ಪುಟ:ಪಾಲಿಗೆ ಬಂದ ಪಂಚಾಮೃತ.pdf/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

32

ಕನಸು

ಮೇಲೆ, ಯಾವ ವ್ಯಾಮೋಹವೂ ಇಲ್ಲವೆಂಬುದನ್ನು ತೋರಿಸಿಕೊಡುವುದಕ್ಕಾಗಿಯೇ
ಹೀಗೆ ಮಾಡುತ್ತಿದ್ದೇನೆ!'
ವ್ಯಕ್ತಿ ಮೊದಲು ಸ್ವತಂತ್ರನಾಗಬೇಕು. ಆ ಬಳಿಕ ತನಗಿಷ್ಟಬಂದಂತೆ ಮಾಡಬೇಕು.
ತನ್ನ ಸ್ವಾತಂತ್ರ್ಯವನ್ನು ಪುಟ್ಟಣ್ಣ ಗಳಿಸಿದ್ದ. ಅನಂತರ ತನಗಿಷ್ಟಬಂದಂತೆ
ಮಾಡಲು ತೊಡಗಿದ್ದ.
....ಕಾಲುನಡಿಗೆಯಲ್ಲೇ ಪುಟ್ಟಣ್ಣ ಆಫೀಸು ಸೇರಿದ.
ಆಫೀಸು-ಯಾವ ದೇಶದಿಂದಲೋ ಯಾರೋ ಬಂದು ದುಡ್ಡು ತಂದು ಇಲ್ಲಿ
ನೆಲೆನಿಂತು ಕಟ್ಟಿದ ಕಾರ್ಖಾನೆಗೆ ಸಂಬಂಧಿಸಿದ ಆಫೀಸು. ಇಲ್ಲಿಯೇ ತಾನು ಮುದುಕ
ನಾಗುವವರೆಗೂ ಇರುವುದುಂಟೆ? ಖಂಡಿತ ಇರಕೂಡದು. ಇಂತಹ ಕಾರ್ಖಾನೆಯನ್ನೇ
ಸ್ವತಃ ಕೊಳ್ಳುವ ಸಾಮರ್ಥ್ಯವಂತನಾಗಬೇಕು ತಾನು. ನಿಂತಲ್ಲೇ ನಿಲ್ಲುವುದೆಂದರೆ
ದಿನ ದಿನವೂ ಸ್ವಲ್ಪ ಸ್ವಲ್ಪವೇ ಸಾಯುವ ಹಾಗೆ. ತಾನಿರುವುದು ಸಾಯುವುದಕ್ಕಲ್ಲ,
ಬದುಕುವುದಕ್ಕೆ; ಬದುಕಿ, ಬೇಗಬೇಗನೆ ಮೇಲೇರಿ ಹೋಗುವುದಕ್ಕೆ.
ಆ ಆಫೀಸಿನಲ್ಲಿ ಆತನಿಗೆ ಸಹೋದ್ಯೋಗಿಗಳಿದ್ದರು. ಹಿಂದೆ ಅವರೊಡನೆಲ್ಲ
ಪುಟ್ಟಣ್ಣ ಅನ್ಯೋನ್ಯವಾಗಿರುತ್ತಿದ್ದ. ಈಗ ಅವರ ಬಗೆಗೆ ತಾತ್ಸಾರ. ಹಿಂದೆ ಅವರ
ಸುಖದುಃಖಗಳನ್ನು ಆತ ವಿಚಾರಿಸುತ್ತಿದ್ದ-ತನ್ನ ವಿಷಯವಾಗಿಯೂ ವರದಿ ಮಾಡು
ತಿದ್ದ. ಈಗ ಅನಗತ್ಯವಾದ ಅಂತಹ ಮಾತಿಲ್ಲ. ಆ ಸಹೋದ್ಯೋಗಿಗಳು ತನ್ನ
ವರ್ತನೆಯನ್ನು ವಿಚಿತ್ರ ದೃಷ್ಟಿಯಿಂದ ನೋಡುತ್ತಿದ್ದರೆಂಬುದು ಪುಟ್ಟಣ್ಣನಿಗೆ
ಗೊತ್ತಿತ್ತು. ಅದರಿಂದ ಸಮಾಧಾನವಾಗಿತ್ತು ಆತನಿಗೆ. ಸಾಮಾನ್ಯವಾಗಿದ್ದರೆ ಯಾವಾ
ಗಲೂ ಸಾಮಾನ್ಯನೇ. ವಿಚಿತ್ರವಾಗಿದ್ದರೇ ಮುಂದಿನ ಸೋಪಾನವನ್ನು ಮೆಟ್ಟಿ ಏರಲು
ಶಕ್ತಿ ಬರುವುದು.
ಮೆಟ್ಟಿ ಏರುವುದು. ಅದೀಗ ಸಾಮರ್ಥ್ಯದ ಒರೆಗಲ್ಲು. ಹಾದಿಗಡ್ಡವಾಗಿ
ಜನ ಮಲಗಿದ್ದರೆ ತುಳಿದು ಹೋಗಬೇಕು. ಹೆಣ ಮಲಗಿದ್ದರೂ ತುಳಿದು ಹೋಗ
ಬೇಕು. ಬಾಗಿದವರನ್ನು ಮತ್ತೂ ಬಾಗಿಸಬೇಕು. ಆ ಬೆನ್ನಿನ ಮೇಲೆ ಕುಳಿತೇ
ಸವಾರಿ ಮಾಡಬೇಕು.
'ಅಯ್ಯೋ ಪಾಪ!' ಎನ್ನುವ ಪದಪ್ರಯೋಗ ಒಂದಿತ್ತು. ಯಾವನು ಹಾಗೆ
ಮೊದಲು ಅಂದನೋ! ಒಂದು ಕಾಲದಲ್ಲಿ ಪುಟ್ಟಣ್ಣನೂ ಹಾಗೆಯೇ ಆಡುತ್ತಿದ್ದ.
ಸಂಕಟಪಡುವ ಯಾರನ್ನಾದರೂ ಕಂಡಾಗ ಮನಸ್ಸು 'ಅಯ್ಯೋ ಪಾಪ' ಎನ್ನುತ್ತಿತ್ತು.
ಒಮ್ಮೊಮ್ಮೆ ಸ್ವರ ಹೊರಡಿಸಿಯೇ 'ಅಯ್ಯೋ ಪಾಪ!' ಎಂದು ಉದ್ಗಾರವೆತ್ತುತ್ತಿದ್ದ.
ಈಗ ಆ ಪ್ರಸಂಗಗಳ ನೆನಪಾದಾಗ ನಗು ಆರುತ್ತಿತ್ತು... ಮನುಷ್ಯ ಎಷ್ಟೊಂದು
ಮೂರ್ಖನಾಗುವುದೂ ಸಾಧ್ಯ! ಪುಟ್ಟಣ್ಣನ ದೃಷ್ಟಿಯಲ್ಲಿ 'ಕನಿಕರ' ಎನ್ನುವ ಪದ
ದೌರ್ಬಲ್ಯದ ಸಂಕೇತ. ಯಾರಾದರೂ ಸಂಕಟಪಡುತ್ತಿದ್ದರೆ ಅದಕ್ಕೆ ಅವರೇ ಕಾರಣ.
ಆ ಕಣ್ಣೀರಿನ ಕತೆ ಕೇಳಿದಾಗ "ಓ__ಹಾಗೋ" ಎಂದು ಹೇಳಿ ತಾತ್ಸಾರದಿಂದ