ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

4. ಹಿಂದುಳಿದವರಿಗೆ ಸರಕಾರ ಕೊಡುತ್ತಿರುವ ಸವಲತ್ತಿನ ಬಗೆಗೆ ನಾವು ಹೊಟ್ಟೆ ಕಿಚ್ಚು ಪಡುತ್ತಿದ್ದೇವೆಯೇ ? ಹಿಂದುಳಿದ ವ್ಯಕ್ತಿ ಹಕ್ಕಿನಿಂದ ಪಡೆಯುತ್ತಿರುವುದನ್ನು ನಾವು ನಮ್ಮ ಕಾರುಣ್ಯದಿಂದ ದಕ್ಕುತ್ತಿದೆ ಎಂದು ಭಾವಿಸುವುದು ಅಪರಾಧವಲ್ಲವೇ ? ನಮ್ಮ ಸಮಾನತೆಯ ಕಲ್ಪನೆ, ಆಧುನಿಕರೆಂದುಕೊಳ್ಳುವ ಪ್ರವೃತ್ತಿ ಇವುಗಳೆಲ್ಲ ನಮಗೇ ಗೊತ್ತಿಲ್ಲ ದಂತೆ ನಡೆಯುವ ಬೂಟಾಟಿಕೆಯೇ ? ಹರಿಜನರನ್ನು ನಿಜವಾಗಿಯೂ ನಮ್ಮ ಸಮಾನರೆಂದು ಒಪ್ಪಿಕೊಂಡಿದ್ದೇವೆಯೇ ? 5. ನಮ್ಮ ಮೌಲ್ಯ ಕಲ್ಪನೆಯ ದೋಷವನ್ನು ಎತ್ತಿ ಆಡುವ ವ್ಯಕ್ತಿಗಳ ಮೇಲೆ ಕತ್ತಿ ಮಸೆಯುತ್ತಿರುವುದರಿಂದ ನಮ್ಮ ನಮೌಲ್ಯ ಸರಿಯಾದದ್ದಾಗುತ್ತದೆಯೆ? ನಮ್ಮಲ್ಲಿ ಕ್ರಾಂತಿಕಾರಕವೆಂದು ಕೊಳ್ಳುವ ಪತ್ರಿಕೆಗಳೂ ಪತ್ರಕರ್ತರೂ ಇಂಥ ಸಂದರ್ಭಗಳಲ್ಲಿ ಅವರ ಸಂಪಾದಕಿಯ ಧೋರಣೆಗಳಿಗೆ ವಿರೋಧವಾದ ಅಭಿಪ್ರಾಯಗಳುಳ್ಳ ಪತ್ರಗಳನ್ನು ಏಕೆ ಪ್ರಕಟಿಸುವುದಿಲ್ಲ ? ಪತ್ರಿಕೆಗಳಲ್ಲಿ, ಭಾಷೆಯ ಬಗ್ಗೆ ಒಂದು ವಿಶಿಷ್ಟ ಸಂದರ್ಭದಲ್ಲಿ ಮಾಡಿದ ಟೀಕೆ, ಅಕ್ರಮ ಪ್ರವೇಶದಂತಹ ಭ್ರಷ್ಟಾಚಾರ ಅನ್ಯಾಯಗಳಿಗಿಂತ ಹೆಚ್ಚಿನ ಸಾಮಾಜಿಕ ಅನ್ಯಾಯ ಎನಿಸುತ್ತದೆಯೆ ? ನಮ್ಮ ಪತ್ರಿಕಾ ವರದಿಗಾರರಿಗೆ ಬೇರೆ ಸಾಮಾಜಿಕ ಅನ್ಯಾಯ ಗಳ ಬಗ್ಗೆ ಸ್ವತಃ ಹುಡುಕಿ ವರದಿ ಮಾಡಲು ಏನೂ ಇಲ್ಲವೆ? ನಮ್ಮ ಪತ್ರಿಕೆಗಳು ರೂಢ ವ್ಯವಸ್ಥೆಯನ್ನು ಬಲಗೊಳಿಸುವ ಅಸ್ತ್ರಗಳೆ? 6. ಕನ್ನಡ ಕೂಡ ಸರಿಯಾಗಿ ಬರದ, ಕಲಿಯಲು ಆಸಕ್ತಿಯೂ ಇಲ್ಲದ ವಿದ್ಯಾರ್ಥಿಗಳಿಂದ ನಮ್ಮ ಭಾಷೆಯ ಬೆಳವಣಿಗೆ ಆದೀತೆಂದು ಅನಿಸುತ್ತದೆಯೆ ? ಇಂಥ ವಿದ್ಯಾರ್ಥಿಗಳ ಬಗೆಗೆ ನಿಮ್ಮ ಪ್ರತಿಕ್ರಿಯೆ ಏನು ? 7. ನಮ್ಮ ವಿದ್ಯಾರ್ಥಿ ಶಕ್ತಿ ಸಮಾಜಕ್ಕೆ ತರುತ್ತಿರುವ ಒತ್ತಡ ಎಂಥದು ? ಸಾಕಷ್ಟು ಸಾಮಾಜಿಕ ಅನ್ಯಾಯಗಳು ಎದುರೇ ಇದ್ದರೂ ಅವುಗಳಿಗೆ ಕುರುಡಾಗಿ ಜಾತೀಯ ಭಾವೋದ್ರೇಕಗಳಿಂದ ಪ್ರೇರಿತವಾಗಿಯೆ ವಿದ್ಯಾರ್ಥಿ ಚಳವಳಿ ಏಕೆ ನಡೆಯುತ್ತಿದೆ ? ನಿಮ್ಮ ಸಲಹೆ ಪ್ರತಿಕ್ರಿಯೆಗಳನ್ನು ವೇದಿಕೆ' 222, ಧರ್ಮ ಛತ್ರಂ ರೋಡ್, ಚಿಕ್ಕ ಬಳ್ಳಾಪುರ, 562101 ಇಲ್ಲಿಗೆ ಕಳುಹಿಸಿ ಸಹಕರಿಸಿ, - + ಯು.ಎಸ್, ಪ್ರಿಂಟರ್, ಮೈಸೂರು.