ಪುಟ:ಪಾಲಿಗೆ ಬಂದ ಪಂಚಾಮೃತ.pdf/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪಾಲಿಗೆ ಬಂದ ಪಂಚಾಮ್ರತ

7

ಎಷ್ಟು ನಿಮಿಷ ಹಾಗೆ ನಿಂತಿದ್ದಳೊ.
ನಡೆದು ಬರುತ್ತಿದ್ದ ಅಂಚೆಯವನು ಆಕೆಗೆ ಕಾಣಿಸಿದ.
'ಹನ್ನೆರಡಾಯಿತು ಹಾಗಾದರೆ.'
ಸುನಂದೆಯ ತಾಯಿಮನೆಯಿಂದ ಕಾಗದ ಬರುತ್ತಿದ್ದುದು ಎಂದಾದರೊಮ್ಮೆ.
ಬಂದಾಗಲೆಲ್ಲ ಅದರಲ್ಲಿರುತ್ತಿದ್ದುದು ಗೋಳಿನ ಕಥೆ. 'ನಿನ್ನ ತಂಗಿಗಿನ್ನೂ ವರ
ಹುಡುಕುತ್ತಲೇ ಇದ್ದೇವೆ'...'ಒಂದು ಸಂಬಂಧ ಮುರಿದು ಹೋಯಿತು'...'ಎಲ್ಲಾ
ದರೂ ಪ್ರಯತ್ನ ಮಾಡಬೇಕೂಂತ ನಿನ್ನ ಯಜಮಾನರಿಗೆ ಹೇಳು'...ಸುನಂದೆಗೆ ಆ
ವಾಕ್ಯಗಳೆಲ್ಲ ಕಂಠಪಾಠವಾಗಿದ್ದುವು. ಅದಲ್ಲದೆ ಎಂದಾದರೂ ಬರೆಯುತ್ತಿದ್ದವರು,
ಆಕೆಯ ಒಬ್ಬಿಬ್ಬರು ಗೆಳತಿಯರು. ಗಂಡನ ಕಾಗದಗಳೆಲ್ಲ ಆತನ ಕಚೇರಿಗೆ ಬರು
ತ್ತಿದ್ದುವು.
ಆದರೂ ಅಂಚೆಯವನು ತಮ್ಮ ಮನೆಯನ್ನು ಹಾದು ಹೋಗುವ ವರೆಗೂ
ಸುನಂದಾ ಬಾಗಿಲಲ್ಲೆ ನಿಂತಳು. ಆ ಬಾಗಿಲಿಗೆ ಅಷ್ಟಾಗಿ ತಿರುಗಿ ಅಭ್ಯಾಸವಿಲ್ಲದ ಅಂಚೆ
ಯವನು ಅತ್ತ ನೋಡಲೇ ಇಲ್ಲ.
ಆತ ಕಣ್ಣಿನಿಂದ ಮರೆಯಾಗುವವರೆಗೂ ಬೀದಿಯತ್ತ ನೋಡುತ್ತಲಿದ್ದ
ಸುನಂದಾ, ಬದುಕಿನ ನಿಯಮಕ್ಕೆ ಅನುಸಾರವಾಗಿ ಒಂದು ತುತ್ತು ಅನ್ನ ತಿನ್ನಲೆಂದು
ಅಡುಗೆ ಮನೆಗೆ ನಡೆದಳು.
* * * *
ಊಟವಾದ ಮೇಲೆ,ಮಗು ಏಳುವುದಕ್ಕೆ ಮುಂಚೆಯೊಂದು ಸಣ್ಣ ನಿದ್ದೆ.
ಹೊತ್ತು ಕಳೆಯಲು ಅದೊಳ್ಳೆಯ ಸಾಧನ...
... ಆ ದಿನಗಳಲ್ಲಿ ಎಂಥೆಂಥ ಆಸೆಗಳಿದ್ದುವು. ಓದಿದ ಹುಡುಗಿಯಾದ ವಿದ್ಯಾ
ವತಿಯಾದ ತಾನು ಸುಸಂಸ್ಕೃತ ಜೀವನವನ್ನು ನಡೆಸಬೇಕೆಂದು ಸುನಂದಾ ಅಂದು
ಕೊಂಡಿದ್ದಳು.
ಆಕೆಯೊಂದು ರಾತ್ರೆ ಗಂಡನನ್ನು ಕೇಳಿದ್ದಳು:
“ನಾವು ಕಲ್ ಚರ್ಡ ಆಗಿರಬೇಕು ಅಲ್ವಾ?"
ಆಗ ಬಂದಿದ್ದ ಉತ್ತರ:
“ಅದೇನೇ ಕಲ್ ಚರ್‍ಡ್ ಅಂದರೆ?”
ಆಕೆಯನ್ನು ದಿಗಿಲುಗೊಳಿಸಿದ್ದು ಉತ್ತರ ಮಾತ್ರವಲ್ಲ__ಅದರ ಜತೆಗಿದ್ದ
ವ್ಯಂಗ್ಯ ನಗೆ.
ಏನು ಸಂಸ್ಕೃತಿ ಎಂದರೆ? ಸ್ಪಷ್ಟ ಉತ್ತರವನ್ನು ಕೊಡುವುದು ಸುನಂದೆಯಿಂದ
ಸಾಧ್ಯವಾಗುತಿತ್ತೋ ಇಲ್ಲವೋ....
ಆದರೆ ಆಕೆಗೆ ಇಷ್ಟು ಗೊತ್ತಿತ್ತು: ತಾವೆಲ್ಲ ಒಳ್ಳೆಯವರಾಗಿರಬೇಕು; ಒರಟು
ಮಾತನಾಡಬಾರದು; ನಯ ವಿನಯದಿಂದ ವರ್ತಿಸಬೇಕು; ಒಂದಿಷ್ಟು ಪುಸ್ತಕಗಳು