ಪುಟ:ಪಾಲಿಗೆ ಬಂದ ಪಂಚಾಮೃತ.pdf/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

148

ಕನಸು


[ಅವರು ನನಗೆ ಬರೆಯುತ್ತಾರೆಂದು ನೀನೆಂದೂ ಆಕ್ಷೇಪಿಸಿ ವಿರಸಕ್ಕೆ ಕಾರಣವಾಗಿಲ್ಲ
ವಲ್ಲ, ಸಧ್ಯ!] ಹಾಗೆಯೇ ಪುರುಷ ಓದುಗರ ವಿಷಯ ಕೂಡ.
...ಕಾದಂಬರಿಯನ್ನು ಬರೆದು ಮುಗಿಸಿದ ಮೇಲೆ ಯಾರಿಗೆ ಅರ್ಪಿಸೋಣವೆಂಬ
ಪ್ರಶ್ನೆ ಮೂಡಿತು. ಇಂತಹ ಕಾದಂಬರಿಯನ್ನು, ಯಾವುದೇ ಒಬ್ಬ ವ್ಯಕ್ತಿಗೆ-ಗಂಡಿರಲಿ
ಹೆಣ್ಣಿರಲಿ-ಅರ್ಪಿಸುವುದು ಸರಿಯಲ್ಲವೆಂದು ಗೃಹಲಕ್ಷ್ಮಿಯರನ್ನು ಸ್ಮರಿಸಿಕೊಂಡೆ.
...ಇಲ್ಲಿ ಒಂದು ಮುಖ್ಯ ವಿಷಯವನ್ನು ನಿನಗೆ ನಾನು ಹೇಳಬೇಕು. ಬರೆಯುತ್ತ
ಲಿದ್ದಂತೆ ಪುಸ್ತಕ ಅಚ್ಚಾಗುತ್ತಿತ್ತು. [ನಾಮಕರಣವೂ ಅಷ್ಟರಲ್ಲೇ ಆಗಿತ್ತೆನ್ನು!] ಆ
ಸಂದರ್ಭದಲ್ಲಿ ಕಾಣಸಿಕ್ಕಿದ ಗೆಳೆಯರು ಎಂದಿನಂತೆ ಕೇಳಿದರು: “ಈಗೇನು ಬರೀತಿ
ದೀರಿ?” ಪುಸ್ತಕದ ಹೆಸರು ಹೇಳಿದೆ. “ಹೆಸರು ಚೆನ್ನಾಗಿದೆ” ಅಂದರು. ಅದೇನೂ
ಹೊಗಳಿಕೆಯಾಗಿ ನನಗೆ ತೋರಲಿಲ್ಲ. [ಹೆಸರಿಡುವ ವಿಷಯದಲ್ಲಿ ನನಗಿರುವ ದಕ್ಷತೆ
ಯನ್ನು ನೀನು ಬಲ್ಲೆ!]
ಆದರೆ ಒಂದೆರಡು ದಿನ ಕಳೆದ ಮೇಲೆ, ಪುಸ್ತಕದ ಹೆಸರು ಕಿವಿಯಲ್ಲಿ ಗುಂಯ್
ಗುಡುತ್ತಿದ್ದಾಗ, ನನಗೆ ಒಮ್ಮೆಲೆ ಹೊಳೆಯಿತು: ಸಾಹಿತ್ಯ ಕೃತಿಗೆ ಈ ರೀತಿ ಹೆಸರಿಟ್ಟರು
ವುದು ನಾನೇ ಮೊದಲಲ್ಲ-ಎಂದು. ಹಾಗೆ ಹೊಳೆದಾಗ ಬೇಸರವಾಯಿತು.
ಓದುಗ ಸ್ನೇಹಿತರಿಂದ ನನಗೆ ಬಂದಿರುವ ಕಾಗದಗಳನ್ನೆಲ್ಲ ಓದಿರುವ ನಿನಗೆ,
ಶ್ರೀಮತಿ ಸರೋಜಮ್ಮ ಬಿ. ಶರಣಪ್ಪ ಎಂಬ ಹೆಸರು ನೆನಪಿರಬಹುದು. 'ವಿಮೋಚನೆ'
'ಬನಶಂಕರಿ' ಕಾದಂಬರಿಗಳಿಗೆ ಸಂಬಂಧಿಸಿ ಅವರು ಎರಡು ಸಾರೆ ಬರೆದರು. ಒಂದರಲ್ಲಿ,
ತಾವೂ ಲೇಖನಗಳನ್ನು ಬರೆದಿರುವುದಾಗಿಯೂ ಒಂದು ಪುಟ್ಟ ಕಾದಂಬರಿಯನ್ನು
ಈಗಾಗಲೇ ಬರೆಯುತ್ತಿರುವುದಾಗಿಯೂ 'ಪಾಲಿಗೆ ಬಂದ ಪಂಚಾಮೃತ'ವೆಂಬುದು
ಅದರ ಹೆಸರೆಂದೂ ತಿಳಿಸಿದ್ದರು. [ನೆನಪಾಯಿತಲ್ಲವೆ?] ಆದರೆ ಅದು ಒಂದು ವರ್ಷಕ್ಕೆ
ಹಿಂದೆ. ಆ ಅವಧಿಯಲ್ಲಿ ಸಹಸ್ರಾರು ಶೀರ್ಷಿಕೆಗಳು ಸಾಹಿತ್ಯ ವಾತಾವರಣದಲ್ಲಿ
ಧೂಳೆಬ್ಬಿಸಿದ್ದುವು. ಆ ಗೊಂದಲದಲ್ಲಿ, ಸೋದರಿಯೊಬ್ಬರು ಕೃತಿ ಬರೆದಿರುವರೆಂಬುದು
ನೆನಪಿದ್ದರೂ ಕೃತಿಯನ್ನು ನೋಡದೆ ಇದ್ದುದರಿಂದ ಅದರ ಹೆಸರು ಮರೆತು
ಹೋಯಿತು.
ಈಗ ನನ್ನ ಕೃತಿಗೇ 'ಪಾಲಿಗೆ ಬಂದ ಪಂಚಾಮೃತ'ವೆಂದು ಹೆಸರಿಟ್ಟಿದ್ದೇನೆ.
ನಿಜ, ಆದರೂ ಅರಿಯದೆ ನನ್ನಿಂದ ಒಂದು ಅಪರಾಧವಾಯಿತೆಂದು ಖೇದವೆನಿಸಿದೆ.
ಅದಕ್ಕಾಗಿ ನಾನು ಆ ಸೋದರಿಯ ಕ್ಷಮೆ ಕೇಳಬೇಕು. ಅಲ್ಲದೆ, ಅವರ ಕಾದಂಬರಿಯ
ವಸ್ತು ಯಾವುದೇ ಇರಲಿ, ಅದು ಪ್ರಕಟವಾಗಬೇಕು; 'ಪಾಲಿಗೆ ಬಂದ ಪಂಚಾಮೃತ'
ಎಂಬ ಹೆಸರಲ್ಲೇ ಪ್ರಕಟವಾಗಬೇಕು;-ಎಂಬುದು ನನ್ನ ಹಾರೈಕೆ.
ನನ್ನ ಈ ಪುಸ್ತಕಕ್ಕೆ ಕನ್ನಡದ ಪ್ರಸಿದ್ದ ಕಲಾವಿದರಾದ ಶ್ರೀ ಎಂ. ಟಿ. ವಿ.
ಆಚಾರ್ಯರು ಹೊದಿಕೆಯ ಚಿತ್ರ ಬರೆದಿದ್ದಾರೆ; ಪುಸ್ತಕ 'ತಾಯಿನಾಡು' ಪ್ರೆಸ್ಸಿನಲ್ಲಿ