ಪುಟ:ಪಾಲಿಗೆ ಬಂದ ಪಂಚಾಮೃತ.pdf/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



106

ಕನಸು

ಯಾವಳೋ ಸೂಳೆಗೆ ಕೊಟ್ಟು, ಕುಡಿದು ತೂರಾಡ್ಕೊಂಡು ಹಟ್ಟಿಗೆ ಬಂದು, ನನ್ನ
ಮೇಲೆ ಅಧಿಕಾರ ತೋರಿಸ್ತಾನೆ. ಹೋಗಲೇ..."
ಮರದ ಕೊರಡಿನಿಂದ ಹೊಡೆತ-ಮಗುವಿನ ಅಳು-ಗಡಿಗೆ ಒಡೆದ ಸದ್ದು...
ಮತ್ತೆ ಆ ಹೆಂಗಸಿನ ರೋದನ.
ಅಲ್ಲಿ ರಹಸ್ಯವಿರಲಿಲ್ಲ; ನಾಚಿಕೆ ಇರಲಿಲ್ಲ ಆಕೆಗೆ; ಹೊರಗಿನ ಜನ ಕೇಳುವರು,
ನಗುವರು, ಎಂಬ ಭಯವಿರಲಿಲ್ಲ.
....ಸುನಂದಾ ಅಡುಗೆಮನೆಯಲ್ಲಿ ಕಿಟಿಕಿಯ ಬಳಿನಿಂತು ಅದನ್ನೆಲ್ಲ ನೋಡು
ತ್ತಿದ್ದವಳು, ತುಂಬಾ ಬೇಸರಪಟ್ಟು, ಆ ರೋದನ ಕೇಳಿಸದಿರಲೆಂದು ಕಿಟಿಕಿ
ಮುಚ್ಚಿದಳು.
ಹಾಗೆ ಮುಚ್ಚಿದರೂ ಸ್ವರ ಮಾತ್ರ ಹೇಗೋ ನುಸುಳಿ ಒಳಗೆ ಸಂಚರಿಸಿತು.
ಸುನಂದಾ ಹಾಸಿಗೆಯ ಮೇಲೆ ಮಲಗಿಕೊಂಡಳು. ಉಸಿರು ಕಟ್ಟಿದ ಹಾಗಾ
ಯಿತು. ಸ್ವಲ್ಪ ಹೊತ್ತು ಬಾಯಿ ತೆರೆದೇ ಆಕೆ ಮಲಗಿದಳು.
ಆದರೆ ಕಿವಿಗಳೂ ತೆರೆದಿದ್ದುವು. ಹೊರಗಿನಿಂದ ಬರುತ್ತಿದ್ದ ಹೆಣ್ಣಿನ ರೋದನದ
ಧ್ವನಿ ಒಳಗೆಲ್ಲ ಸುತ್ತಾಡಿ ಆಕೆಯ ಕಿವಿಗಳನ್ನು ಹೊಕ್ಕಿತು.


೧೭

ಸರಸ್ವತಿಯ ಹುಟ್ಟುಹಬ್ಬ ಸಮೀಪ ಬಂದಂತೆ ಸುನಂದಾ, ಬದುಕಿನಲ್ಲಿ ಹೆಚ್ಚು
ಉತ್ಸಾಹ ತೋರಿದಳು. ಪುಟ್ಟ ಸರಸ್ವತಿ ಈಗ ತೊದಲು ಮಾತನಾಡುತ್ತಿದ್ದಳು.
ತನ್ನಿಂದ ದೂರವಾಗಿಯೇ ಇರುತ್ತಿದ್ದ ಆಪ್ಪನಿಗಿಂತಲೂ 'ಅಮ್ಮಾ' ಪದವೇ ಹೆಚ್ಚು
ಇಷ್ಟವಾದುದು ಆಕೆಗೆ. ತಲೆಗೂದಲು ಗುಂಗುರು ಗುಂಗುರಾಗಿ ಬೆಳೆಯುತ್ತಿತ್ತು.
ಮುಖ ದುಂಡಗೆ ಮುದ್ದಾಗಿತ್ತು.
ಇನ್ನು ಕೆಲ ತಿಂಗಳಲ್ಲೇ ತಾನೂ ತಾಯಿಯಾಗುವ ನಿರೀಕ್ಷೆಯಲ್ಲಿದ್ದ ಕುಸುಮಾ
ಹೇಳುತ್ತಿದ್ದಳು:
“ಈ ಮೂಗು ಕಣ್ಣು ಎಲ್ಲಾ ನಿಮ್ಮ ಹಾಗೆಯೇ ಕಣ್ರೀ."
ತನ್ನ ಹಾಗೆಯೇ ಮಗು. ಹೆಣ್ಣು-ತನ್ನ ಹಾಗೆಯೇ.
ಆದರೆ ಅದರ ಬಾಳ್ವೆ ಮಾತ್ರ ತನ್ನದರ ಹಾಗಾಗಬಾರದು.
... ರಾಧಮ್ಮನ ಸಖ್ಯ, ಮನುಷ್ಯತ್ವವನ್ನು ಅವಳಲ್ಲಿ ಜಾಗೃತಗೊಳಿಸುತ್ತಿತ್ತು;
ಕುಸುಮಳ ಸ್ನೇಹ, ತಾನೂ ವಿದ್ಯಾವತಿ ಎಂಬ ಆರಿವನ್ನು.
ತನಗಿಂತಲೂ ಹೆಚ್ಚು ಓದಿದ್ದಳು ಕುಸುಮಾ. ಆ ಓದು ಆಕೆಯನ್ನು ಮತ್ತಷ್ಟು