಿಮಾನ ನಿಜವಾಗಿಯೂ ಭಾಷಾಭಿಮಾನವೇ ? ಅಥವಾ ಆಂತರಿಕವಾದ ಜಾತೀಯ ಹಿತಾಸಕ್ತಿಗಳ ಅಭಿವ್ಯಕ್ತಿಯೇ ? ಹಾಗಿಲ್ಲದಿದ್ದರೆ ನಮ್ಮಲ್ಲಿ ಯಾವುದೇ ಅಭಿಮಾನ, ಚಳುವಳಿ ಜಾತಿಯವಾಗಿ ಪರಿಣಮಿಸುವುದು ಏಕೆ ? 2. ಭಾಷೆ ಎಚಾರದ ಒಂದು ಮಾಧ್ಯಮ. ನಮ್ಮೆಲ್ಲರ ಅನಿಸಿಕೆ ಎಲ್ಲ ಮಟ್ಟದ ಜನರನ್ನೂ ಮುಟ್ಟುವುದು ಎಲ್ಲರೂ ಬಲ್ಲ ಕನ್ನಡದ ಮೂಲಕ ಮಾತ್ರ ಸಾಧ್ಯ. ಆದ್ದರಿಂದ ಸಮಾಜ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರುವ ಸಾಧ್ಯತೆಗಳು ಎಲ್ಲ ರಿಗೂ ಸಹಜವಾದ ಕನ್ನಡಕ್ಕೆ ಇವೆಯೇ ಹೊರತು ಕೇವಲ ಕೆಲವರು ಬಲ್ಲ ಇಂಗ್ಲಿಷಿಗಲ್ಲ. ಇಂಥ ಸಾಮಾಜಿಕ ಬದಲಾವಣೆಗೆ ತೀರ ಅಗತ್ಯವಾದ ಕನ್ನಡ ಶಿಕ್ಷಣ ಮಾಧ್ಯಮ, ಕನ್ನಡ ಆಡಳಿತ ಭಾಷೆಯಾಗುವುದಕ್ಕಾಗಿ ಚಳುವಳಿ ನಡೆಯುವ ಬದಲು ಕನ್ನಡಕ್ಕೆ ಅವಮಾನ ನಾಯಿತು ಎಂದೇಕೆ ಚಳುವಳಿ ನಡೆಯುತ್ತದೆ ? 2. ಒಂದು ಭಾಷೆಯ ಪ್ರಭಾವ ಎಂದರೆ ಆ ಭಾಷೆಯ 'ಸಾಹಿತ್ಯದ ಪ್ರಭಾವ ಎಂದರ್ಥ. ಇಡೀ ಭಾರತೀಯ ಸಾಹಿತ್ಯ ಹಿಂದೂ ಮತವ್ಯವಸ್ಥೆಯ ಚೌಕಟ್ಟಿನಲ್ಲೇ ರಚಿತವಾದದ್ದು. ಈ ಸಾಹಿತ್ಯ ರಚನೆ ನಮ್ಮ ಸಾಮಾಜಿಕ ವ್ಯವಸ್ಥೆಯ ಕೆಲವು ವರ್ಗದವ ರಿಂದ ಮಾತ್ರ ನಡೆದದ್ದು. ಅವರ ದೃಷ್ಟಿಯ ಮಿತಿಯಲ್ಲೇ ನಾವು ನಮ್ಮ ಸಮಾಜ ವ್ಯವಸ್ಥೆ ಯನ್ನು ನೋಡಬೇಕಾಗುತ್ತದೆ ಈ ಸಾಹಿತ್ಯ ಎತ್ತಿ ಹಿಡಿಯುವ ಮೌಲ್ಯವನ್ನು ಮತ್ತು ಸಾಹಿತ್ಯವನ್ನು ಸಾಮಾಜಿಕ ತಳಿತಕ್ಕೆ ಗುರಿಯಾದವರು ಸ್ವಾಭಾವಿಕವಾಗಿಯೇ ತುಚ್ಛೇ ಕರಿಸುತ್ತಾರೆ ಅದೇ ಸಮಾಜವ್ಯವಸ್ಥೆಯಿಂದ ಲಾಭ ಪಡೆದ ಜನ ಈ ತಿರಸ್ಕಾರವನ್ನು ಯಾವ ದೃಷ್ಟಿಯಿಂದ ನೋಡಬೇಕು ? 3. ನಮ್ಮ ದೇಶವನು ಜಾತ್ಯಾತೀತ (ಸೆಕ್ಯುಲರ್) ಎಂದಾಗ ನಿಮಗೇನನ್ನಿಸುತ್ತದೆ? ಹಿಂದೂಗಳು ಮಾತ್ರ ಅಪ್ಪಟ ಭಾರತೀಯರು ಎಂಬ ಭಾವನೆ ನಮ್ಮಲ್ಲಿಲ್ಲವೇ ? ಹಿಂದೂ ಮತ್ತು ಮುಸ್ಲಿಮ್ ವಿವಾದಗಳಿಗೂ ಮತ್ತು ಹರಿಜನ ಹಾಗೂ ಸವರ್ಣೀಯ ಹಿಂದೂ ವಿವಾದಗಳಿಗೂ ಇರುವ ವ್ಯತ್ಯಾಸ ಗಮನಿಸಿದ್ದೀರಾ? ಮೊದಲನೆಯದು ಎರಡು ಧರ್ಮಗಳೂ ತಮ್ಮ ತಮ್ಮ ಪ್ರತ್ಯೇಕತೆ ಉಳಿಸಿಕೊಳ್ಳುವ, ಪರಸ್ಪರ ಪರಕೀಯವಾಗಿ ಹಕ್ಕನ್ನು ಕಾಯ್ದು ಕೊಳ್ಳುವ ಉದ್ದೇಶದಿಂದ ಪ್ರೇರಿತವಾದದ್ದು. ಎರಡನೆಯದು ಹರಿಜನರಿಗೆ ಹಿಂದೂ ಸಮಾ ಜದ ಅಂಗವಾಗಿಯೇ ಉಳಿಯಲು ಇರುವ ಕಾತರವನ್ನು ತೋರಿಸುತ್ತದೆ. ಒಪ್ಪುತ್ತೀರಾ ? ಹರಿಜನರ ಟೀಕೆಗಳಿಗೆ, ಪ್ರತಿಭಟನೆಗಳಿಗೆ ಉಳಿದ ಹಿಂದೂಗಳು ತೋರಿಸುವ ಪ್ರತಿಕ್ರಿಯೆ ಏನು ? ಅವರ ಟೀಕಿಸುವ ಹಕ್ಕನ್ನು ಒಪ್ಪಿಕೊಳ್ಳುತ್ತಾರೆಯೇ, ಇಲ್ಲ ಅವರು ತಮ್ಮ ಸಮಾ ಜಕ್ಕೆ ಪರಕೀಯರಾಗಿಯೇ ಉಳಿಯಲು ಕಾರಣರಾಗುತ್ತಾರೆಯೇ ?