ಪುಟ:ಪಾಲಿಗೆ ಬಂದ ಪಂಚಾಮೃತ.pdf/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

140

ಕನಸು

ವಿಜಯಾ ನಗುತ್ತ ಅಂದಳು:
“ನಗಬೇಡ ಅಕ್ಕ. ಪಕ್ಕದ ಮನೆಯೋರು ಏನಂದರಂತೆ ಗೊತ್ತೆ?-ಈ ಗಿಣೀನ
ಅವನ ಕೈಗೆ ಕೊಡ್ತಾರಲ್ಲಾ-ಅಂತ!”
ಸುನಂದೆಗೆ ಬೇಸರವಾದರೂ ತೋರಿಸಿಕೊಳ್ಳದೆ ಅಂದಳು:
“ಹೋಗಲಿ ಬಿಡು. ರೂಪದಲ್ಲೇನಿದೆ? ನನಗೆ ರೂಪವಂತನಾದ ಗಂಡ ಸಿಕ್ಕಿದ.
ಕೊನೆಗೇನಾಯ್ತು?”
ಭಾರವಾಗಿದ್ದ ಸ್ವರದಲ್ಲಿ ವಿಜಯಾ ನುಡಿದಳು:
“ನನಗೇನೂ ವ್ಯಥೆಯಿಲ್ಲ ಅಕ್ಕ. ಪಾಲಿಗೆ ಬಂದ ಪಂಚಾಮೃತ-ಅಂತ
ಸುಮ್ನಿರ್ತೀನಿ.”
“ಪಾಲಿಗೆ ಬಂದ ಪಂಚಾಮೃತ. ಹೂಂ! ಅಂತೂ ಒಳ್ಳೇ ಲಾಟರಿ ಆಗೋ
ಯ್ತಲ್ಲೇ ಮದುವೆ ಅನ್ನೋದು!"
—ಆ ಮಾತು ಸುನಂದೆಯ ಬಾಯಿಂದ ಹೊರಟಿತು. ತಕ್ಷಣವೆ 'ಅಯ್ಯೋ
ಹಾಗೆ ಹೇಳಬಾರದಾಗಿತ್ತು' ಎಂದು ಸುನಂದಾ ತುಟಿ ಕಚ್ಚಿಕೊಂಡಳು.
ತಂಗಿಯನ್ನು ಉಲ್ಲಾಸಗೊಳಿಸಬೇಕೆಂದು ಸುನಂದಾ, ಕುಸುಮಳ ವಿಷಯ ಹೇಳ
ತೊಡಗಿದಳು. ಒಂದೊಂದನ್ನೂ ಎಷ್ಟು ಬಣ್ಣಿಸಿದರೂ ಆಕೆಗೆ ತೃಪ್ತಿಯಾಗಲಿಲ್ಲ. ಆ
ಬಳಿಕ ಕುಸುಮಳ ಹಾಗೆ ಶ್ರೀಮಂತಳಲ್ಲದಿದ್ದರೂ ವಿದ್ಯಾವತಿಯಲ್ಲದಿದ್ದರೂ ಗಂಡ
ನೊಡನೆ ಸುಖವಾಗಿಯೇ ಇದ್ದ ರಾಧಮ್ಮನ ವಿಷಯ. ಗಂಡನನ್ನು ಬಿಟ್ಟು ಮಗುವಿ
ನೊಡನೆ ಹೊರಟು ಹೋದ ಬಡ ಹೆಂಗಸಿನ ಕತೆ. ಮತ್ತೆ ಕುಸುಮಳ ಪ್ರಸ್ತಾಪ.
ಆಕೆಗೂ ತನಗೂ ವಿವಾಹಕ್ಕೆ ಸಂಬಂಧಿಸಿ ನಡೆದ ಮಾತುಕತೆ. 'ಡೈವೋರ್ಸ್' ಎಂಬ
ಪದವನ್ನು ಪ್ರಯೋಗಿಸಿದ ಕುಸುಮಾ. ಡೈವೋರ್ಸ್ ಅಂದರೇನು? ಎಂದು ಕೇಳಿದ,
ಕುಸುಮಳಷ್ಟೇ ಒಳ್ಳೆಯ, ರಾಧಮ್ಮ....
ಹೀಗೆ, ಲೋಕಶಿಕ್ಷಣದಲ್ಲಿ ಮೇಲಿನ ತರಗತಿಯಲ್ಲಿದ್ದ ಅಕ್ಕನಿಂದ, ಆಕೆ ಸಂಪಾದಿ
ಸಿದ್ದ ಅನುಭವ ರಾಶಿಯಿಂದ, ತಂಗಿ ಹಲವು ಪಾಠಗಳನ್ನು ಕಲಿತಳು.
ಮದುವೆಗೆ ಮೂರೇ ದಿನಗಳು ಉಳಿದಾಗ ಒಂದು ಸಂಜೆ, ಯಾವುದೋ ಮಾತು
ಬಂದು, ಬೇಸರಗೊಂಡು, ವಿಜಯಾ ಅಕ್ಕನನ್ನು ಕೇಳಿದಳು:
“ನಾವು ಕಾಲೇಜ್ನಲ್ಲಿ ಓದಿದ್ದೆಲ್ಲಾ ವ್ಯರ್ಥವಾಯ್ತು, ಅಲ್ವೆ ಅಕ್ಕಾ?”
ಸುನಂದಾ ಒಪ್ಪಲಿಲ್ಲ.
“ಹಾಗೆ ಹೇಳೋಕಾಗಲ್ಲ ವಿಜಯಾ. ಈ ಲಾಟರೀಲಿ ನಮಗೆ ಸಂಪೂರ್ಣ
ಸೋಲಾದಾಗ, ಕಲಿತಿರೋ ನಾಲ್ಕಕ್ಷರದ ಸಹಾಯದಿಂದ ದುಡಿದು, ಒಂದಿಷ್ಟು ಸಂಪಾ
ದ್ನೆನಾದರೂ ಮಾಡಿ ಬದುಕೋದು ಸಾಧ್ಯವಾಗುತ್ತೆ."
ಅಕ್ಕನ ಆ ಮಾತಿನ ಹಿಂದಿದ್ದ ಆಳವಾದ ನೋವನ್ನು ವಿಜಯಾ ಗ್ರಹಿಸಿದಳು.
“ನಿಜ ಅಕ್ಕ. ಅದೂ ಸರಿಯೆ. ಮುಂದೆ ನಮಗಿಬ್ಬರಿಗೂ ಅಂಥ ದಿನ ಬಂದಾಗ