ನೋಡಬೇಕು. 'ಅಯ್ಯೋ ಪಾಪ!' ಎನ್ನುತ್ತ ಬುಳಬುಳನೆ ಕಣ್ಣೀರು ಸುರಿಸುವುದಲ್ಲ...
ಈ ಹೊಸ ತತ್ವಜ್ಞಾನವನ್ನು ರೂಪಿಸಿಕೊಂಡಿದ್ದ ಪುಟ್ಟಣ್ಣನೀಗ ಹೆಂಡತಿಯ
ಕಣ್ಣೀರಿಗೆ ಹೆದರುವ ಗಂಡಲ್ಲ; ಯಾರ ಕಣ್ಣೀರನ್ನೂ ಕಂಡು ಕನಿಕರಿಸುವ ಹೆಣ್ಣಿಗನಲ್ಲ.
... ಆಫೀಸಿನ ಕೆಲಸ ಮುಗಿದು ಹೊರಡುವ ಹೊತ್ತಾಯಿತು. ಈಗೇನೂ
ಬೇಗನೆ ಮನೆಗೆ ಹೋಗಬೇಕೆಂಬ ಆತುರವಿಲ್ಲ. ಮಗುವಿನ, ಹೆಂಡತಿಯ ಮುಖ
ನೋಡಬೇಕೆಂಬ ಉತ್ಕಟ ಬಯಕೆಯೂ ಆತನಿಗಿಲ್ಲ.
ಆದರೆ ಹೆಚ್ಚು ತಡಮಾಡದೆ ಜತೆಗಾರರನ್ನು ಸೇರುವ ಕೆಲಸ ಒಂದಿದೆ. ಅದಕ್ಕೆ
ಮುಂಚಿತವಾಗಿ ತಾನು ಮನೆಗೆ ಹೋಗಬೇಕು. ನೋಟುಗಳ ಕಂತೆಯನ್ನು ಹೆಂಡತಿಯ
ಮುಖಕ್ಕೆಸೆಯಬೇಕು. ಆಗ ಅವಳಲ್ಲಾಗುವ ಮುಖಭಾವವನ್ನು ಗಮನಿಸಿ ಅಣಕಿಸಿ
ಸಂತೋಷಪಡಬೇಕು.
ತನ್ನ ಶಕ್ತಿಯ ಪರಿಚಯವನ್ನು ಆಕೆಗೆ ಮಾಡಿಕೊಡುವುದಗತ್ಯ. ತನ್ನನ್ನು
ಕಂಡು ಆಕೆ ಹೆದರುವಂತಾಗಬೇಕು. ಹೊರಗಿನವರು ಹೆದರುವುದಕ್ಕೆ ಮುಂಚಿತವಾಗಿ
ಮನೆಯಾಕೆಯೇ ಹೆದರುವುದು ಮುಖ್ಯ. ಮೊದಲು ಮನೆ-ಬಳಿಕ ಊರು.
ಆತನಿಗೆ ಅರಿಯದಂತೆಯೇ ಕಾಲುಗಳು 'ಬಸ್ ಸ್ಟಾಪಿ'ನ ಬಳಿ ನಿಂತುವು. ಬಂದು
ನಿಂತ ನೀಲಿ ಬಸ್ಸನ್ನು ಪುಟ್ಟಣ್ಣ ಹತ್ತಿದ. ಕುಳಿತುಕೊಳ್ಳಲು ಜಾಗವಿರಲಿಲ್ಲ. ಮೇಲಿನ
ಕಂಬಿ ಹಿಡಿದು ಗಂಭೀರವಾಗಿ ನಿಂತು, ಕುಳಿತಿದ್ದವರು ತನಗಿಂತ ನಿಕೃಷ್ಟರೆಂಬಂತೆ, ತಿವಿ
ಯುವ ನೋಟದಿಂದ ಅವರೆಲ್ಲರನ್ನೂ ಒಬ್ಬೊಬ್ಬರನ್ನಾಗಿಯೇ ನೋಡಿದ.
೬
ಬಹಳ ಹೊತ್ತು ಬಾಗಿಲ ಬಳಿ ಕಾದು ನಿಂತಿದ್ದ ಸುನಂದೆಯ ದೃಷ್ಟಿಗೆ, ಬರುತ್ತ
ಲಿದ್ದ ಗಂಡ ಕಾಣಿಸಿದ. ಹಿಂದೆ, ಹಾಗೆ ಕಾದಿರುತ್ತಿದ್ದುದು ಹೇಗಿರುತಿತ್ತು! ಬಾಗಿಲಿಗೆ
ಸ್ವಲ್ಪ ಮರೆಯಾಗಿ ಗೋಡೆಗೊರಗಿ ತುಡಿದು ಕೊಳ್ಳುತಿದ್ದ ಹೃದಯದಿಂದ ಇನಿಯನ
ಬರವನ್ನು ಆಕೆ ಆಗ ಇದಿರುನೋಡುತ್ತಿದ್ದಳು. ದೂರದಿಂದ ಅಸ್ಪಷ್ಟವಾಗಿ ಯಾವುದೇ
ಯುವಕಜೀವ ಕಾಣಿಸಿಕೊಂಡರೂ ಆಕೆಗೆ ಒಂದು ವಿಧವಾಗುತಿತ್ತು. ಆತ ಗಂಡನಲ್ಲ
ವೆಂದು ಗೊತ್ತಾದ ಬಳಿಕ ನಿರಾಸೆ. ಆ ಬೀದಿಯಾಗಿ ಹೋಗುತ್ತಿದ್ದ ಯಾವನಾದರೂ,
ಬಾಗಿಲ ಬಳಿ ಸಿಂಗರಿಸಿಕೊಂಡು ನಿಂತಿದ್ದ ಹೆಣ್ಣಿನತ್ತ ಕುತೂಹಲದಿಂದಲೋ ಆಸೆ
ಯಿಂದಲೋ ನೋಡಿದಾಗ, ವಿಚಿತ್ರ ಅನುಭವ. ಮತ್ತೆಯೂ ಗಂಡನಿಗಾಗಿ ಕಾದು
ನಿಂತಾಗ, ಎದೆಯಿಂದ ಆರಂಭವಾಗಿ ದೇಹದ ಅಂಗಾಂಗಗಳಿಗೂ ವ್ಯಾಪಿಸುತಿದ್ದ
ನೋವು....