ಪುಟ:ಪಾಲಿಗೆ ಬಂದ ಪಂಚಾಮೃತ.pdf/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಪಾಲಿಗೆ ಬಂದ ಪಂಚಾಮೃತ

101

ಹಾಗೇ ಇರ್ತೀನೀಂತ ಮಾತುಕೊಡಿ.”
ಕಾವು ಆರಿದ್ದ ಪುಟ್ಟಣ್ಣನಿಗೆ ಒಮ್ಮೆಲೆ ಎಚ್ಚರವಾಯಿತು. ಕೆಟ್ಟ ಕನಸು ಬಿದ್ದವ
ನಂತೆ ಆತ ಮೈಕೊಡವಿದ. ಸುನಂದಾ ಭಯಗೊಂಡಳು. ಹಿಡಿತ ತಪ್ಪಿತು. ಮತ್ತೆ
ತನ್ನ ಒಡವೆಯನ್ನು ತಬ್ಬಿಕೊಂಡಳು. ಆತ ಒರಟಾಗಿ ಕ್ರೂರವಾಗಿ ಆ ಎರಡೂ ಕೈ
ಗಳನ್ನು ತಳ್ಳಿ ಹಾಕಿದ.
... ಪುಟ್ಟಣ್ಣ ಮಂಚದಿಂದೆದ್ದು, ಕಿಟಿಕಿಯ ಬಳಿ ಹೋಗಿ, ಹೊರಗಿನ ಆಕಾಶ
ವನ್ನು ನೋಡುತ್ತ ನಿಂತ...
ಸುನಂದಾ ದಿಂಬನ್ನು ಬಾಯಿಗೊತ್ತಿಕೊಂಡು ಬಿಕ್ಕಿ ಬಿಕ್ಕಿ ಅತ್ತಳು.
ಪುಟ್ಟಣ್ಣನಿಗೆ ತನ್ನ ಬಗೆಗೆ ಹೇಸಿಕೆ ಎನಿಸಿತು. ತನಗೆ ಅವಮಾನವಾಗಿತ್ತು.
ತಾನು ದುರ್ಬಲನಾಗಿ ಹೋದ ಆ ವಿಷಘಳಿಗೆ...ಥೂ...
ಅಳುತ್ತಲೇ ಇದ್ದಳು ಸುನಂದಾ. ಗಂಡ ಬಂದು, ಅಳಬೇಡವೆಂದು ಬೆನ್ನಿನ
ಮೇಲೆ ಕೈಯಾಡಿಸುವನೆಂಬ ಆಸೆಯೇನೂ ಆಕೆಗೆ ಈಗ ಇರಲಿಲ್ಲ. ಆದರೂ ಆಕೆ
ಅತ್ತಳು.
“ಎದ್ದು ಒಳಗೆ ಹೋಗು...”
—ಹಿಮದ ಗಡ್ಡೆಯಂತಹ ಮೂರು ಪದಗಳು ಬಂದು ಆಕೆಯ ಕಿವಿಗೆ
ಬಡೆದುವು.
ತಣ್ಣಗಾಗಿ ಆಕೆ ಮುದುಡಿ ಬಿದ್ದಳೇ ಹೊರತು ಏಳಲಿಲ್ಲ.
ಮತ್ತೆ ಹಿಮಗಡ್ಡೆಯ ನಾಲ್ಕು ತುಣುಕುಗಳು-ಬಂದುವು:
“ಎದ್ದು ಒಳಗೆ ಹೋಗು ಅಂದೆ.”
ಸುನಂದಾ ನಿಧಾನವಾಗಿ ಎದ್ದು, ಬಿಕ್ಕಿ ಬಿಕ್ಕಿ ಅಳುತ್ತ, ಕೊಠಡಿಯಿಂದ ಹೊರಕ್ಕೆ
ಹಜಾರದೊಳಕ್ಕೆ ಹೋದಳು.
ಮರದ ಕೊರಡುಗಳು ಜತೆಯಾಗಿದ್ದುವು. ಆದರೆ ಬಿರುಗಾಳಿ ನಿಂತಿರಲಿಲ್ಲ.
ಅದು ಬೀಸಿತು-ಮತ್ತೂ ಬಲವಾಗಿ. ಆ ಒತ್ತಡಕ್ಕೆ ಸಿಲುಕಿ ಕೊರಡುಗಳು ಮತ್ತೊಮ್ಮೆ
ಬೇರೆಯಾದುವು-ಮತ್ತೊಮ್ಮೆ.

೧೬

ಮಾರನೆಯ ದಿನ ಬೆಳಿಗ್ಗೆ ಸುನಂದಾ ಬೇಗನೆ ಎದ್ದು, ಗಂಡನ ಮುಖ ನೋಡ
ಬೇಕೆಂದು ಬಾರಿ ಬಾರಿಗೂ ಯತ್ನಿಸಿದಳು. ಕಾಫಿ ಮಾಡಿ ವಿನೀತಳಾಗಿ ಕೊಂಡೊ
ಯ್ದಳು. ಸ್ನಾನದ ಮನೆಗೆ ಆತನನ್ನು ಹಿಂಬಾಲಿಸಿ ಟವೆಲು ಒಯ್ದಿಟ್ಟಳು.