ಪುಟ:ಪಾಲಿಗೆ ಬಂದ ಪಂಚಾಮೃತ.pdf/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಪಾಲಿಗೆ ಬಂದ ಪಂಚಾಮೃತ

147

ಆಕೆಯ ತಂಗಿ ವಿಜಯಾಗಾದರೂ ಅದು ದೊರೆತಿತೆ?
“ವರ ನಿನಗೆ ಮೆಚ್ಚುಗೆಯಾಗಿದಾನಾ ವಿಜಯಾ?”
“ನನಗೆ ಗೊತ್ತಿಲ್ಲವಕ್ಕ. ನಿರಾಶೆ ಅನುಭವಿಸಿ ಅನುಭವಿಸಿ ಗೊತ್ಮಾಡಿದಾರೆ....
ಪಾಲಿಗೆ ಬಂದ ಪಂಚಾಮೃತ-ಅಂತ ಸುಮ್ನಿರ್ತೀನಿ.”
ಆ ಮಾತಿಗೆ ಕಥಾನಾಯಿಕೆ ಸುನಂದೆಯ ಪ್ರತಿಕ್ರಿಯೆ ಇದು:
“ಪಾಲಿಗೆ ಬಂದ ಪಂಚಾಮೃತ. ಹೂಂ! ಅಂತೂ ಒಳ್ಳೇ ಲಾಟರಿ ಆಗೋ
ಯ್ತಲ್ಲೆ ಮದುವೆ ಅನ್ನೋದು!”
ಅದು ನೋವಿನ ವ್ಯಂಗ್ಯದ ಮಾತು.
... ಹಾಗಾದರೆ ಒಟ್ಟಿನಲ್ಲಿ ಏನಾದ ಹಾಗಾಯಿತು?
'ಮನುಷ್ಯತ್ವ ಕಳೆದುಕೊಂಡ ಮಾನವ ಪ್ರಾಣಿಯೊಂದರ ಭೋಗದ ಆಟಿಗೆ
ಯಾಗಿರಲು, ಮನೆಯಲ್ಲಿ ಊಳಿಗದ ತೊತ್ತಾಗಲು, ನಿಂದೆ ಅವಹೇಳನಗಳಿಗೆ ಮಾತ್ರ
ಪಾತ್ರಳಾದ ಚರಣದಾಸಿಯಾಗಿರಲು, ಸುನಂದಾ ಸಿದ್ಧಳಿರಲಿಲ್ಲ.'
ಆದರೆ ವಸ್ತುಸ್ಥಿತಿ, ಆಕೆಯ ಅಸಹಾಯತೆ, ದೌರ್ಬಲ್ಯ, ಮಗುವಿನ ಭವಿತವ್ಯದ
ಬಗೆಗೆ ಕಾತರ-ಎಲ್ಲ ಸಂಕಟವನ್ನೂ ಮುಚ್ಚಿಟ್ಟು ಸುನಂದಾ ಓಡಾಡಿದರೂ ಆಕೆಯ
ಮನಸ್ಸು ಹೇಗಿತ್ತು?
“ನಾವು ಓದಿದ್ದೆಲ್ಲಾ ವ್ಯರ್ಥವಾಯ್ತು, ಅಲ್ವೆ ಅಕ್ಕ?”
“ಹಾಗೆ ಹೇಳೋಕಾಗಲ್ಲ ವಿಜಯಾ. ಈ ಲಾಟರೀಲಿ ನಮಗೆ ಸಂಪೂರ್ಣ
ಸೋಲಾದಾಗ, ಕಲಿತಿರೋ ನಾಲ್ಕಕ್ಷರದ ಸಹಾಯದಿಂದ ದುಡಿದು, ಒಂದಿಷ್ಟು ಸಂಪಾದ್ನೆ
ನಾದರೂ ಮಾಡಿ ಬದುಕೋದು ಸಾಧ್ಯವಾಗುತ್ತೆ."
ಆ ಮಾತಿಗೆ ಪ್ರತಿಯಾಗಿ ತಂಗಿ ಹೇಳಿದುದೂ ಅಷ್ಟೇ ಗಮನಾರ್ಹವಾದುದು.
“ನಿಜ ಅಕ್ಕ. ಅದೂ ಸರಿಯೆ. ಮುಂದೆ ನಮಗಿಬ್ಬರಿಗೂ ಅಂಥ ದಿನ ಬಂದಾಗ,
ನಾವಿಬ್ಬರೂ ಜತೆಯಾಗಿಯೇ ಇದ್ದು ಬಿಡೋಣ—"
ಆದರೆ ಸುನಂದೆಗೆ ಅಳುಕು, ಆಸೆ.
“ಇಲ್ಲ ವಿಜೀ... ನಿನ್ನ ಗಂಡ ಖಂಡಿತ ಒಳ್ಳೆಯವನಾಗಿರ್ತಾನೆ. ದೇವರ ಹಾಗೆ
ನಿನ್ನ ನೋಡ್ಕೋತಾನೆ"
—ಎಂದು ಆಕೆ ಹೇಳುತ್ತಾಳೆ.
... ಇದಿಷ್ಟು ಕಾದಂಬರಿಯನ್ನು ಕುರಿತು.
ಸಾಧನಾ, ಈ ಸಮಸ್ಯೆಗೆ ಸಂಬಂಧಿಸಿ ನಿನ್ನ ಅಭಿಪ್ರಾಯವೇನೆಂಬುದನ್ನು ನಾನು
ಬಲ್ಲೆ. ವಿವಾಹ ವಿಚ್ಛೇದನದಂತಹ ಪ್ರಮುಖ ಪ್ರಶ್ನೆಯ ವಿಷಯವಾಗಿ ನಮ್ಮಿಬ್ಬರ
ಅಭಿಮತವೂ ಒಂದೇ. ಹಾಗಿರುವುದು ಸ್ವಾಭಾವಿಕ. ಆದರೆ ನಮ್ಮ ನಾಡಿನ ಸಹ
ಸ್ರಾರು ಸೋದರಿಯರ ಅಭಿಪ್ರಾಯಗಳೇನೋ ಎಂದು ತಿಳಿಯುವ ಕುತೂಹಲ ನನಗೆ