ಪುಟ:ಪಾಲಿಗೆ ಬಂದ ಪಂಚಾಮೃತ.pdf/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪಾಲಿಗೆ ಬಂದ ಪಂಚಾಮೃತ

11

"ಬೆಳಗ್ಗೆ ಅಗಸರವನು ಬಂದಿದ್ದ."
ಪುಟ್ಟಣ್ಣ ತಡೆದು ನಿಂತು ಮನೆಯತ್ತ ತಿರುಗಿ ಉರಿಗಣ್ಣಿನಿಂದ ಹೆಂಡತಿಯನ್ನು
ನೋಡಿದ:
“ಬೇರೆ ಯಾರೂ ಬರಲಿಲ್ವೇನು?"
"ಇಷ್ಟಕ್ಕೇ ಯಾಕೆ ಕೋಪಿಸ್ಕೋತೀರಾ? ಸುಮ್ನೆ ಹೇಳ್ದೆ. ನಾಳೆ ತಿರ್ಗಾ
ಬರ್ತಾನೆ."
ಹೆಂಡತಿಯ ಆ ಮಾತು ಕೇಳಿಯೂ ಕೇಳಿಸದವನಂತೆ ಪುಟ್ಟಣ್ಣ ಹೊರಟೇ
ಹೋದ.
ಸುನಂದಾ ಗಂಡ ಕುಳಿತಿದ್ದ ಕುರ್ಚಿಯ ಮೇಲಯೇ ತಲೆಬಾಗಿಸಿ ಕಣ್ಣು ಮುಚ್ಚಿ
ಕುಳಿತಳು.
ಆಕೆಯ ಮೆದುಳು ಸಿಡಿಮಿಡಿಗುಟ್ಟಿತು. ಕಣ್ಣಗಳು ಉರಿಯತೊಡಗಿದುವು.
ಮೈ ಕಾವೇರಿತು.
ತನ್ನ ಗಂಡ ಹೋದುದೆಲ್ಲಿಗೆ? ಎಲ್ಲಿಗೆ? ಯಾಕೆ ಹೀಗಾಯಿತು? ಯಾಕೆ?

****

ಮದುವೆಯಾದ ಹೊಸತಿನಲ್ಲೊಮ್ಮೆ ಪುಟ್ಟಣ್ಣ ಹೇಳಿದ್ದ:
“ನಾವು ದಿನಾ ಸಾಯಂಕಾಲ ವಾಕಿಂಗ್ ಹೋಗ್ಬೇಕು ಕಣೇ."
ಆ ಸ್ವರ ಮಧುರವಾಗಿತ್ತು. ಆಕೆಯೂ ಕತ್ತು ಕೊಂಕಿಸಿ ಅಂದಿದ್ದಳು:
“ಹೂಂ."
ಹಾಗೆ ಒಟ್ಟು ಹತ್ತು ಸಲ ಅವರು ಹೋಗಿದ್ದರೋ ಇಲ್ಲವೋ. ಅಷ್ಟರಲ್ಲೇ ಆ
ಕಾರ್ಯಕ್ರಮ ನಿಂತು ಹೋಯಿತು. ಅತ್ತೆಯೇನೋ ಒಂದೆರಡು ಸಾರಿ ಒರಟಾಗಿ
ಕೇಳಿದ್ದರು_'ಎಲ್ಲಿಗೆ ಹೋಗಿತ್ತು ಸವಾರಿ?' ಎಂದು. ಅದೇ ಕಾರಣವಾಯಿತೊ,
ಅಥವಾ ಆಕೆಗೆ ತಿಳಿಯದ ಬೇರೆ ಕಾರಣಗಳಿದ್ದುವೊ_ಅಂತೂ ಸವಾರಿ ಹೊರಡುವುದು
ನಿಂತು ಹೋಯಿತು.
ಸುನಂದೆಯ ಅತ್ತೆ, ತಮ್ಮ ಮಗನನ್ನು ಬಹಳ ಪ್ರೀತಿಸುತ್ತಿದ್ದರೆಂಬುದರಲ್ಲಿ
ಸಂದೇಹವಿರಲಿಲ್ಲ. ಸುನಂದಾ ಪುಟ್ಟಣ್ಣನ ಪ್ರೀತಿಗೆ ಹಕ್ಕುದಾರಳಾಗಿ ಬಂದಳು.
ಅತ್ತೆ ತನ್ನನ್ನು ಅಷ್ಟಾಗಿ ಪ್ರೀತಿಸದಿರಲು ಕಾರಣವೇನೆಂಬುದನ್ನು ವಿದ್ಯಾವತಿಯಾದ
ಸುನಂದಾ ಊಹಿಸಿಕೊಂಡಿದ್ದಳು. ಮನಶ್ಯಾಸ್ತ್ರದ ಸೂತ್ರಗಳನ್ನು ಸ್ವಲ್ಪಮಟ್ಟಿಗೆ ತಿಳಿ
ದಿದ್ದ ಆಕೆಗೆ ಅದು ಕಷ್ಟವಾಗಿರಲಿಲ್ಲ. ಆದರೂ, ಮೌನ ಸಮ್ಮತಿಯಿಂದ ಅತ್ತೆ ಸಾಧ್ಯ
ಗೊಳಿಸಿದ್ದ ಸೀಮಿತ ಕ್ಷೇತ್ರದೊಳಗೆ ಗಂಡನ ಅನುರಾಗಕ್ಕೆ ಪಾತ್ರಳಾಗಲು ಸುನಂದಾ
ಯತ್ನಿಸಿದಳು.
ಪುಟ್ಟಣ್ಣನ ಸ್ವಭಾವ ವಿಚಿತ್ರವಾಗಿತ್ತು. ಅಷ್ಟು ದೊಡ್ಡವನಾಗಿದ್ದರೂ ಆತ
ಅಮ್ಮನ ಸೆರಗಿಗೇ ಅಂಟಿಕೊಳ್ಳುತ್ತಿದ್ದ. ಎಲ್ಲಾದರು ಎಡವಿ ಕಾಲಿಗೆ ಗಾಯವಾದರೆ