ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೨೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

200 ಪದ್ಯಸಾರ 46. ತುಂಗಭದ್ರಾ ನದಿಯ ವರ್ಣನೆ. ಈ ನದೀವರ್ಣನೆಯು ಸೋಮರಾಜನೆಂಬ ಸೀರಶೈವಕವಿಯಿಂದ ರಚಿಸ ಅಟ್ಟ ಶೃಂಗಾರಸಾರವೆಂಬ ಗ್ರಂಥದಲ್ಲಿ ದೊರೆಯುತ್ತದೆ ಇದು ಕುಮಾರಸಾಲ ಘರ್ಜನ ಅಥವಾ ಉದ್ಧಟನಚರಿತ್ರೆಯಾದುದರಿಂದ ಈ ಗ್ರಂಥಕ್ಕೆ ಉದ್ಭಟ ಕಾವ್ಯ ಎಂಬ ಹೆಸರೂ 'ಉಂಟು ಇದರ ಬಂಧವು ಲಲಿತವಾಗಿದೆ, ಇವನ ಪಿತಪಿತಾಮಸಪಿತಾಮಹರಾದ ಇಂದುಶೇಖರ ರಾಯಣ ತಿರುಮಲರೆಂಬರು ಚಂದ್ರವಂಶೋತ್ಪನ್ನ ರಾದ ರಾಜರಾಗಿದ್ದರೆಂದು ಹೇಳಿಕೊಂಡಿರುವನಾದುದರಿಂದ ಈತನೂ ರಾಜನಾಗಿರಬಹುದು, ತಾನು ಕೃಂಗಾರಸಾರಗ್ರಂಥವನ್ನು ಶಾಲಿವಾ ಹನಶಕ 1144 ಚತುಭಾನುವಿನಲ್ಲಿ ಕ್ರಿ ಶ. 1222) ಬರೆದಂತೆ ಅದರಲ್ಲಿ ಹೇಳಿ ಕೊಂಡಿರುತ್ತಾನೆ, |೧೦೧೫) ಕol) ಸುಳಿಯಿಂ ಬುದು ದದಿಂ ಮಾ | ಇ೪ ಸೊಂಪಿಂ ಕಿವಿದೆರೆಗಳ ಚಿಂದೆ ಸಮು || ಜ್ಞ ಆಶೀಕರತತಿಯಿಂ ಕೆ | ಣೋ೪ಸಿದುದಾ ತುಂಗಭದ್ರೆ ತುಳ್ಳಾತೆ ಸೊಗಸು ಲಲಿತ ರಗಳ. ಮಡುಗಳೊಳೆ ಪೋಣಿ ಮುರಿಗೊಂಡೇರಿ ಸುಳಿಗಳಿ೦| ಬಿಡದೆ ತೀಡುವ ತಂಬೆಲರಿನೊಗೆವ ವಳಿಗಳಿ೦|| ತೆರೆವೊಯ್ಲಿನಿಂ ಚಿಮ್ಮುವಂಬುಕಣಜಾಲದಿಂ| ಭರದಿ ತಾಂಗಲೆ ಖಾಂಗಳೊಗೆವ ಕಲ್ಲೋಲದಿ೦ || ವೀಟಿಯ ಪೊಯಿಳೆಡೆ ಸಿಟ್ಟು ವೆಳಮಾವಳಿ೦| ವೀಚಿಗಳನೊಡೆದುರ್ಬಿ ಪರಿವ ಬಲ್ಮೀನ೪೦ || ಪಟನೆಗೆದು ಮಗುಚೇಚಿವ ಚಿಚಿವಾನೀಕದಿಂ | ಲಟಕಟಿಸಿ ನಲಿದಾಡುತಿರ್ಪ ನವಕದಿಂ|| ಕಂಜಮಿತ್ರನ ಬೆಂಗದಿರ್ಗಳಳವಂ ಕಂಡು | ಮಂಜುಳತರಾನಂದವುಂ ನಾಡೆ ಕೈಕೊಂಡು | ನಲಿದು ಕೂಗುವ ಚಕುಯುತಕಂಜಪುಂಜದಿಂ| ವಿಲಸದುಪ್ಪರ್ತ ವಿಮಲಾವರ್ತಪುಂಜದಿಂ|| - ಪೊಸತೆರೆಗಳೆಳೆ ಸಿಲ್ಲಿ ತೇಲ್ಪ ಹಂಸಂಗಳಿ೦| ಮಿಸುಪ ಮಡಗಳೆಳಮರ್ದ ಬಾಲಹಂಸಂಗಳಿಲ್ಲ !