ಪುಟ:ಪಾಲಿಗೆ ಬಂದ ಪಂಚಾಮೃತ.pdf/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

20

ಕನಸು


ವನ್ನಿಟ್ಟಳು. ಗಂಡ ಏನನ್ನಾದರೂ ಹೇಳಬಹುದೆಂಬ ಆಸೆಯಿಂದ ತಾನೂ ಒಂದು
ನಿಮಿಷ ನಿಶ್ಚಲಳಾಗಿ ನಿಂತಳು. ಸುನಂದಾ ಅಲ್ಲಿ ನಿಂತುದರ ಅರಿವಾದರೂ, ಪುಟ್ಟಣ್ಣ
ಮಿಸುಕಲಿಲ್ಲ.
“ನೀರು ತಂದಿಟ್ಟಿದೀನಿ”
—ಎಂದು ಆಕೆ, ತಾನು ಜೀವಂತಳಾಗಿರುವುದನ್ನು ಆತನ ಗಮನಕ್ಕೆ ತಂದಳು.
“ಹುಂ.”
ಒಂದೇ ಸ್ವರ, ಒಂದೇ ಪದ.
ಯಾಕೆ ಆ ತಾತ್ಸಾರಭಾವ? ಆತನ ಕೈಹಿಡಿದವಳಲ್ಲವೆ ತಾನು? ತಾನೇನು ಊಳಿ
ಗದ ಆಳೆ? ಕಟುವಾಗಿ ಏನನ್ನಾದರೂ ಅಂದು ಆತನನ್ನು ಕೆಣಕಬೇಕೆಂಬ ಆಸೆಯ ಕಿಡಿ
ಸುನಂದೆಯ ಹೃದಯವನ್ನು ದಹಿಸಿತು. ಆದರೆ ಧೈರ್ಯವಾಗಲಿಲ್ಲ. ಕುತ್ತಿಗೆಯ
ನರಗಳು ಬಿಗಿದು ಬಂದು ಉಸಿರು ಕಟ್ಟಿದ ಹಾಗಾಯಿತು. ಸುನಂದಾ ಆ ಯೋಚನೆ
ಯನ್ನು ಬಿಟ್ಟು ಕೊಟ್ಟಳು. ಹಾಸಿಗೆಯ ಬಳಿ ಸಾರಿ, ಆತನ ಪಾದಗಳತ್ತ ಬಾಗಿ,
ಹೊದಿಕೆಯನ್ನು ಕೈಯಿಂದ ಮುಟ್ಟಿ ಸುನಂದಾ ಕೇಳಿದಳು:
“ಹೊದಿಸಿ ಹೋಗ್ಲೆ?”
ಮತ್ತೊಮ್ಮೆ ಒಂದೇ ಪದದ ಉತ್ತರ:
“ಬೇಡ!”
ಕೊಠಡಿಯಿಂದ ಹೊರಹೋಗುತ್ತ ಸುನಂದಾ ಕ್ಷೀಣ ಸ್ವರದಲ್ಲಿ ಕೇಳಿದಳು:
“ಮಲಕೊಳ್ಲಾ ನಾನು?”
“ಹೂಂ .”
...ಆಕೆ ಒಳಹಜಾರದಲ್ಲಿ 'ಬೆಡ್ ಲ್ಯಾಂಪ್' ಹತ್ತಿಸಿ ಚಿಕ್ಕದಾಗಿ ಉರಿಸಿಟ್ಟಳು.
ನಿದ್ದೆ ಹೋಗಿದ್ದ ಮಗುವಿನತ್ತ ಒಮ್ಮೆ ನೋಡಿ ದೀಪವಾರಿಸಿ ಹಾಸಿಗೆಯ ಮೇಲೆ
ಗೋಡೆಗೊರಗಿ ಕುಳಿತುಕೊಂಡಳು.

****

ಒಂದು ದಿನ ಮುಕ್ತಾಯವಾಗಿತ್ತು.
ವೈವಾಹಿಕ ಜೀವನಕ್ಕೆ ಸಂಬಂಧಿಸಿ ಸುನಂದಾ ಹಿಂದೆಯೇ ಎಷ್ಟೋ ಕನಸು
ಕಂಡಿದ್ದಳು; ಎಷ್ಟನ್ನೋ ಊಹಿಸಿಕೊಂಡಿದ್ದಳು. ನವಿರುನವಿರಾದ ಕುಸುಮ
ಕೋಮಲ ಸುಖ. ಅದು ಆಕೆಗೆ ದೊರೆತಿತ್ತೋ ಇಲ್ಲವೋ. ಆದರೂ 'ನಾನು
ಸುಖಿ' ಎಂದು ಆಕೆ ಭಾವಿಸಿದ್ದ ದಿನಗಳಿದ್ದುವು. ಆದರೆ, ದಾಂಪತ್ಯ ಜೀವನದ ಸಂಕಟ
ವೆಂದರೇನೆಂಬ ಆಕೆಯ ಕಲ್ಪನೆ ಪೂರ್ಣವಾಗಿಯೆ ಇರಲಿಲ್ಲ. ಈಗ, ಆ ಅಪೂರ್ಣ
ಚಿತ್ರದ ಬದಲು ವಾಸ್ತವ ಘಟನೆಯ ರುದ್ರವಾಗಿ ಪರಿಪೂರ್ಣವಾಗಿ ನಿಂತಿತ್ತು.
ಮಡಚಿದ ಮೊಣಕಾಲುಗಳ ಮೇಲೆ ತನ್ನ ಮುಖವಿರಿಸಿ ಸುನಂದಾ