ಪುಟ:ಪಾಲಿಗೆ ಬಂದ ಪಂಚಾಮೃತ.pdf/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

134

ಕನಸು



ಮತ್ತೊಮ್ಮೆ—ಡ‍ಬ್ ಡ‍ಬ್ "ಬಾಗಿಲು!"
ಯಾವ ಅವಸರವೂ ಇಲ್ಲದೆ ಸುನಂದಾ ನಿಧಾನವಾಗಿ ಎದ್ದಳು. ಮೈಮುರಿದು,
ನಿದ್ದೆಯನ್ನೋಡಿಸಿದಳು. ಮೆಲ್ಲನೆ ನಡೆದು ಬಂದು ಬಾಗಿಲು ತೆರೆದಳು.
'ಎಂಥ ಸುಡುಗಾಡಿನ ನಿದ್ದೆ ! ಎಷ್ಟು ಕರೆದರೂ ನಿನಗೆ ಕೇಳಿಸೋದಿಲ್ವಲ್ಲಾ'
—ಎಂದು ಆತ ರೇಗುತ್ತಲೆ ಒಳಗೆ ಕಾಲಿಡಬಹುದೆಂದು ಸುನಂದಾ ಭಾವಿ
ಸಿದ್ದಳು.
ಹಾಗಾಗಲಿಲ್ಲ. ಮಾತಾಡದೇ ಇದ್ದರೂ ಆತ ಬುಸುಗುಟ್ಟುತ್ತ ಬಂದ.
"ಗಂಟೆ ಎಷ್ಟಾಯ್ತು?"
—ಎಂದು ಸುನಂದಾ ಕೇಳಿದಳು.
ಆತ ದುರದುರನೆ ಆಕೆಯನ್ನು ನೋಡಿದ; ಉತ್ತರ ಕೊಡಲಿಲ್ಲ.
ಕೈಯಿಂದ ಬಿಚ್ಚಿ ಗಡಿಯಾರವನ್ನು ಕ್ಯಾಲೆಂಡರಿನ ಮೊಳೆಗೆ ನೇತು ಹಾಕಿದಾಗ
ಆಕೆ ಬಳಿಗೆ ಹೋಗಿ, ಹೊತ್ತು ನೋಡಿದಳು:
"ಹತ್ತೂ ನಲ್ವತ್ತಾಯಿತು,"
—ಎಂದು ಒಣ ಸ್ವರದಲ್ಲಿ ಅಂದು, ಊಟದ ಮನೆಗೆ ಹೋಗಿ, ತಟ್ಟೆ ಇಟ್ಟಳು.
ಉಡುಪು ಬದಲಿಸಿ ಪುಟ್ಟಣ್ಣ, ಕೈಕಾಲು ತೊಳೆದು ಬಂದು, ತಟ್ಟೆಯ ಎದುರು
ಕುಳಿತ. ಸುನಂದಾ ಬಡಿಸಿದಳು.
ಆತ ಮೌನವಾಗಿ ಒಂದು ತುತ್ತನ್ನು ಬಾಯಿಗಿಡುತ್ತಿದ್ದಂತೆ ಆಕೆ ಹೇಳಿದಳು:
"ನಿಮ್ಮ ಅಣ್ಣ ಅತ್ತಿಗೆ ಎಲ್ಲಾ ರಾತ್ರೆ ಗಾಡೀಲಿ ಊರಿಗೆ ಹೋದ್ರು."
ಆತ ಉತ್ತರವಿತ್ತ:
"ಒಳ್ಳೇದಾಯ್ತು.."
"ನಿಮ್ಮ ಅತ್ತಿಗೆ ತುಂಬಾ ನೊಂದ್ಕೊಂಡು ಹೋದ್ರು. ಹೋಗ್ತಾ, ಇನ್ನು
ಬರೋದಿಲ್ವಮ್ಮ, ನಾವು ಬಂದದ್ದು ಮೈದುನನಿಗೆ ಇಷ್ಟವಾಗ್ಲಿಲ್ಲಾಂತ ತೋರುತ್ತೆ—
ಅಂದರು."
"ಸಾಕುಮಾಡು ಮಾತ್ನ!"
ಒಂದು ಸೌಟು ಹುಳಿ ಬಡಿಸುತ್ತಾ ಸುನಂದಾ ಹೇಳಿದಳು:
"ಅವರೂ ಪಾಪ ಹಾಗಂದರೂಂತ ಹೇಳಿದ್ನೇ ಹೊರತು—"
"ಏನೂ ಸುಡುಗಾಡಿನ ಅನ್ನ—ತಣ್ಣಗಿದೆ!"
ಇದು ಸಿಟ್ಟನ್ನು ತೋರಿಸುವ ರೀತಿ ಎಂದು ತಿಳಿದಿದ್ದ ಸುನಂದಾ ಮುಗು
ಳ್ನಕ್ಕಳು.
ಆಗಲೆ ಆಕೆಯ ಮುಖ ನೋಡಿದ ಪುಟ್ಟಣ್ಣ, ಒಮ್ಮೆಲೆ ಊಟದ ತಟ್ಟೆಯನ್ನು
ಮುಷ್ಟಿಯಿಂದ ತಳ್ಳಿದ. ಅದು ಗೋಡೆಗೆ ಬಡಿದು ಅನ್ನ ನೆಲದ ಪಾಲಾಯಿತು.
"ಹಸಿವಿಲ್ದೇ ಹೋದ್ರೆ ಸುಮ್ನೆ ಏಳಬಾರದಾಗಿತ್ತೆ? ನೋಡಿ, ಊಟದ ಮನೆ