ಪುಟ:ಪಾಲಿಗೆ ಬಂದ ಪಂಚಾಮೃತ.pdf/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪಾಲಿಗೆ ಬಂದ ಪಂಚಾಮೃತ

121

ಒಟ್ನಲ್ಲಿ-ದುಡುಕ್ಬೇಡ. ಅಷ್ಟೆ.”
ಸುನಂದೆಯ ಮನಸಿನೊಳಗೆ ಸುಳಿದು ಹೋಯಿತು, ಹಿಂದೆ ತನಗೂ ರಾಧಮ್ಮ
ಕೊಟ್ಟಿದ್ದ ಉಪದೇಶ-'ದುಡುಕಬಾರದು' ಎಂದು.
ಆ ಹೆಂಗಸು ಮತ್ತೆ ಮೂಟೆಯನ್ನು ಹೆಗಲಿಗೇರಿಸಿ ಮಗುವನ್ನೆತ್ತಿಕೊಂಡು
ಎದ್ದು ನಿಂತಳು:
“ಹೊರಟ್ಬಿಡೋದೂಂತ ಸಾವಿರ ಸಲ ಯೋಚ್ನೆ ಮಾಡಿದ್ದೆ ಅಮ್ಮಾ. ಆದರೂ
ಹೋಗಿರ್ಲಿಲ್ಲ. ಇನ್ನು ಪ್ರಯೋಜನವಿಲ್ಲ. ಇವತ್ತೂ ಹೋಗದೆ ಇದ್ದರೆ ನನಗೆ ಬುದ್ಧಿ
ಯಿಲ್ಲ ಅಂತಾರೆ, ಅಷ್ಟೆ.”
ಆಕೆ ಮತ್ತೊಮ್ಮೆ ಬೀದಿಗಿಳಿದಂತೆ, ಗಂಡ ದೂರದಲ್ಲಿ ಕಾಣಿಸಿಕೊಂಡು, ಅವಳನ್ನೆ
ದುರದುರನೆ ನೋಡಿದ.
ಆಕೆಯೂ ಪ್ರತಿಯಾಗಿ ಆತನನ್ನು ನೋಡಿದಳು.
ಆತ ಸುಮ್ಮನೆ ಇದ್ದ. ಆಕೆ ಅಂದಳು:
“ಇನ್ನಾದರೂ ಸುಖವಾಗಿರು!”
ಅಷ್ಟು ಹೇಳಿ ಅವಳು ಹಿಂತಿರುಗಿ ನೋಡದೆ ಹೊರಟು ಹೋದಳು. ಆತ
ಗುಡಿಸಲಿನೊಳಕ್ಕೆ ಬಂದು, ಒಳಗೆಲ್ಲ ಒಮ್ಮೆ ನೋಡಿ, ಬಾಗಿಲೆಳೆದುಕೊಂಡು ಬೇರೆ
ಹಾದಿ ಹಿಡಿದ.
ಆಟದ ನಡುವೆ ತಿಂಡಿಗಾಗಿ ಮನೆಗೆ ಬಂದ ಶ್ಯಾಮನನ್ನು ತಬ್ಬಿಕೊಂಡು, ಆ
ಬಡಸಂಸಾರಕ್ಕೊದಗಿದ ದುರವಸ್ಥೆಯನ್ನು ಕಂಡು, ಬೇಸರದಿಂದ ರಾಧಮ್ಮ ತಲೆ
ಯಾಡಿಸಿದರು.
ಆಳವಾಗಿ ನಿಟ್ಟುಸಿರು ಬಿಟ್ಟಳು.
ಅಷ್ಟರಲ್ಲೇ ಎದುರು ಮನೆಯ ಕುಸುಮಾ ಇಳಿದು ಬಂದು, ಬೀದಿಯ ಆಚೆಯೇ
ನಿಂತು ಕೇಳಿದಳು:
“ಕೊನೆಗೆ ಏನಾಯಿತ್ರೀ?”
ಆ ಬಡವರ ವಿಷಯವಾಗಿಯೇ ಆಕೆ ಕೇಳುತ್ತಿರಬಹುದೆಂದು ಸುನಂದಾ ಊಹಿಸಿ
ದರೂ ಪ್ರಶ್ನೆ ಸ್ಪಷ್ಟವಾಗಲೆಂದು ಅಂದಳು:
“ಯಾವುದ್ರೀ?”
“ಅದೇ. ಬೆಳಗಿನಿಂದ ಗಲಾಟೆಯಾಗ್ತಾ ಇತ್ತಲ್ಲ.”
“ಆಕೆ ಹೊರಟ್ಹೋದ್ಲು. ಗಂಡನ್ನ ಬಿಟ್ಬಿಟ್ಟು ಮಗೂನ ಎತ್ಕೊಂಡು ಹೊರ
ಟ್ಹೋದ್ಲು."
“ಓ-ಡೈವೋರ್ಸ್ ಆಯ್ತು ಅನ್ನಿ!”
ಆ ಮಾತಿನ ಜತೆಯಲ್ಲೆ ಬಲು ಸಣ್ಣ ನಗೆಯಿತ್ತು. ಆದರೆ ಆ ನಗೆಯ ಬೆನ್ನಲ್ಲೆ

16