ಪುಟ:ಪಾಲಿಗೆ ಬಂದ ಪಂಚಾಮೃತ.pdf/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಪಾಲಿಗೆ ಬಂದ ಪಂಚಾಮೃತ

103

ಸಾಹಸಗಳನ್ನೆಲ್ಲ ಚಿತ್ರವಿಚಿತ್ರವಾಗಿ ಬಣ್ಣಿಸುತ್ತಿದ್ದ. ಪಟ್ಟಣ್ಣ ಅದನ್ನು ಕೇಳಿ ನಗು
ತ್ತಿದ್ದನೇ ಹೊರತು, ಹೆಚ್ಚಿನ ಆಸಕ್ತಿ ತೋರುತ್ತಿರಲಿಲ್ಲ.
"ನಿಮ್ಮ ಮನೇ ಆಕರ್ಷಣೆ ಭಾರೀಂತ ತೋರುತ್ತೆ!"
—ಎಂದಿದ್ದ ಒಬ್ಬ ಜತೆಗಾರ ಒಮ್ಮೆ.
ಆ ವಿಷಯದಲ್ಲಿ ಇತರರ ತಿಳಿವಳಿಕೆ ತಪ್ಪಾಗಿತ್ತು. ಹಾಗಿತ್ತೆಂದು ಒಂದು
ರೀತಿಯ ಸಂತೋಷ ಪುಟ್ಟಣ್ಣನಿಗೆ. ತಾನು ಇತರರಿಗಿಂತ ಭಿನ್ನನಾಗಬೇಕು; ಇತರರಿಗೆ
ತಾನು ಒಗಟಾಗಬೇಕು;ತಾನೆಂದಿಗೂ ಸಾಮಾನ್ಯನಾಗಬಾರದು-ಇದು ಆತನಿಗಿದ್ದ ಆಸೆ.
ದೇಹಕ್ಕೆ ಸಂಬಂಧಿಸಿದ ಅವಶ್ಯಕತೆಯನ್ನು ಸದಾ ಕಾಲವೂ ತಡೆಗಟ್ಟಬೇಕೆಂದು
ಆತ ಯೋಚಿಸಿದ್ದನೆಂದಲ್ಲ. ಅದರ ಪೂರೈಕೆ ಆತನಿಗೆ ಕಷ್ಟವಾಗಿರಲಿಲ್ಲ. ಆದರೆ,
ಸುನಂದೆಯನ್ನು ಮಾತ್ರ ಹಾಸಿಗೆಯ ಒಡನಾಡಿಯಾಗಿ ಮತ್ತೆ ಒಪ್ಪಿಕೊಳ್ಳಲು ಆತ
ಸಿದ್ಧನಿರಲಿಲ್ಲ. ಅದಕ್ಕೆ ಕಾರಣ, ಸಂಸಾರದ ಸಂಕೋಲೆ ಮತ್ತೆ ತನ್ನನ್ನು ಬಲವಾಗಿ
ಬಿಗಿಯಬಹುದೆಂಬ ಭೀತಿ. ಹಾಗೆಯೇ, ತನ್ನ ಜೀವನದ ಮೇಲೆ ಮನೆಯಾಕೆಗೆ ಯಾವ
ಹಿಡಿತವೂ ಇರಬಾರದೆಂಬ ಆಸೆ.
...ಅಂಥಾದ್ದರಲ್ಲಿ ನಿನ್ನೆ ರಾತ್ರಿ ಎಂತಹ ಪ್ರಮಾದವಾಗಿ ಹೋಯಿತು!
ಪುಟ್ಟಣ್ಣನೆಂದುಕೊಂಡ:
'ಈ ದೌರ್ಬಲ್ಯವೇ ನನ್ನ ಪಾಲಿನ ಶನಿ. ನಾನಿದನ್ನು ಜಯಿಸಲೇಬೇಕು.
ಮತ್ತೊಮ್ಮೆ ಹೀಗಾಗಬಾರದು.'
ಒಳದನಿ ನಕ್ಕಿತು.
'ಮತ್ತೊಮ್ಮೆಯ ಮಾತು! ನಿನ್ನೆಯದೇ ಸಾಲದೇನೋ? ಅಂತೂ ನಿನ್ನ
ಸಂಸಾರದಲ್ಲಿ ಚಿಳ್ಳೆ ಪಿಳ್ಳೆಗಳು ಹೆಚ್ಚುತ್ತವೆ!'
ಆತನ ಕೋಪಕ್ಕೆ ಅದೇ ಕಾರಣ-ತಾನು ಮತ್ತೊಮ್ಮೆ ತಂದೆಯಾಗಬಹುದು
ಎಂಬ ಭೀತಿ.
ಹೀಗೆ ಕೈಗೊಂದು ಕಾಲಿಗೊಂದು ಬೇಡಿ ಹಾಕಿಕೊಳ್ಳುತ್ತಲೇ ಹೋದರೆ, ತಾನೂ
ಪ್ರತಿ ತಿಂಗಳ ಸಂಪಾದನೆಯಿಂದ ಸಂಸಾರ ಸಾಗಿಸುವ ಬಡ ಗುಮಾಸ್ತೆಯಾಗಿಯೇ
ಸಾಯುವುದು ಖಂಡಿತ.
....ಕುಳಿತು ಬೇಸರವಾಗಿ ಪುಟ್ಟಣ್ಣ ಹೊರಬಂದ. ದಂಡಿನ ಕಡೆಯಿಂದೊಂದು
ಬಸ್ಸು ಬಂತು. ಅದನ್ನೇರಿ ಗಾಂಧಿ ಬಜಾರಿಗೆ ಹೋಗಿ, ಊಟದ ಬದಲಾಗಿ ತಿಂಡಿ
ತಿಂದು ಕಾಫಿ ಕುಡಿದ. ಬೇರೊಂದು ಬಸ್ಸು ಹತ್ತಿ ಮಾರ್ಕೆಟು ತಲಪಿದ.
ಸಂಜೆಯವರೆಗೆ ಹೇಗೆ ಹೊತ್ತು ಕಳೆಯಬೇಕೆನ್ನುವುದೇ ಆತನಿಗೆ ಸಮಸ್ಯೆ
ಯಾಯಿತು. ಅಲ್ಲೇ ಸಮೀಪದಲ್ಲಿದ್ದ ಒಂದೇ ಒಂದಾದ ಚಲಚ್ಚಿತ್ರ ಮಂದಿರವನ್ನು
ಹೊಕ್ಕು ಯಾವುದೋ ಮ್ಯಾಟಿನಿ ನೋಡಿದ. ಪ್ರಣಯ-ಶೋಕ ಸಂತಾಪ-ಪ್ರತೀ
ಕಾರ-ಹಾಡು-ಮತ್ತೆ ಪ್ರಣಯ... ನೋಡುವುದನ್ನು ಬಿಟ್ಟುಕೊಟ್ಟು, ಕುಳಿತಲ್ಲೆ ಎವೆ