ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೧೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಯಸಾರ 165 ಈತನು ತಾನು ಕೇವಲ ಶಿವಸಂಕೀರ್ತನವನ್ನಲ್ಲದೆ ಮನುಬಸ್ತುತಿಯನ್ನು ಮಾಡುವನಲ್ಲವೆಂದು ( ಮನುಜಸ್ತುತಿಯ೦ ನೆಯೆ ಬಿಟ್ಟು ಲೀಲೆಯಿಂ ಜಗವರಿಯಲಿ ಸುರಂಗಕವಿ ನಾಲಗೆಯಂ ಗಿರಿಶಲಗೆ ಮಾಯಿದಂ ” ಎಂಬ ವಾಕ್ಯದಲ್ಲಿ ಹೇಳಿಕೊಂಡಿ ರುತ್ತಾನೆ. ತ್ರಿಷಷ್ಟಿ ಪುರಾತನ ಚಾರಿತವು ಲೈಂಗ್ಯಪುರಾಣಾಂತರ್ಗತವಾದುದೆಂದೂ ಆ ಚರಿತ್ರೆಯನ್ನು ಮೊದಲು ಉಪಮನ್ಯು ಮುನೀಶ್ವರನು ಕಣಾದನಿಗೆ ವಿವರಿಸಿದನೆಂ ದೂ ಮುಂದಣಪವ್ಯಗಳು ತಿಳಿಸುತ್ತವೆ. ಕಂ|| ಪದೆದವಿರೆ ಲೈಂಗಪುರಾ | ಇದೊಳಿರ್ದಂತಭವನಿತ್ಯ ವರಮತಿಯಿಂ ಭೋ || ವಿದಿತಪುರಾತನಚರಿತೆಯ || ನುದಿತೋತೃವದಿಂ ಸುರಂಗವರದಂ ಸೇರಿ || ಧರೆಯೊಳವತ್ತುಮೂವಕ | ಪುರಾತನರ ಮೆರೆದ ಪರಿಯ ನುಸವನ್ನು ಮುನೀ || ಶರನಾಕಣಾವಗಂ ವಿ | ಸರಿಸಿದುದಂ ಕವಿಸುರಂಗವರದಂ ಪೇಟಿ೦ || ಕವಿಯು ತನ್ನ ಕಾವ್ಯದಲ್ಲಿ ತನ್ನ ಹಿಂದಿನವರಾದ ಸೋಮನಾಥ, ಶಂಭು, ಹಂಸ, ಬಸವ, ಚೆನ್ನಬಸವ ಪ್ರಭುರಾಯ ಇಭವಕ್ಕೆ), ವಾಣಿ ಎಂಬ ಶೆವಕವಿಗೆ ಳನ್ನು ಸ್ಫೂತುವಡಿರುವುದಲ್ಲದೆ, ತನ್ನ ಕಾವ್ಯವನ್ನೂ ಕವಿತಾಚಾತುಗ್ಯವನ್ನೂ ಮುಂದೆ ತಿಳಿಸುವಂತೆ ಶ್ಲಾಘಿಸಿಕೊಂಡಿರುತ್ತಾನೆ, ಉ|| ಭಲ್ಲಟನೋಜ ಬಾಣನ ಜಸಂ ಭವಭೂತಿಯ ಸಂದ ಬಿನ್ನಣ? | ಬಿಲ್ಲಣನ ಭಾರವಿಯ ರೀತಿ ಮಯೂರನ ಬಂಧಗೌರವಂ || ಮಲ್ಲಣನುಚ್ಛಭಕ್ತಿ ವರಮಾಘನ ಜಾಣ್ಣುಡಿ ದಂಡಿಯೊಳು ನಾ || ಗಂಭಕಾಳಿದಾಸನ ರಸಂ ನೆಲಸಿರ್ಕೆ ವದೀಯಕಾವ್ಯದೊಳೆ || ಕಂ|| ವರ್ಣಕ ವಸ್ತುಕ ಕವಿಜನ || ಕರ್ಣಾಭರಣಂ ಶಿವೈಕಸಮುದಯಪೀಯ || ಪಾರ್ಣವಚಂದ್ರನನಿಪ್ಪಂ | ಕರ್ಣಾಟಕವೀಂದ್ರ ನಮಮ ಸುಕವಿ ಸುರಂಗಂ ||