ಪುಟ:ಪಾಲಿಗೆ ಬಂದ ಪಂಚಾಮೃತ.pdf/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪಾಲಿಗೆ ಬಂದ ಪಂಚಾಮೃತ

49

ಗೊಳಿಸಲು ಸಿದ್ಧಳಾಗುತ್ತ ದೀರ್ಘವಾಗಿ ನಿಟ್ಟುಸಿರು ಬಿಟ್ಟು ಅಂದಳು:
“ನಾನೇನಮ್ಮ ಹೇಳ್ಲಿ? ನನಗೊಂದೂ ಗೊತ್ತಾಗೋದಿಲ್ಲ. ನನ್ನ ಗತಿ
ಆಗ್ಹೋಯ್ತು ರಾಧಮ್ಮ. ನಾನು ಸತ್ತಿದೀನೋ ಬದುಕಿದೀನೋ ಅದೇ ನನಗೆ
ತಿಳೀದು ....”
ಒಂದು ಜೀವ ಎಲ್ಲ ದುಃಖವನ್ನೂ ಮಾತುಗಳಲ್ಲಿ ತೋಡಿಕೊಂಡಿತು.
ಇನ್ನೊಂದು ಜೀವ ಆ ಎಲ್ಲ ಮಾತುಗಳನ್ನೂ ಸಹಾನುಭೂತಿಯಿಂದ ಕೇಳಿತು.

ರಾಧಮ್ಮ ತುಟಿ ಪಿಟಕ್ಕೆನ್ನದೆ ಎಲ್ಲದಕ್ಕೂ ಕಿವಿಗೊಟ್ಟರು. ಅವರು ಊಹಿಸಿದ್ದು
ದೊಂದೂ ಸುಳ್ಳಾಗಿರಲಿಲ್ಲ. ಬತ್ತಿದ ಕಪೋಲಗಳೊಡನೆ ಇಂಗಿದ ಕಣ್ಣೀರಿನೊಡನೆ
ಸುನಂದಾ ತನ್ನ ಕತೆ ಮುಗಿಸಿದಾಗ ರಾಧಮ್ಮನೂ ನಿಟ್ಟುಸಿರು ಬಿಟ್ಟು ಅಂದರು:
“ಧೈರ್ಯವಾಗಿರಿ ಸುನಂದಾ. ಎಲ್ಲಾ ಸರಿ ಹೋಗುತ್ತೆ. ಅವರನ್ನ ಹಾದಿಗೆ
ತರೋದು ನಿಮಗೆಷ್ಟರ ಕೆಲಸ? ಯಾವ ಸುರಸುಂದರಿಗೆ ಕಡಮೆ ನೀವು? ಅದೇನು
ಕೊರತೆ ಇದೆ ನಿಮ್ಮಲ್ಲಿ? ಯಾಕೇಂತ ಆತ ಹೀಗೆ ಮಾಡ್ಬೇಕು?”
ಅದು, ಸಮಾಧಾನದ ಮಾತು ಹೌದೋ ಅಲ್ಲವೋ. ಆದರೆ ರಾಧಮ್ಮನ ಮನ
ಸ್ಸಿನಲ್ಲಿ ಹುಟ್ಟಿ ಬೆಳೆದ ತರ್ಕ ಸರಣಿ ಅಂಥಾದ್ದು:
ಅಬಲೆಯಾದ ಸುನಂದಾ ಅಂದಳು:
“ಎಲ್ಲಾ ನಾನು ಪಡಕೊಂಡು ಬಂದಿರೋದು ರಾಧಮ್ಮ. ಯಾರೇನು
ಮಾಡೋದಕ್ಕಾಗುತ್ತೆ?”
ಆ ನಿರಾಸೆಯ ಧ್ವನಿ ರಾಧಮ್ಮನಿಗೆ ಒಪ್ಪಿಗೆಯಾಗಲಿಲ್ಲ.
“ಏನೂ ಆಗೋಲ್ಲ ಸುನಂದಾ. ಸುಮ್ನಿರಿ. ದೇವರಿದ್ದಾನೆ. ಯಾವ
ಚಿಂತೇನೂ ಮಾಡ್ಬೇಡಿ. ಮೊದಲು ಮಗೂ ಸುಧಾರಿಸ್ಕೊಳ್ಲಿ. ಆ ಮೇಲೆ ಎಲ್ಲಾ
ಮಾಡೋಣ.”
“ಈ ಮಗು ಹುಟ್ಟಿ ಇಷ್ಟೆಲ್ಲ ಅಷ್ಟೈಶ್ವರ್ಯ ಬಂತಮ್ಮ ನನಗೆ.”
“ಪಾಪ! ಕೂಸಿಗೆ ಯಾಕಂತೀರಾ?....ನೀವು ಹೀಗೆಲ್ಲ ಕೊರಗೋದು ಖಂಡಿತ
ಸರಿಯಲ್ಲ. ನೀವು ಅನ್ನ ನಿದ್ದೆ ಬಿಟ್ಟು ಸೊರಗ್ತಾ ಇದ್ದು ಎದೆ ಹಾಲು ಬತ್ತಿ ಹೋದರೆ
ಮಗು ಹ್ಯಾಗಮ್ಮ ಸುಖವಾಗಿರುತ್ತೆ?”

7