ಪುಟ:ಪಾಲಿಗೆ ಬಂದ ಪಂಚಾಮೃತ.pdf/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



108

ಕನಸು

ಮನಸ್ಸನ್ನು ಕದಡಿದ ಯೋಚನೆಗಳ ಫಲವಾಗಿ ఆ ರಾತ್ರೆ ಬಹಳ ಹೊತ್ತು ಆಕೆಗೆ
ನಿದ್ದೆ ಬರಲಿಲ್ಲ.

****

ಬೆಳಿಗ್ಗೆ ಪುಟ್ಟಣ್ಣ ಆಫೀಸಿಗೆ ಹೊರಟಾಗ ಸುನಂದಾ ಆತನನ್ನು ಸಮೀಪಿಸಿ, ಸ್ವರ
ವನ್ನು ಆದಷ್ಟು ಮೃದುಗೊಳಿಸಿ ಹೇಳಿದಳು:
"ಮಧ್ಯಾಹ್ನ ರಜಾ ತಗೊಂಡು ಇಲ್ಲಿಗೇ ಊಟಕ್ಕೆ ಬಂದ್ಬಿಡ್ತೀರಾ?"
ಹುಬ್ಬಗಳನ್ನು ಮೇಲಕ್ಕೇರಿಸಿ ಗಂಡ ಹೆಂಡತಿಯನ್ನು ನೋಡಿದ;
"ಯಾಕೆ?"
"ಇವತ್ತು ಸರಸ್ವತಿ ಹುಟ್ಟಿದಹಬ್ಬ ನೆನಪಿಲ್ವೆ"
ಆಶ್ಚರ್ಯ್ವವನ್ನಾಗಲೀ ಸಂತೋಷವನ್ನಾಗಲೀ ಪುಟ್ಟಣ್ಣ ಸೂಚಿಸಲಿಲ್ಲ.
"ಹಬ್ಬ ಏನ್ಬಂತು? ಹುಟ್ಟಿದ ದಿನ-ಅನ್ನು."
ಸುನಂದೆಯ ತಲೆಗೆ ಒಂದು ಕೊಡ ತಣ್ಣೀರು ಸುರಿದ ಹಾಗಾಯಿತು.
"ಹೇಳ್ದೆ. ಸಾಧ್ಯವಾದರೆ ಬನ್ನಿ. ಅಷ್ಟೆ."
ಆತ ಉತ್ತರ ಕೊಡದೆ ಭುಜಕುಣಿಸಿ ಹೊರಟುಹೋದ.
ಹಬ್ಬದ ಅಡುಗೆಗೆ ಸಿದ್ಧತೆಮಾಡಿಕೊಂಡಿದ್ದಳು ಸುನಂದಾ. ಗಂಡನ ವರ್ತನೆ
ನೋಡಿದ ಮೇಲೆ 'ಈಗ ಏನೂ ಬೇಡ'-ಎನಿಸಿತು.
ಆದರೆ ಈ ಸಂಭ್ರಮದ ವಿಷಯ ತಿಳಿದಿದ್ದ ರಾಧಮ್ಮ ಒಳಗೆ ಬಂದು ಕೇಳಿದರು:
"ಅಡುಗೆ ಕೆಲಸದಲ್ಲಿ ನಾನೂ ಸಹಾಯ ಮಾಡ್ಬೇಕೇನ್ರಿ?
ಸುನಂದಾ ಪ್ರಯತ್ನ ಪೂರ್ವಕವಾಗಿ ನಕ್ಕಳು.
“ಏನೂ ಬೇಡಿ ರಾಧಮ್ಮ. ಇದೇನು ಮಹಾ ಅಡುಗೆ?”
ಸುನಂದೆಯ ಓಡಾಟದ ಬಗೆಗೆ ಆಕೆಯ ಗಂಡನ ಅಭಿಪ್ರಾಯವೇನೋ-ಎಂದು
ತಿಳಿಯುವ ಕುತೂಹಲ ರಾಧಮ್ಮನಿಗಿತ್ತು. ಆದರೆ ಮುರಿದ ಮನೆಯನ್ನು ಸರಿಪಡಿಸುವ
ಮಹಾ ಸಾಹಸದಲ್ಲಿ ನಿರತಳಾಗಿದ್ದ ಸುನಂದೆಯ ಧ್ಯಾನಕ್ಕೆ ಭಂಗ ಬರಬಾರದೆಂದು,
ಅವರು ಆ ವಿಷಯ ಪ್ರಸ್ತಾಪಿಸಲಿಲ್ಲ. ಬದಲು, ಸಂತೋಷವಾಗಿಯೇ ಇದ್ದ ಸರಸ್ವತಿ
ಯನ್ನೆತ್ತಿಕೊಂಡರು. "ಥುತ್ ಕಳ್ಳಿ!" ಎಂಬ ಹೊಗಳಿಕೆಯ ಮಾತನ್ನಾಡಿದರು.
ಹುಟ್ಟುಹಬ್ಬದ ಮುತ್ತು ಕೊಟ್ಟರು.
'ಡಬ್ಬಾವಾಲಾ' ಬರುವ ಹೊತ್ತಾಯಿತೆಂದು ಸುನಂದಾ ಅವಸರ ಅವಸರವಾಗಿ
ಅಡುಗೆ ಮಾಡಿ, ಗಂಡನ ಬುತ್ತಿ ಸಿದ್ಧಪಡಿಸಿದಳು. ಸರಸ್ವತಿಗೆ ಸ್ನಾನ ಅಲಂಕಾರಗಳಾ
ದುವು. ತಾನು ಒಳ್ಳೆಯ ಸೀರೆಯುಟ್ಟುಕೊಂಡಳು.
ರಾಧಮ್ಮ ಅಡುಗೆಯ ಕೆಲಸದಲ್ಲಿ ನೆರವಾಗದೇ ಇದ್ದರೂ ತಮ್ಮ ಮನೆಯದನ್ನು
ಬೇಗನೆ ಮುಗಿಸಿ ಬಂದು, ಕೆಲಸ ಮಾಡುತ್ತಿದ್ದ ಸುನಂದೆಯೊಡನೆ ಸಣ್ಣ ಪಟ್ಟ ತಮಾ
ಷೆಯ ಆ ಮಾತು ಈ ಮಾತು ಆಡುತ್ತ ಕುಳಿತರು.