ಪುಟ:ಪಾಲಿಗೆ ಬಂದ ಪಂಚಾಮೃತ.pdf/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

28

ಕನಸು

“ಉದ್ದವೋ ಗಿಡ್ಡವೋ. ದುಡ್ಡು ಕೊಟ್ಬಿಟ್ಟು ಹೋಗಿ. ಈ ಸಲದ ಸಂಬಳದ
ಹಣ-ಎಲ್ಲಿದೆ ತೋರಿಸಿ.”
“ಸಂಬಳದ ಹಣ? ಪರವಾಗಿಲ್ವೆ ನೀನು! ಹೂಂ... ನನಗೊಂದು ಮೂಗುದಾರ
ಹಾಕೋಣಾಂತ್ಲೋ?”
ಈ ಮಾತುಕತೆಯೊಂದನ್ನೂ ಗಮನಿಸದೆ ಮಗು ತನ್ನ ಕಾರ್ಯದಲ್ಲಿ ನಿರತ
ವಾಗಿತ್ತು. ಆದರೆ ಒಮ್ಮೆಲೆ ಹಾಲು ನಿಂತುದನ್ನು ಕಂಡು ಅದು ಸಿಟ್ಟಾಯಿತು.
ತಾಯಿ ಛಲದಿಂದ ಮಾತನಾಡಿದಂತೆ ಮಗುವೂ ಛಲದಿಂದ ಬರಿ ಮೊಲೆಯನ್ನೇ
ಚೀಪಿತು. ಆದರೆ ಅತೃಪ್ತಿಯುಂಟಾಗಿ, ಅಸಹಾಯತೆಯಿಂದ ಅಳತೊಡಗಿತು.
ಅಳುತ್ತಿದ್ದ ಮಗುವನ್ನು ಸುನಂದಾ ಎದೆಗವಚಿಕೊಂಡಳು. ಗಂಡನ ಅಣಕಿಸುವ
ಧ್ವನಿಗೆ ಆಕೆ ಅಂಜಲಿಲ್ಲ.
“ನೀವು ಇವತ್ತೊಂದು ದಿನ ಮನೇಲಿದ್ದು ನೋಡಿ. ಗೊತ್ತಾಗುತ್ತೆ”
“ನಿನಗೆ ಈಗಾಗ್ಲೇ ಗೊತ್ತಾಯ್ತೇನು?”
“ಓಹೋ.”
“ಏನು ಗೊತ್ತಾಯ್ತು? ಸಂಸಾರ ಸಾಗಿಸೋದು ಕಷ್ಟ ಅಂತ್ಲೋ?”
“ನೀವು ಹೀಗೆಲ್ಲಾ ಮಾತಾಡ್ಬೇಡಿ.”
“ತಲಹರಟೆ ಮಾತ್ನಾಡ್ಬೇಡಿ-ಅನ್ನು ಧೈರ್ಯವಾಗಿ.”
“ಹೌದು, ತಲಹರಟೆ ಆಡ್ಬೇಡಿ. ಸಾಯಂಕಾಲದೊಳಗೆ ಬಾಕಿಯೆಲ್ಲಾ ಸಂದಾಯ
ಮಾಡೋಕೆ ನೀವು ಏರ್ಪಾಟು ಮಾಡದೇ ಇದ್ದರೆ ನಾನು ಉಪವಾಸ ಬಿದ್ದು
ಸಾಯ್ತಿನಿ.”
“ಅದಕ್ಕೆ ಅನ್ನ ಸತ್ಯಾಗ್ರಹ ಅಂತ ಕಣೇ ಹೆಸರು!”
ಈಗ ಸುನಂದಾ ಉತ್ತರವೀಯಲಿಲ್ಲ. ತನ್ನ ಸಾಹಸದ ಕೋಟೆ ಮುರಿದು ಪುಡಿ
ಯಾದ ಹಾಗೆ ಬಿಕ್ಕಿ ಬಿಕ್ಕಿ ಅತ್ತಳು.
ಆತನೇನೋ ಕಂಬನಿ ಒರೆಸಲು ಮುಂದೆ ಬರಲಿಲ್ಲ. ಬದಲು ಹೊರ ಬಾಗಿಲ
ಬಳಿ ಸಾರಿ, ಮೆಟ್ಟಲಿಳಿದ,
ಇಳಿಯುತ್ತ ಹೇಳಿದ:
“ಇವತ್ತೊಂದು ದಿನ ತಡಕೋ; ರಾತ್ರಿ ತಂದ್ಹಾಕ್ತೀನಿ ದುಡ್ನ.”

ದಿನದ ಕೆಲಸದ ವಿರಾಮ ವೇಳೆಯಲ್ಲಿ ಪುಟ್ಟಣ್ಣ, ಮನಸಿಲ್ಲದ ಮನಸಿನಿಂದ
ಬ್ಯಾಂಕಿಗೆ ಹೋದ. ಅಗತ್ಯದ ವೆಚ್ಚಕ್ಕೆ ಬೇಕಾದುದೆಷ್ಟೆಂಬುದನ್ನು ಲೆಕ್ಕ ಹಾಕಿ, ಅಷ್ಟು