ಪುಟ:ಪಾಲಿಗೆ ಬಂದ ಪಂಚಾಮೃತ.pdf/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

142

ಕನಸು

“ಆಕೆ ಗಂಡ ಬೆಂಗಳೂರಲ್ಲಿ ದೊಡ್ಡ ಕೆಲಸದಲ್ಲಿದಾನಂತೆ-ಭಾರೀ ಸಂಬಳವಂತೆ.”
“ಅದಕ್ಕೇ ಇಷ್ಟು ಸಂತೋಷವಾಗಿದಾಳೆ.”
“ಅಂತೂ ಒಳ್ಳೆ ಗಂಡನ ಕೈ ಹಿಡಿದ್ಲು.”
“ಪಡಕೊಂಡು ಬರಬೇಕಮ್ಮಾ ಇದಕ್ಕೆಲ್ಲಾ !”
...ಅವರ ನಡುವೆ ಭಿನ್ನಾಭಿಪ್ರಾಯಗಳೇ ಇರಲಿಲ್ಲ. ಸುನಂದಾ ಭಾಗ್ಯಶಾಲಿನಿ
ಎಂಬ ವಿಷಯದಲ್ಲಿ ಎಲ್ಲರಿಗೂ ಒಮ್ಮತವಿತ್ತು.