ಪುಟ:ಪಾಲಿಗೆ ಬಂದ ಪಂಚಾಮೃತ.pdf/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪಾಲಿಗೆ ಬಂದ ಪಂಚಾಮೃತ

107

ವಿನಯಶೀಲಳಾಗಿ ಮಾಡಿತ್ತು. ಒಳ್ಳೆಯ ಪುಸ್ತಕ ಸಂಗ್ರಹವಿತ್ತು ಅವರ ಮನೆಯಲ್ಲಿ.
ಇಂಗ್ಲಿಷ್ ಪುಸ್ತಕಗಳೇ ಹೆಚ್ಚು_ಕೆಲವು ಕನ್ನಡ, ಸುನಂದಾ ಒಂದೊಂದಾಗಿ ಅವು
ಗಳನ್ನು ಓದಲು ತಂದಳು. ಮಗು ನಿದ್ದೆ ಹೋಗಿದ್ದಾಗ ತಾನು ಒಬ್ಬಳೇ ಉಳಿದಾಗ
ಆಕೆ ಓದಿದಳು. ಬರೆಹಗಾರ ಸೃಷ್ಟಿಸಿದ್ದ ಪಾತ್ರಗಳಲ್ಲಿ ತನ್ನ ಪಡಿನೆಳಲನ್ನು ಕಾಣ
ಲೆತ್ನಿಸುವುದು, ಕಾಲ್ಪನಿಕ ವ್ಯಕ್ತಿಗಳು ವಾಸ್ತವವೇ ಎನ್ನುವಂತೆ ತೋರುತ್ತಿದ್ದ ಲೋಕ
ದಲ್ಲಿ ವಿಹರಿಸುವುದು, ಆಕೆಗೆ ಇಷ್ಟವಾಯಿತು. “ಒಂಟಿ ಜೀವಕ್ಕೆ ಪುಸ್ತಕದಂತಹ
ಸ್ನೇಹಿತ ಇನ್ನೊಂದಿಲ್ಲ'_ಎಂಬ ಮಾತಿನ ಸತ್ಯತೆಯನ್ನು ಕಾಣಲು ಆಕೆಗೆ ಕಷ್ಟವಾಗ
ಲಿಲ್ಲ. ಆದರೆ, ಗಂಡನ ಕೆಂಗಣ್ಣಿನ ಶಾಖ ಪುಸ್ತಕಕ್ಕೆ ತಗಲದಂತೆ ಮಾತ್ರ, ಆಕೆ ಎಚ್ಚರ
ವಹಿಸಿದಳು.
ಕನ್ನಡ ಕಥೆ ಪುಸ್ತಕಗಳನ್ನು ರಾಧಮ್ಮನೂ ಕೊಂಡೊಯ್ದು ಓದಿದರು. ಆದರೆ
ಆ ಓದು ವಿಲಂಬವಾಗುತ್ತಿತ್ತು. ತಿಂಗಳಿಗೆ ಮೂರು ದಿನಗಳ ರಜಾ ಪಡೆದಾಗ ಮಾತ್ರ,
ಆ ಅವಧಿಯಲ್ಲಿ ಒಂದು ಇಡೀ ಕಥೆ ಪುಸ್ತಕವನ್ನು ಅವರು ಓದುತ್ತಿದ್ದರು.
ಸುನಂದೆಯ ಬದುಕೂ ಒಂದು ಸ್ವರೂಪ ಪಡೆದಿತ್ತು ಈಗ, ಗಂಡನ ದುರ್ಲಕ್ಷ
ವರ್ತನೆ, ಬದಲಾಗುವುದು ಸಾಧ್ಯವೇ ಇಲ್ಲವೆನ್ನುವಷ್ಟು ಬಲವಾಗಿತ್ತು. ಆತ ತಿಂಗಳ
ವೆಚ್ಚಕ್ಕೆ ಬೇಕಾದ ಹಣವನ್ನೆಲ್ಲ ಒಂದೇ ಸಲ ಆಕೆಗೆ ಕೊಟ್ಟು ಬಿಡುತ್ತಿದ್ದ. ಬಟ್ಟೆ ಬರೆ
ಎಂದು ಮಾತೆತ್ತಿದರೆ ಎಂದಾದರೊಮ್ಮೆ ಹೆಚ್ಚು ಹಣ. ಆತ ತಾನಾಗಿಯೇ ಏನನ್ನೂ
ಕೊಂಡು ತರುತ್ತಿರಲಿಲ್ಲ. ಮಾತು, ಕೆಲಸದವಳೊಡನೆ ಆಡುವಂತೆ, ಆತ ಎಷ್ಟೋ
ಸಾರೆ ಊಟಕ್ಕೆ ಬರುತ್ತಿರಲಿಲ್ಲ, ಹೆಂಡತಿ ಹೊರಗಾದ ದಿನಗಳಲ್ಲಂತೂ ಮನೆಯ ಕಡೆ
ತಿರುಗಿ ನೋಡುತ್ತಿರಲಿಲ್ಲ. ಆಗ ರಾಧಮ್ಮನ ಆಸರೆ ಪಡೆಯುತ್ತಿದ್ದಳು ಸುನಂದಾ.

ಬೇರೆ ಹೆಣ್ಣಿನ ಸಹವಾಸ ಸುಖ ತನ್ನ ಗಂಡನಿಗೆ ಲಭಿಸುತ್ತಿದೆಯೆಂಬ ಸಂದೇಹ
ಆಕೆಯಲ್ಲಿ ಮೂಡಿ ಬಲಗೊಂಡಿತು.
ಅಷ್ಟಿದ್ದರೂ ಆಕೆ ಸರಸ್ವತಿಯ ಬಾಲಲೀಲೆಗಳನ್ನು ನೋಡುತ್ತ, ಉಳಿದೆಲ್ಲ
ಕೊರಗನ್ನು ಮರೆಯಲು ಯತ್ನಿಸಿದಳು.
ಸರಸ್ವತಿಯ ಹುಟ್ಟು ಹಬ್ಬಕ್ಕೆ ಪೂರ್ವಸಿದ್ಧತೆಯಾಗಿ ಆಕೆ, ತಾನು ಮಿತವ್ಯಯ
ಮಾಡಿ ಉಳಿಸಿದ್ದ ಹಣದ ಸಹಾಯದಿಂದ, ರೇಶಿಮೆಯ ಬಣ್ಣಬಣ್ಣದ ಉಡುಪನ್ನು
ಹೊಲಿಸಿದಳು. ಆ ದಿನಕ್ಕೆ ಹಿಂದಿನ ಸಂಜೆ ಮನೆಯನ್ನೆಲ್ಲ ಗುಡಿಸಿ ಸಾರಿಸಿ ಓರಣ
ಗೊಳಿಸಿದಳು. ಈ ಸಿದ್ದತೆ ಯಾಕೆ? ಎಂದು ಪುಟ್ಟಣ್ಣ ಕೇಳಬಹುದು. ಆಗ, ನಾಳೆ
ನಿಮ್ಮ ಮಗಳು ಹುಟ್ಟಿದ ಹಬ್ಬ-ಎನ್ನಬೇಕು, ಎಂದುಕೊಂಡಿದ್ದಳು ಸುನಂದಾ. ಆದರೆ
ಆತ ಕೇಳಲೇ ಇಲ್ಲ. ಆ ದಿನ ಗಂಡನಿಗೂ ನೆನಪಿರಬಹುದು ಎಂಬ ಆಸೆಯೂ
ಒಂದಿತ್ತು. ಅದೂ ಸುಳ್ಳಾಯಿತು. ಆತನ ನಡೆನುಡಿಯಲ್ಲಿ, ಆ ನೆನಪಿನ ಯಾವ
ಚಿಹ್ನೆಯೂ ಕಾಣಲಿಲ್ಲ. “ನೆನಪಿದ್ರೂ ಈ ರೀತಿ ವರ್ತಿಸುತ್ತಿದ್ದಾರೇನೋ' ಎಂಬ
ಶಂಕೆಯೂ ಮೂಡಿತು.