ಪುಟ:ಪಾಲಿಗೆ ಬಂದ ಪಂಚಾಮೃತ.pdf/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪಾಲಿಗೆ ಬಂದ ಪಂಚಾಮೃತ

9

ತೆರೆಯುವುದು ತಡವಾದರೆ ಬಾಗಿಲಿಗೆ ಬೂಟುಗಾಲಿನಿಂದ ಒದೆತ ಬೇರೆ...
...ಕತ್ತಲಾಯಿತೆಂದು ಸುನಂದಾ ವಿದ್ಯುತ್ ಗುಂಡಿಯನ್ನು ಒತ್ತಲು ಹೋದಳು.
ಆ ಬಿಲ್ಲೂ ಬಂದಿತ್ತು. ಇಪ್ಪತ್ತೊ೦ದನೆಯ ತಾರೀಕು ದೂರವಿರಲಿಲ್ಲ. ಅಷ್ಟರೊಳಗೆ
ಅದರ ಸಂದಾಯವಾಗಬೇಕು.
...ಇನ್ನು ರಾತ್ರೆಯ ಅಡುಗೆ...ತನಗೆ ಹಸಿವೆಯೇ ಇಲ್ಲವೆನ್ನುವಂತಹ ಮನೋ
ಸ್ಥಿತಿ. ಆದರೂ ತಾನು ಏನನ್ನಾದರೂ ಒಂದಿಷ್ಟು ಬೇಯಿಸಿಡಬೇಕು.
ಮಗು ರಂಪ ಮಾಡಿತು.
"ನನ್ನ ದುಃಖ ನಿನಗೂ ಅರ್ಥವಾಗುತ್ತೇನಮ್ಮಾ..."
—ಎಂದು ಮೆಲ್ಲನೆ ಆಡುತ್ತ ಸುನಂದಾ, ಐದು ತಿಂಗಳ ಕೂಸು ಸರಸ್ವತಿಯನ್ನು
ಬಲವಾಗಿ ಎದೆಗೆ ಅವಚಿಕೊಂಡಳು. ಮಗು ಮತ್ತಷ್ಟು ಗಟ್ಟಿಯಾಗಿ ಅತ್ತಿತು.



ಪುಟ್ಟಣ್ಣ ಒಳಗೆ ಬಂದವನೆ ಕೋಟು ಕಳಚಿದ. ಹಿಂದೆ ಸುನಂದ ನೆರವಾಗು
ತ್ತಿದ್ದಳು. ಈಗ ಆತನಿಗದು ಇಷ್ಟವಿರಲಿಲ್ಲ. ಕುರ್ಚಿಯ ಮೇಲೆ ಧೊಪ್ಪನೆ ಕುಳಿತು
ಬೂಟು ಬಿಚ್ಚಿದ.
ಕೊಠಡಿಯ ಹೊರಗೆ ಆತನನ್ನು ನೆಟ್ಟ ದೃಷ್ಟಿಯಿಂದ ನೋಡುತ್ತ ನಿಂತಿದ್ದ
ಸುನಂದಾ ಕೈ ಬಳೆಗಳನ್ನು ಅಲುಗಿಸಿ ಸದ್ದು ಮಾಡಿದಳು.
ಆದರೆ ಪುಟ್ಟಣ್ಣ ಅದರ ಕಡೆಗೆ ಲಕ್ಷ್ಯ ಕೊಡಲಿಲ್ಲ.
ಪುಟ್ಟಣ್ಣ ಬಟ್ಟೆ ಬದಲಿಸಿದ.
ಸುನಂದಾ ಮತ್ತೂ ಅಲ್ಲೇ ನಿಂತಿದ್ದಳು.
ಅದನ್ನು ಕಂಡು ಆತ ಕೇಳಿದ:
"ಯಾಕ್ನಿಂತಿದೀಯಾ ಅಲ್ಲೇ?"
"ಹೀಗೇ ನಿಂತೆ"
—ಎಂದು ಸುನಂದಾ ಉತ್ತರವಿತ್ತಳು. 'ನಿಲ್ಲುವ ಅಧಿಕಾರವೂ ನನಗಿಲ್ಲ
ವೇನು?'ಎಂದು ಮನಸ್ಸಿನೊಳಗೇ ಮಾತು ರೂಪುಗೊಂಡಿತು. ಆದರೆ ಅದನ್ನಾಕೆ
ಬಾಯಿ ತೆರೆದು ಆಡಲಿಲ್ಲ.
ಒಂದರೆಕ್ಷಣ ತನ್ನ ವರ್ತನೆ ಸರಿಯಾಗಿಲ್ಲವೇನೋ—ಎನ್ನಿಸಿತು ಪುಟ್ಟಣ್ಣನಿಗೆ.
ಅದಕ್ಕೆ ಸಮಾಧಾನವೆಂದು ಆತ ಕೇಳಿದ:

2