ಪುಟ:ಪಾಲಿಗೆ ಬಂದ ಪಂಚಾಮೃತ.pdf/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

126

ಕನಸು

ಕೇಳಿ ನಿಮಗೆ ಬೇಜಾರು ಬಂದಿತ್ತೂಂತ ಕಾಣ್ತದೆ."

"ಹೂಂ"
—ಎ೦ದಳು ಸುನಂದಾ ನಕ್ಕು.
ಎಷ್ಟು ಮುಗ್ಧೆ ಕುಸುಮಾ! ಆ ಬಡ ದಂಪತಿಗಳ ಜಗಳದಿಂದ ತನ್ನ ನೆಮ್ಮದಿಗೆ
ಭಂಗ ಬರುತ್ತಿತ್ತೆಂದು ಆಕೆ ಭಾವಿಸಿದ್ದಳು. ಸ್ವತಃ ತನ್ನ ಮನೆಯೊಳಗೇ-ತನ್ನೆದೆ
ಯೊಳಗೇ-ಜ್ವಾಲಾಮುಖಿ ಭೋರ್ಗರೆಯುತ್ತಿದ್ದುದನ್ನು ಆಕೆ ಊಹಿಸಿರಲಿಲ್ಲ.
ಅತ್ತ ಬಂದ ಕೆಲಸದ ಹುಡುಗಿಯನ್ನು ಕರೆದು ಕುಸುಮಾ, ಸರಸ್ವತಿಯನ್ನು
ಆಕೆಗೆ ಕೊಟ್ಟಳು. ಪಕ್ಕದ ಕೊಠಡಿಯಿಂದ ಚಾಕಲೇಟುಗಳನ್ನು ತಂದು, ಒಂದನ್ನು
ತೆರೆದು ಸರಸ್ವತಿಯ ಬಾಯಿಗೂ ಉಳಿದುವನ್ನು ಆಕೆಯ ಲಂಗದ ಜೇಬಿಗೂ ತುರು
ಕಿದಳು.
"ಕೆಳಗೆ ಆಡಿಸ್ತಾ ಇರು. ಹಾಗೇ, ಸ್ವಲ್ಪ ಹೊತ್ತು ಬಿಟ್ಕೊಂಡು ಟೀ ಕಳಿಸ್ಬೇ
ಕೂಂತ ಅಡುಗೆಯಳಿಗೆ ಹೇಳು..."
—ಎಂದು ಆ ಹುಡುಗಿಗೆ ಕುಸುಮಾ ಆದೇಶವಿತ್ತಳು.
ಮಗುವಿನೊಡನೆ ಹುಡುಗಿ ಕೆಳಗಿಳಿದು ಹೋದಾಗ ಕುಸುಮಾ ಅಂದಳು:
"ನಾನು ಕೆಟ್ಟವಳು ಅಲ್ವೇನ್ರಿ? ನೀವು ಬಂದಾಗಲೆಲ್ಲಾ ಮಗೂನ ಸ್ವಲ್ಪ
ಹೊತ್ತು ಆಡಿಸಿ ಕೆಳಗೆ ಕಳಿಸ್ತೀನಿ—ಆಮೇಲೆ ನಾವಿಬ್ಬರೇ ಜತೇಲಿರಬಹುದೂಂತ!"
ಸುನಂದಾಗೆ ನಗು ಬಂತು.
"ನಾಳೆ ನಿಮ್ಮ ಮಗು ಬಂದರೂ ಹೀಗೇ ಮಾಡ್ತೀರೋ?"
ಕುಸುಮಳ ಮುಖ ರೆಂಗೇರಿತು.
"ಹಾಗೇ ಮಾಡ್ತೀನಿ. ಮಾತು ಕೊಡ್ಬೇಕೇನು? ಮಗು ನನ್ನದೂಂತ ಪಕ್ಷಪಾತ
ತೋರಿಸೊಲ್ಲ. ಯಾವಾಗಲೊ ಸ್ವಲ್ಪ ಹೊತ್ತು ಎತ್ತಿ ಆಡಿಸ್ತಾ ಇದ್ದರಾಯ್ತು...
ಮಕ್ಕಳೆಂದರೆ ನನಗೆ ಪ್ರೀತಿ...ಯಾವ ಮಗುವಾದರೇನು ಹೇಳಿ?"
'ಅದು ಸುಳ್ಳು'—ಎಂದಿತು ಸುನಂದೆಯ ಮನಸ್ಸು. ಹಿಂದಿನ ದಿನ ಹೊರಟು
ಹೋದ ಆ ಕೆಲಸದವಳ ಕೊಳಕು ಮಗುವಿರಲಿಲ್ಲವೆ? ಅದನ್ನು ಕುಸುಮಾ ಎತ್ತಿ ಆಡಿಸು
ತ್ತಿದ್ದಳೆ?
ಆದರೆ ಆ ವಿಚಾರಗಳನ್ನು ಪ್ರಕಟಪಡಿಸದೆ ಸುನಂದಾ ಅಂದಳು:
“ಹಾಗೇ ಆಗಲಮ್ಮ."
ಏನೋ ಕೇಳಬೇಕೆಂದಿದ್ದುದು ಮರೆತು ಹೋಗಿ ಮತ್ತೆ ನೆನಪಾದಂತೆ ಕುಸುಮಾ
ಕೇಳಿದಳು:
"ಅಲ್ರೀ ನಿನ್ನೆ ಡೈವೋರ್ಸ್ ಆಯ್ತಲ್ಲಾ-ನೋಟೀಸು ಕೊಟ್ಟನೋ
ಅವಳೋ?”
"ಅವಳಿಗೇ ಸಾಕಾಗಿತ್ತಮ್ಮ. ತುಂಬಾ ಕಷ್ಟ ಸಹಿಸ್ತಿದ್ಲು, ಪಾಪ...! ”