ಪುಟ:ಪಾಲಿಗೆ ಬಂದ ಪಂಚಾಮೃತ.pdf/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಪಾಲಿಗೆ ಬಂದ ಪಂಚಾಮೃತ

123

ಆ ಹೆಂಗಸಿನ ಧೈರ್ಯವನ್ನು ಮೆಚ್ಚಬೇಕೆನಿಸಿತು ಸುನಂದೆಗೆ. ಹಾಗೆ ನಿರ್ಧಾರ
ಮಾಡುವುದು ತನ್ನಿಂದ ಸಾಧ್ಯವಿತ್ತೆ? ಆ ಹೆಂಗಸು ಏನನ್ನೂ ಬಚ್ಚಿಡುತ್ತಿರಲಿಲ್ಲ. ಸಣ್ಣ
ಪುಟ್ಟ ಜಗಳದಿಂದ ಹಿಡಿದು ಕೊನೆಯ ಸ್ಛೋಟದ ವರೆಗೆ, ಪ್ರತಿಯೊಂದೂ ಬಹಿರಂಗ
ವಾಗಿಯೇ ಎಲ್ಲರ ಕಣ್ಣೆದುರಿಗೇ ನಡೆದಿತ್ತು. ಆದರೆ ತಾನು? ಮನೆಯಲ್ಲಿ ಜಗಳಾಡಿ
ದರೂ ಬೀದಿಗೆ ಕೇಳಿಸಬಾರದೆಂಬ ಭಯ. ಪಕ್ಕದ ಮನೆ ರಾಧಮ್ಮನಿಗೇನೋ ತನ್ನ
ಸಂಕಟದ ಸ್ಥೂಲ ಪರಿಚಯವಿತ್ತು. ಆದರೆ ವಿವರ ತಿಳಿದಿರಲಿಲ್ಲ. ಸ್ವಲ್ಪ ಆಚೆಗಿನ
ಕುಸುಮಳಿಗೆ ಮಾತ್ರ ಆ ವಿಷಯ ಏನೂ ತಿಳಿಯದು-ಏನೇನೂ ತಿಳಿಯದು.
ಬೇರೆಯವರು ಏನೆನ್ನುವರೆಂದು ಆ ಹೆಂಗಸು ಚಿಂತಿಸಿರಲಿಲ್ಲ. ಆದರೆ ತನ್ನ
ಚಿಂತೆಯೋ-ನೂರಾರು.
ತನ್ನೊಡನೆ ಕ್ರೂರ ಮೃಗದಂತೆ ವರ್ತಿಸುವ ಗಂಡನನ್ನು ಬಿಟ್ಟು ಮಗುವನ್ನೆತ್ತಿ
ಕೊಂಡು ತಾನು ಹೊರಟು ಹೋಗುವ ಕಲ್ಪನೆ....ವಿದ್ಯಾವತಿಯಾದ ತಾನು ಯಾರಿಗೆ
ಹೆದರಬೇಕು? ಏನಾದರೊಂದು ಉದ್ಯೋಗ ದೊರಕಿಸಿಕೊಂಡು ಸಂಪಾದಿಸಿ ಜೀವನ
ನಡೆಸುವುದಕ್ಕಾಗುವುದಿಲ್ಲವೆ?
ಆದರೆ, ಆಗ ಸಮಾಜ ಏನೆನ್ನುವುದು? ತನ್ನ ತಾಯಿ ತಂದೆ ಏನು ಹೇಳುವರು?
ಅವಿವಾಹಿತೆಯಾಗಿಯೇ ಕುಳಿತ ತಂಗಿಯ ಗತಿ ಏನಾಗುವುದು? ಒಬ್ಬಳೇ ಆದ ತಾನು
ಎಲ್ಲಿರಬೇಕು? ಬೇಕಷ್ಟು ಜನ ಕೆಟ್ಟವರಿದ್ದಾರೆ ಈ ಪ್ರಪಂಚದಲ್ಲಿ....ಅವರೆಲ್ಲ ತನ್ನನ್ನು
ಸುಮ್ಮನೆ ಬಿಡುವುದುಂಟೆ?
...ತಾನು ಅಸಹಾಯಳಾಗಿ ಮಗುವನ್ನೆತ್ತಿಕೊಂಡು ಚಿಂದಿಸೀರೆಯುಟ್ಟ ಕೆದರಿದ
ಕೂದಲಿನೊಡನೆ ಬೀದಿ ಅಲೆಯುವ ಚಿತ್ರ-ಆ ದಿನ ಹೊರಟು ಹೋದ ಹೆಂಗಸಿನ
ಹಾಗೆ.
ಆ ಯೋಚನೆಯಿಂದಲೆ ಸುನಂದೆಯ ಮೈ ಬೆವತಿತು.

೨೦

ಮಾರನೆಯ ಬೆಳಗ್ಗೆ ಗಂಡ ಕೆಲಸಕ್ಕೆ ಹೊರಟಾಗ ಸುನಂದಾ ಕೇಳಿದಳು:
"ತಾಯಿ ಮನೆಗೆ ಹೋಗ್ಬೇಕೂಂತ ಆಸೆಯಾಗಿದೆ. ಬಿಟ್ಬಿಟ್ಟು ಬರ್ತೀರಾ?"
ಪುಟ್ಟಣ್ಣ ಕ್ರದ್ಧನಾಗಿ ಹೇಳಿದ:
“ನೀನು ಹೋಗಕೂಡದು."
“ಯಾಕೆ? ಬಿಟ್ಟು ಬರೋಕೆ ನಿಮಗೆ ಪುರಸೊತ್ತಿಲ್ವೆ?"
"ತವರುಮನೆಗೆ ಹೋಗೋ ಯೋಚ್ನೇನೆಲ್ಲ ಬಿಟ್ಬಿಡು."