ಪುಟ:ಪಾಲಿಗೆ ಬಂದ ಪಂಚಾಮೃತ.pdf/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪಾಲಿಗೆ ಬಂದ ಪಂಚಾಮೃತ

63

 ಆದರೆ ಸ್ವಲ್ಪ ಹೊತ್ತಾದ ಮೇಲೆ, 'ಆ ಹೆಂಗಸರು ಬುದ್ಧಿವಂತರೇ ಇರಬಹುದು.
ನನಗೆ ಸುಳಿವು ಸಿಗಬಾರದೆಂದೇ ಈ ದಿನ ಆತನನ್ನು ಕಳಿಸಿಲ್ಲ'
_ಎಂಬ ಸಂದೇಹ ಮೂಡಿತು.
'ಕತ್ತಲಾದಮೇಲೆ ಆ ಹುಡುಗ ಬಂದು ನೋಡಿ ಹೋದರೂ ಹೋಗಬಹುದು'
-ಎಂಬ ಅಭಿಪ್ರಾಯ ಬಲಗೊಂಡಿತು.
ಹೀಗೆ, ಅಸಮಾಧಾನದಿಂದ ಕುದಿಯುತ್ತಿದ್ದ ಮನಸ್ಸಿನೊಡನೆ, ಆ ರಾತ್ರೆ
ಪುಟ್ಟಣ್ಣ ಮನೆ ಸೇರಿದ.
ಅದರ ಆನಂತರದ ಸಂಜೆ, ಮುಳ್ಳಿನಮೇಲೆಯೆ ತಾನು ನಡೆಯುತ್ತಿದ್ದಂತೆ
ಪುಟ್ಟಣ್ಣನಿಗೆ ಭಾಸವಾಯಿತು. ಆ ಬೀದಿಯಲ್ಲೇ ಇದ್ದ ಶ್ಯಾಮ. ಆತನನ್ನು ಕಂಡೊ
ಡನೆ ಪುಟ್ಟಣ್ಣನ ಮೈಯೆಲ್ಲ ಉರಿಯೆದ್ದಿತು. ಹುಡುಗನನ್ನು ಹಿಡಿದುಕೊಂಡು ಚೆನ್ನಾಗಿ
ಥಳಿಸಿ ಕಳಿಸಬೇಕೆಂದು ತೋರಿತು.
ಆದರೆ ಮರುಕ್ಷಣವೆ, ಅಂತಹ ಯೋಚನೆ ಮೂಡಿದುದಕ್ಕಾಗಿ ಪುಟ್ಟಣ್ಣ ತನ್ನಲ್ಲೇ
ನಕ್ಕ.
ಶ್ಯಾಮನ ಮೇಲೆಯೇ ನೋಟವಿಟ್ಟಿದ್ದು, ಆತನೊಮ್ಮೆ ತನ್ನನ್ನು ನೋಡಿದಾಗ,
ಸನ್ನೆ ಮಾಡಿ ಕರೆದ. ಹುಡುಗ ಅಳುಕಿದಂತೆ ತೋರಿತು. ಆದರೂ ಧೈರ್ಯಶಾಲಿಯಂತೆ
ಶ್ಯಾಮ ತನ್ನೆಡೆಗೆ ಬಂದುದನ್ನು ಪುಟ್ಟಣ್ಣ ಕಂಡ.
ಹುಡುಗ ಹತ್ತಿರ ಬರುತ್ತಲೆ ಪುಟ್ಟಣ್ಣನೆಂದ:
"ಶ್ಯಾಮೂ, ಒಂದು ಕೆಲಸ ಮಾಡ್ತೀಯೇನಪ್ಪ?"
"ಏನು?"
"ನಾನು ಬರೋದು ತಡವಾಗುತ್ತೇಂತ ನಮ್ಮನೇಲಿ ಹೇಳ್ತೀಯಾ?"
"ಹೇಳ್ತೀನಿ."
"ಒಳ್ಳೆಯವನು. ಅಷ್ಟು ಮಾಡಪ್ಪ."
ಹುಡುಗನಿಗೆ ಕೊಡಲೆಂದು ಪುಟ್ಟಣ್ಣ ಚಿಲ್ಲರೆದುಡ್ಡಿಗೆ ಕೈ ಹಾಕಿದ.
“ಆಚೆ ಬೀದೀಲಿ ಅಂಗಡಿ ಇದೆ. ಪೆಪ್ಪರಮೆಂಟು ತಗೊಂಡು ತಿಂದ್ಕೊಂಡು
ಹೋಗು ಶ್ಯಾಮೂ."
"ಪೆಪ್ಪರಮೆಂಟೆ? ಬೇಡಿ. ಏನೂ ಬೇಡಿ,"
_ಎನ್ನುತ್ತ ಶ್ಯಾಮ ಹೊರಟುಹೋದ.
ಹಲ್ಲುಕಡಿದು 'ಥೂ' ಎಂದು ಉಗುಳಬೇಕೆಂದು ತೋರಿತು ಪುಟ್ಟಣ್ಣನಿಗೆ.
... ಆ ರಾತ್ರೆ ಆಟದಲ್ಲಿ ಬಾರಿ ಬಾರಿಗೂ ಪುಟ್ಟಣ್ಣ ಸೋತ. ರೋಸಿದ ಮನ
ಸ್ಸನ್ನು ತಣ್ಣಗಿಡಲೆಂದು ಆತ ಕುಡಿದ.
ಒಮ್ಮೆ ಆ ಮನೆಗೆ ತೀರಸಮೀಪದಲ್ಲೆ, ಕಿಟಕಿ ದಾಟಿ, ಹುಡುಗನೊಬ್ಬ ಚಲಿಸು
ತ್ತಿದ್ದಂತೆ ತೋರಿತು, 'ಶ್ಯಾಮನಿರಬಹುದು' ಎಂದಿತು ಪ್ರಕ್ಷುಬ್ಧವಾಗಿದ್ದ ಮನಸ್ಸು.