ಪುಟ:ಪಾಲಿಗೆ ಬಂದ ಪಂಚಾಮೃತ.pdf/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಪಾಲಿಗೆ ಬಂದ ಪಂಚಾಮೃತ

109

ಅಂಚೆಯವನು ಒಂದು ಪೊಟ್ಟಣ ತಂದ. ಸಹಿ ಹಾಕಿ ಸುನಂದಾ ಅದನ್ನು
ಪಡೆದಳು. ಜತೆಯಲ್ಲೊಂದು ಕಾಗದವೂ ಇತ್ತು. ರಾಧಮ್ಮನೂ ಅವರ ತೊಡೆಯ
ಮೇಲೆ ಕುಳಿತಿದ್ದ ಸರಸ್ವತಿಯೂ ನೋಡುತಿದ್ದಂತೆ ಸುನಂದಾ, "ನನ್ನ ತಂಗೀದು"
ಎನ್ನುತ್ತ, ಕಾಗದವನ್ನೊಡೆದಳು.
ವಿಜಯಾ ಮುದ್ದಾದ ಹಸ್ತಾಕ್ಷರದಲ್ಲಿ ಚುಟುಕಾಗಿ ಬರೆದಿದ್ದಳು:
"ಪ್ರೀತಿಯ ಅಕ್ಕಾ,
ಸರಸ್ವತಿಯ ಹುಟ್ಟು ಹಬ್ಬಕ್ಕೆ ನಮ್ಮೆಲ್ಲರ ಉಡುಗೊರೆ ಕಳಿಸಿದ್ದೇವೆ.
ಹೊತ್ತಿಗೆ ಸರಿಯಾಗಿ ಇದು ತಲುಪುತ್ತದೊ ಇಲ್ಲವೋ ಗೊತ್ತಿಲ್ಲ. ಆದರೂ
ತಲಪೀತೆಂಬ ನಂಬಿಕೆಯಿಂದ ಕಳಿಸಿದ್ದೇವೆ. ಹುಟ್ಟು ಹಬ್ಬದ ದಿವಸ ಸರಸ್ವತಿಯ
ಫೋಟೋ ತೆಗೆಸ್ತೀಯಾ ಅಲ್ಲವೇ? ನಮಗೊಂದು ಕಳಿಸಲು ಮರೆಯಬೇಡ.
ಕಂದ ಹೇಗಿದಾಳೇಂತ ನೋಡೋಕೆ ಆಸೆಯಾಗ್ತದೆ. ಇತ್ತೀಚೆಗೆ ನೀನು ಬರೆದೇ
ಇಲ್ಲ, ಯಾಕೆ? ನನ್ನ ಮದುವೆಗೆ ಮುಂಚೆ ತವರುಮನೆಗೆ ಬರಲೇಬಾರದು
ಅಂತ ಮಾಡಿದಿಯೇನು? ಸರಸ್ವತಿಗೆ ಎಲ್ಲರೂ ಆಶೀರ್ವಾದ ಕಳಿಸಿದ್ದಾರೆ.
ನನ್ನ ಪರವಾಗಿ ಅವಳಿಗೊಂದು ಮುತ್ತು ಕೊಡು."
ಓದುತ್ತಿದ್ದಂತೆ ಸುನಂದೆಯ ಕಣ್ಣುಗಳಿಂದ ಫಳಕ್ಕನೆ ಕಂಬನಿ ಉದುರಿತು. ಅಳ
ಬಾರದೆಂದು ಆಕೆ ಔಡುಗಚ್ಚಿ ನಿಂತಳು.
ಆ ಜೀವದ ಹೊಯ್ದಾಟವನ್ನು ಪೂರ್ತಿ ತಿಳಿಯಲಾಗದೆ ರಾಧಮ್ಮ, ಆ ಕಾಗದ
ದಲ್ಲಿ ಅದೇನು ಕೆಟ್ಟ ಸುದ್ದಿ ಬಂತೋ ಎಂದು ಗಾಬರಿಯಾದರು.
"ತಾಯಿಮನೇಲಿ ಎಲ್ಲರೂ ಸೌಖ್ಯವಾಗಿದಾರಾ ಸುನಂದಾ?"
"ಹೂಂ."
"ಏನು ಪೊಟ್ಣ? ಸರಸ್ವತಿಗೆ ಉಡುಗೊರೆ ಕಳಿಸಿದಾರಾ?"
“ಹೂಂ"
"ಒಡೀರಿ ಮತ್ತೆ!"
ಸುನಂದಾ ಸದ್ದಾಗದಂತೆ ನಿಟ್ಟುಸಿರುಬಿಟ್ಟು, ಚಾಕು ತಂದು, ಪೊಟ್ಟಣದ ಹೊಲಿಗೆ
ಬಿಚ್ಚಿದಳು. ಒಳಗೆ ಬಣ್ಣ ಬಣ್ಣದ ಹೂಗಳಿದ್ದ ಲಿನನ್ ಬಟ್ಟೆಯ ರೇಶಿಮೆಯ ಕಣ
ಗಳಿದ್ದುವು. ಸರಸ್ವತಿ ಅದನ್ನು ಮುಟ್ಟಿ ನೋಡಿ "ಇಹ್ಹಿ!" ಎಂದಳು.
"ನಿನಗೇ ಅಂತ ಗೊತ್ತಾ‍‍‍‍‍ಗ್ಹೋಯ್ತೇನೇ?"
ಎಂದು ಮಗುವನು ಅಣಕಿಸಿ ರಾಧಮ್ಮನೆಂದರು:
“ಕಣ ಚೆನ್ನಗಿದೆ ಸುನಂದಾ... ನಿಮ್ಮ ಮುದ್ದೂಗೆ ನನ್ನ ಪಾಲಿನ ಉಡುಗೊರೆ
ಏನೂ ಇಲ್ವಲ್ಲಾ !”
"ಸುಮ್ನಿರಿ ರಾಧಮ್ಮ, ಏನೂ ಬೇಡಿ."
"ಎಲ್ಲಾ ಸೇರಿಸಿ ಒಂದೇ ಸಲ ಅವಳ ಮದುವೆ ಹೊತ್ತಿಗೆ ಕೊಟ್ಟು ಬಿಡು