ಪುಟ:ಪಾಲಿಗೆ ಬಂದ ಪಂಚಾಮೃತ.pdf/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪಾಲಿಗೆ ಬಂದ ಪಂಚಾಮೃತ

47

__ಅದು ಹೃದಯದ ನೋವಿನ ಆಳದಲ್ಲೆಲ್ಲೋ ತೇಲಿ ಮುಳುಗುತ್ತಿದ್ದ
ವಿಚಾರ. ಆದರೆ ಮಗುವಿನ ಕಾಹಿಲೆಯಿಂದಾಗಿ ಶೋಕತಪ್ತಳಾಗಿದ್ದ ಆ ತಾಯಿಯನ್ನು
ಆಗ ಪೀಡಿಸಲು ಮನಸ್ಸಿಲ್ಲದೆ ಸಮಯ ಕಾಯುತ್ತ ಆ ವಿಚಾರ ಮರೆ ಸೇರಿತು.
... ರಾಧಮ್ಮ ಎರಡು ನಿಮಿಷಗಳಲ್ಲಿ ಸಿದ್ಧರಾಗಿ ಬಂದರು. ಮಗುವನ್ನು
ತಾನೆತ್ತಿಕೊಳ್ಳುವೆನೆಂದರು. ಸುನಂದಾ ಬಿಡಲಿಲ್ಲ. ಅದೇ ಸರಿ-ಎಂದು ರಾಧಮ್ಮ
ಸುಮ್ಮನಾದರು.
ಏರಿ ಬರುತ್ತಿದ್ದ ಸೂರ್ಯನ ಬಿಸಿಲನ್ನೂ ಗಮನಿಸದೆ ಮೂರು ಬೀದಿಗಳಾಚೆ
ಯಿದ್ದ ಡಾಕ್ಟರ ಔಷಧಾಲಯಕ್ಕೆ ಅವರಿಬ್ಬರೂ ಧಾವಿಸಿದರು. ಆ ನಡಿಗೆಯ ನಡುವೆ
ರಾಧಮ್ಮನಿಗೆ ಭಯವಾಯಿತು: ಡಾಕ್ಟರ ಬಳಿಗೆ ಹೋಗುವುದರೊಳಗೇ ಮಗುವಿ
ಗೇನಾದರೂ ಆದರೆ? ಡಾಕ್ಟರನ್ನೇ ಮನೆಗೆ ಕರೆಸಬೇಕಾಗಿತ್ತು...
......
ಆದರೆ, ಔಷಧಾಲಯ ಸಮೀಪಿಸಿ ಡಾಕ್ಟರ ಮುಖ ನೋಡಿದೊಡನೆ ರಾಧಮ್ಮನ
ಆ ಭಯ ತೊಲಗಿತು. ಇಷ್ಟರಲ್ಲೆ ಮಗುವಿಗೆ ಗುಣವಾಯಿತೇನೋ__ಎಂಬಂತೆ
ಸುನಂದೆಯೂ ಸ್ವಲ್ಪ ಸುಧಾರಿಸಿಕೊಂಡಳು. ಅದು ಡಾಕ್ಟರ್ ದಂಪತಿ ನಡೆಸುತ್ತಿದ್ದ
ಚಿಕಿತ್ಸಾಲಯ. ಹೆಂಗಸರು ಮತ್ತು ಮಕ್ಕಳ ಕಾಹಿಲೆಗಳಿಗೆ ವಿಶೇಷ ಚಿಕಿತ್ಸೆ-ಎಂದು
ಅವರು ಬೋರ್ಡು ತಗಲಿಸಿದ್ದರು.
ಡಾಕ್ಟರ್‌ ದಂಪತಿ ಪರೀಕ್ಷೆ ಮಾಡಿ ಮಗುವಿಗೆ ಔಷಧಿ ಕೊಟ್ಟುದಾಯಿತು. ಅತ್ಯ
ಗತ್ಯವೆಂದು, ಆ ಪುಟ್ಟ ಮಗುವಿಗೆ ಒಂದು ಸೂಜಿಮದ್ದನ್ನೂ ಚುಚ್ಚಿದರು.
ಅದೇ ರೀತಿ, ಚುಚ್ಚು ಮಾತೊಂದನ್ನು ಮೃದುವಾಗಿ ಡಾಕ್ಟರಮ್ಮ ಹೇಳಿದರು:
“ಹೇಳಿ ಕಳಿಸ್ಬೇಕಾಗಿತ್ತಮ್ಮ. ಕಾಹಿಲೆ ಮಗೂನ ಎತ್ಕೊಂಡು ಹೀಗೆಲ್ಲ ಬರೋದೆ?
ಓದಿದೋರೂ ಹೀಗ್ಮಾಡಿದ್ರೆ ಹ್ಯಾಗೆ ಹೇಳಿ? ಎಲ್ಲಿ ನಿಮ್ಮ ಯಜಮಾನರು? ಕಾಣಿಸ್ಲೇ
ಇಲ್ವಲ್ಲ ಇತ್ತೀಚೆಗೆ?”
ಸುನಂದಾ ಏನೂ ಉತ್ತರ ಕೊಡಲಿಲ್ಲ. ಹಾಗೆ ಮಗುವನ್ನು ಕರೆತರಲು ಕಾರಣ
ರಾಗಿದ್ದ ರಾಧಮ್ಮನೂ ಮಾತನಾಡಲಿಲ್ಲ.
ಕಟುವಾಗಿ ತಾವು ಆಡಬಾರದಿತ್ತೇನೋ ಎಂದು ಸಂದೇಹಿಸುತ್ತ ಡಾಕ್ಟರಮ್ಮ
ಹೇಳಿದರು:
“ನೀವೇನೂ ಯೋಚಿಸ್ಬೇಡಿ. ನಾಳೆಯೊಳಗೆ ಮಗು ಹುಷಾರಾಗುತ್ತೆ. ನಾಳೆ
ಬೆಳಗ್ಗೆ ನಾನೇ ಬಂದು ನೋಡ್ತೀನಿ. ಸಾಯಂಕಾಲವೇನಾದರೂ ಜ್ವರ ಜಾಸ್ತೀಂತ
ತೋರಿದ್ರೆ ಹೇಳಿಕಳಿಸಿ.”
... ಸಾಹಸದ ಮತ್ತು ಅತ್ಯಂತ ಮಹತ್ವದ ಕೆಲಸವನ್ನು ಯಶಸ್ವಿಯಾಗಿ ನೆರ
ವೇರಿಸಿದವರಂತೆ ರಾಧಮ್ಮನೂ ಸುನಂದೆಯ ಮಗುವಿನೊಡನೆ ಮನೆ ತಲಪಿದರು.
ರಾಧಮ್ಮ ಮನೆಯ ಬೀಗ ತೆಗೆದೊಡನೆ ಸುನಂದಾ ಒಳಹೋಗಿ ಮಗುವನ್ನು