ಪುಟ:ಪಾಲಿಗೆ ಬಂದ ಪಂಚಾಮೃತ.pdf/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪಾಲಿಗೆ ಬಂದ ಪಂಚಾಮೃತ

43

ಉದ್ವಿಗ್ನವಾಗಿದೆಯೆಂದೂ ಓದುತ್ತ ಕುಳಿತ ದಿನ ಸ್ವಲ್ಪ ಸಮಾಧಾನಚಿತ್ತನಾಗಿರುವ
ನೆಂದೂ ಸುನಂದಾ ಊಹಿಸುತಿದ್ದಳು
ಸಮಯಸಾಧಿಸಿ ಸುನಂದಾ ಆತನ ಕೋಟಿನ ಜೇಬುಗಳನ್ನು ಶೋಧಿಸಿದಳು.
ಅಲ್ಲಿ ಒಮ್ಮೊಮ್ಮೆ ಬರಿಯ ಜೇಬೇ ಇರುತಿತ್ತು; ಒಮ್ಮೊಮ್ಮೆ ಹಣವಿರುತ್ತಿತ್ತು.
ಏನೋ ಸಂದೇಹ ಬಂದು ಸುನಂದಾ ಬ್ಯಾಂಕಿನ ಲೆಕ್ಕಪುಸ್ತಕಕ್ಕಾಗಿ ಹುಡುಕಾಡಿ
ದಳು.ಆ ಸಾಹಿತ್ಯವೆಲ್ಲ ಮೇಜಿನೊಳಗಿದ್ದಂತೆ ತೋರಿತು. ಅದಕ್ಕೆ ರಕ್ಷಣೆಯಾಗಿತ್ತು
ಭದ್ರವಾದ ಬೀಗ. ಬೀಗದ ಕೈ ಆತನ ಜನಿವಾರಕ್ಕೆ ನೇತು ಬಿದ್ದಿತ್ತು.
ಈ ವರ್ತನೆಯೆಲ್ಲ ಭೇದಿಸಲಾಗದ ರಹಸ್ಯವಾಗಿಯೇ ಉಳಿಯಿತು ಸುನಂದೆಯ
ಪಾಲಿಗೆ. ಗೃಹಕೃತ್ಯದ ಮುಖ್ಯ ವಿಷಯಗಳಿಂದ ತನ್ನನ್ನು ದೂರವಿಡಲು ಆತ ಯತ್ನಿ
ಸುತ್ತಿದ್ದನೆಂಬುದು ಮಾತ್ರ ಆಕೆಗೆ ಸ್ಪಷ್ಟವಾಯಿತು.
ತಾನು ಬಡವಾಗುತ್ತಿದ್ದುದನ್ನು ಗುಮನಿಸದೇ ಇದ್ದರೂ ಸುನಂದಾ, ಸರಿಯಾದ
ಆಹಾರ ಪಾನೀಯಗಳಿಲ್ಲದೆ ಗಂಡ ಸ್ವಲ್ಪ ಕೃಶನಾಗಿದ್ದುದನ್ನು ಕಂಡಳು. ಆದರೆ ಆ
ವಿಷಯ ಪ್ರಸ್ತಾಪಿಸಿ ಪ್ರಯೋಜನವಿಲ್ಲವೆಂದು ಸುಮ್ಮನಾದಳು.
ಈ ನಡುವೆ ಆತನ ಕಣ್ಣುಗಳು ಕೆಂಪಗಿರುತ್ತಿದ್ದುವು. ಸ್ವಲ್ಪ ನೀಳವಾಗಿಯೆ
ಇದ್ದ ಕ್ರಾಪು ಕೆದರಿರುತ್ತಿತ್ತು. ಆಗ ನಡಿಗೆ ಎಂದಿಗಿಂತ ಹೆಚ್ಚು ರಭಸವಾಗಿರುತ್ತಿದ್ದು
ದನ್ನು, ಸುನಂದಾ ಕಂಡಳು. ಅಂತಹ ರಾತ್ರೆಗಳಲ್ಲಿ ಆತ ಮಾತನಾಡುತ್ತಲೇ ಇರಲಿಲ್ಲ.
ಒಮ್ಮೆ ಮಾತ್ರ ಆತ ತೊದಲಿದಂತೆ ತೋರಿತು.
ಅದರ ಕಾರಣ ಹೊಳೆದು ಸುನಂದಾ ದಿಗ್ಮೂಢಳಾದಳು. ನಿದ್ದೆ ಹೋಗಿ ಬಾಯಿ
ತೆರೆದು ಆತ ಗೊರಕೆ ಹೊಡೆಯತೊಡಗಿದಾಗ, ಸುನಂದಾ ಕೊಠಡಿಯೊಳಕ್ಕೆ ಸದ್ದಿಲ್ಲದೆ
ನಡೆದು ಹೋದಳು. ಆತನ ಉಸಿರಿನ ಜತೆಯಲ್ಲಿ ಅಪರಿಚಿತವಾದ ಅಸಹನೀಯವಾದ
ವಾಸನೆ ಹೊರಟು ಕೊಠಡಿಯಲ್ಲೆಲ್ಲ ವ್ಯಾಪಿಸುತ್ತಿತ್ತು. ಆತ ಸಂಜೆ ಏನು ಮಾಡುತ್ತಿದ್ದ
ನೆಂಬುದನ್ನು ಅಲ್ಲಿಯ ವಾತಾವರಣ ಯಾವ ಸಂದೇಹಕ್ಕೂ ಆಸ್ಪದವಿಲ್ಲದ ಹಾಗೆ ಸಾರಿ
ಹೇಳಿತು.
ರಕ್ತ ಸಂಚಾರವೇ ನಿಂತ ಹಾಗೆ ಒಮ್ಮೆ ತಣ್ಣಗಾಯಿತು ಸುನಂದೆಯ ಮೈ.
ಕೊರೆಯುವ ಚಳಿಗೆ ಸಿಲುಕಿದವರಂತೆ ಆಕೆಯ ಕೈ ಕಾಲುಗಳು ಕಂಪಿಸಿದುವು. ಆದರೂ
ಹೊದಿಕೆಯನ್ನು ಆತನ ಎದೆಯವರೆಗೂ ಎಳೆದು, ಸುನಂದಾ ಹಜಾರಕ್ಕೆ ಬಂದು
ಹಾಸಿಗೆಯ ಮೇಲುರುಳಿಕೊಂಡು, ಬಹಳ ಹೊತ್ತು ಅತ್ತಳು-ಸದ್ದಿಲ್ಲದೆ ಅತ್ತಳು.
ಅದಾದ ಮರುದಿನವೆ ಮಗು ಜ್ವರ ಹಿಡಿದು ಮಲಗಿತು. ಒಂದು ದಿನ, ಎರಡು
ದಿನ. ಜ್ವರ ಬಿಡಲೇ ಇಲ್ಲ. ಆ ಅನಾರೋಗ್ಯದ ಗೊಂದಲದ ನಡುವಿನಲ್ಲೂ ಒಂದು
ಆಸೆ ಆಕೆಯ ಮನಸ್ಸಿನಲ್ಲಿ ಮೊಳೆಯಿತು-ಮಗುವಿನ ಕಾಹಿಲೆಯ ಕಾರಣದಿಂದಲಾದರೂ
ಗಂಡ ಹಾದಿಗೆ ಬರುವನೆಂಬ ಆಸೆ.
ಆದರೆ ಆತ ನಿರ್ಲಕ್ಷ್ಯಭಾವದಿಂದಲೆ ಇದ್ದುದನ್ನು ಕಂಡು ಎರಡನೆಯ ರಾತ್ರೆ