ಪುಟ:ಪಾಲಿಗೆ ಬಂದ ಪಂಚಾಮೃತ.pdf/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

146

ಕನಸು

“ವಿವಾಹ ವಿಚ್ಛೇದನದ ತತ್ವ ನನಗೆ ಒಪ್ಪಿಗೆ. ಆದರೆ ಅದನ್ನು ಆದ ಅನ್ಯಾಯ
ಸರಿಪಡಿಸೋಕೆ ಉಪಯೋಗಿಸ್ಬೇಕು. ಹೊಸ ಅನ್ಯಾಯ ಮಾಡೋದಕ್ಕಲ್ಲ.”
ಸುನಂದೆಗೂ ಅದು ಸಮ್ಮತವೇ.
ರಾಧಮ್ಮನ ಅಭಿಪ್ರಾಯವಿಷ್ಟು:
“ಒಮ್ಮೆ ಮುರಿದ್ಮೇಲೆ ಕೂಡ್ಸೋಕಾಗೊಲ್ಲ. ಕೂಡಿಸಿದರೂ ಅದು ಮೊದಲಿನ
ಹಾಗೆ ಭದ್ರವಾಗಿರೋದಿಲ್ಲ.”
ಹೀಗಾಗಿ ಆಕೆ ಕೊಡುತ್ತಿದ್ದ ಸಲಹೆಯೊಂದೇ: “ದುಡುಕಬಾರದು.”
ಆ ಮಾತುಗಳಲ್ಲೂ ಅರ್ಥವಿತ್ತು. ಬೇರೆಯವರಿಗೆ ಸಂಬಂಧಿಸಿದ ವಿಷಯವಾದರೆ
ಸುನಂದೆಯೂ ಹಾಗೆಯೇ ಹೇಳುತ್ತಿದ್ದಳು. ಆದರೆ ಸ್ವಂತ ಆಕೆಯ ವಿಷಯದಲ್ಲಿ
ಹಾಗಿರಲಿಲ್ಲ. ಅಲ್ಲಿ ಆಗಬೇಕಾಗಿದ್ದುದು, ಅನ್ಯಾಯ ಸರಿಪಡಿಸುವ ಕೆಲಸ. ಮುರಿದೆ
ಮೇಲೆ ಕೂಡಿಸುವ ಮಾತಲ್ಲ.
ಬಡವರಿಗಾದರೆ?
“ಆ ಬಡಪಾಯಿಗಳಿಗೆ ವಿವಾಹ ವಿಚ್ಛೇದನ ಅಂದರೇನು ಅನ್ನೋದೇ ಗೊತ್ತಿಲ್ಲ.
ಈ ವಿಷಯದಲ್ಲೆಲ್ಲ ಸರ್ಕಾರ ಕಾನೂನು ಮಾಡಿಟ್ಟಿದೆ ಅನ್ನೋದೂ ಗೊತ್ತಿಲ್ಲ. ಆದರೆ
ಸುಲಭವಾಗಿ ಡೈವೋರ್ಸ್ ಮಾಡ್ಕೊಂಡ್ರು!”
ಆಕೆಗಾದರೋ ಪ್ರತಿಯೊಂದೂ ಗೊತ್ತಿತ್ತು. ಆ ವಿಷಯದಲ್ಲೆಲ್ಲ ಸರಕಾರ
ಕಾನೂನು ಮಾಡಿಟ್ಟುದೂ ಗೊತ್ತಿತ್ತು. ಆದರೆ ಆ ಕಾನೂನನ್ನು ಉಪಯೋಗಿಸುವುದು
ಮಾತ್ರ ಅವಳಿಂದಾಗಲಿಲ್ಲ.
ಮನುಷ್ಯ ಜೀವನದಲ್ಲಿ ವಿರಸವೇರ್ಪಡದೇ ಇರುವುದೆಂದಿಲ್ಲ. ಬದುಕಿನಲ್ಲಿ
ಅಂತಹ ವಿಷಗಳಿಗೆಗಳು ಹೇರಳವಾಗಿರುತ್ತವೆ. ಆಗ ಗಂಡು-ಹೆಣ್ಣು ಇಬ್ಬರೂ ಪರಸ್ಪರ
ಸಹಕರಿಸಿ ಸಂಸಾರದ ಬಂಡಿಯನ್ನು ಮತ್ತೆ ಬೀದಿಗೆ ತರಬೇಕು. ಆದರೆ ಒಮ್ಮೊಮ್ಮೆ
ಎಂದೆಂದಿಗೂ ಸರಿಹೋಗದಂತಹ ದುರ್ಘಟನೆಗಳು ಒದಗುತ್ತವೆ. ಗಂಡ ಹೆಂಡತಿ
ಎರಡು ಧ್ರುವಗಳಾಗುತ್ತಾರೆ. ಎಷ್ಟು ಕಾಲ ಹೋದರೂ ಮತ್ತೆ ಹೃದಯಗಳ ಬೆಸುಗೆ
ಯಾಗುವುದಿಲ್ಲ. ಮಕ್ಕಳೂ ಹಿರಿಯರನ್ನು ಒಂದುಗೂಡಿಸಲು ಸಮರ್ಥರಾಗುವುದಿಲ್ಲ.
ಅಂತಹ ಸಂದರ್ಭದಲ್ಲಿ ದಂಪತಿಗಳು ಬೇರೆಬೇರೆಯಾಗುವುದೇ ಮೇಲು...
ಆದರೆ, ಈಗಿನ ಸಾಮಾಜಿಕ ಇರುವಿಕೆಯಲ್ಲಿ ಗಂಡು ಮಾತ್ರ ಹೆಣ್ಣನ್ನು ಬಿಟ್ಟು
ಕೊಡಲು ಸಮರ್ಥನಾಗಿದ್ದಾನೆ.
ವಿವಾಹ ಪದ್ಧತಿಯಲ್ಲೇ ಬದಲಾವಣೆಯಾದರೆ, ಜೀವಮಾನವೆಲ್ಲ ಜತೆಗಿರ
ಬೇಕಾದ ಗಂಡು ಮತ್ತು ಹೆಣ್ಣು ಮದುವೆಗೆ ಮುಂಚಿತವಾಗಿಯೇ ಪರಸ್ಪರರನ್ನು
ಚೆನ್ನಾಗಿ ತಿಳಿದಿದ್ದರೆ, ನೂರರಲ್ಲಿ ತೊಂಭತ್ತೊಂಭತ್ತರ ಮಟ್ಟಿಗೆ ದಾಂಪತ್ಯ ಜೀವನ
ವಿರಸದಲ್ಲಿ ಮುಕ್ತಾಯವಾಗುವ ಸಂಭವವೇ ಇಲ್ಲ.
ಸುನಂದೆಗೆ ಆ ರೀತಿ ಅರಿತು ಮದುವೆಯಾಗುವ ಅವಕಾಶ ಸಿಗಲಿಲ್ಲ. ಆದರೆ