ಪುಟ:ಪಾಲಿಗೆ ಬಂದ ಪಂಚಾಮೃತ.pdf/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

72

ಕನಸು



ನೋಡಿದಳು.
ರಾಧಮ್ಮನೇ ಕೆಲಸದವಳಿಗೆ ಅಂದರು:
"ಈಗೇನೂ ಗುಡಿಸ್ಬೇಡ. ಮುಸುರೆ ಪಾತ್ರೆ ಹೊರಗೆಹಾಕ್ತೀನಿ. ಬೆಳಗಿ
ಇಟ್ಬಿಟ್ಟು ಹೋಗು."
ಆಕೆ ರಾಧಮ್ಮನನ್ನು ನೋಡಿದಳು. ಮಗುವನ್ನು ಪಕ್ಕಕ್ಕೆ ಇಳಿಸಿ ಸೆರಗು ಸರಿ
ಪಡಿಸಿಕೊಳ್ಳುತ್ತಿದ್ದ ಸುನಂದೆಯನ್ನೂ ನೋಡಿದಳು.
"ಯಾಕಮ್ಮಾ? ಅಮ್ಮಾವರಿಗೆ ಮೈಸರಿಯಾಗಿಲ್ವಾ?"
ಆ ತಮಿಳು ಪ್ರಶ್ನೆಯ ಜತೆಯಲ್ಲೇ ಆಕೆಯ ನೋಟ, ಪರೀಕ್ಷಿಸುವಂತೆ ಅ
ಹೆಂಗಸರನ್ನು ಕಾಡಿತು.
"ಇಲ್ಲ, ಅಮ್ಮಾವರಿಗೆ ಮೈಚೆನ್ನಾಗಿಲ್ಲ. ಪಾತ್ರೆ ತೊಳೆದಿಟ್ಟು ನೀನು ಹೊರ
ಟ್ಹೋಗು. ಇವತ್ತು ಬೇರೇನೂ ಮಾಡ್ಬೇಡ"
—ಎಂದು ರಾಧಮ್ಮ ಸಂಜ್ಞೆಗಳ ನೆರವಿನಿಂದ ಕನ್ನಡದಲ್ಲೇ ಉತ್ತರವಿತ್ತರು.
ಹಾಗೆಯೇ, ಅಡುಗೆ ಮನೆಗೆ ಹೋಗಿ ಮುಸುರೆ ಪಾತ್ರೆಗಳನ್ನು ತಂದು ಹೊರ
ಹಾಕಿದರು.
"ಕಾಫಿ ಕುಡೀರಿ ಸುನಂದಾ. ಆರ್ಹೋಗ್ತಿದೆ"
—ಎಂದು ಒತ್ತಾಯಿಸುವ ಧ್ವನಿಯಲ್ಲಿ ಹೇಳಿ, ಸುನಂದೆ ಕಾಫಿಯ ಲೋಟ
ವನ್ನು ಕೈಗೆತ್ತಿಕೊಳ್ಳುವಂತೆ ಮಾಡಿದರು.

****

ಬೆಳಗು ಮಧಾಹ್ನವಾಯಿತು. ಸೂರ್ಯ ಮೇಲೇರಲು ಹಿಡಿದ ಹೊತ್ತು
ಎಂದಿನಷ್ಟೇ. ಆದರೆ ಸುನಂದೆಯ ಪಾಲಿಗೇನೋ ಅದು ದೀರ್ಘಕಾಲ ಎನ್ನುವಂತೆ,
ಈ ದಿನ ಎಂದಿಗಿಂತ ಹೆಚ್ಚು ನಿಧಾನವಾಗಿ ಹೊತ್ತು ಹೋಗುತ್ತಿದೆ ಎನ್ನುವಂತೆ, ಭಾಸ
ವಾಯಿತು.
ರಾಧಮ್ಮನ ಸ್ನೇಹದ ತಣುಪಿನಲ್ಲಿ ಸುನಂದೆಯ ಮೈ ಬಿಸಿ ಏರಲಿಲ್ಲ. ಶ್ಯಾಮ
ಬಂದು ಮಗುವನ್ನೆತ್ತಿಕೊಂಡು ಹೋದ. ರಾಧಮ್ಮ ಒತ್ತಾಯ ಪಡಿಸಿ, ಸುನಂದೆ
ಯನ್ನು ತಮ್ಮ ಮನೆಗೆ ಕರೆದೊಯ್ದರು.
ಬಾಣಂತಿತನ ಮುಗಿಸಿಕೊಂಡು ಹಿಂತಿರುಗಿದ ಮೇಲೆ ಆ ರೀತಿ ಆಕೆ ಮನೆಯಿಂದ
ಹೊರಬಿದ್ದಿರಲೇ ಇಲ್ಲ. ಏಳೆಂಟು ತಿಂಗಳ ಕಾಲವೂ ಒಂದೇ ಸಮನೆ ಮನೆಯೊಳಗೇ
ಇದ್ದ ಹೆಂಗಸು...ವಿದ್ಯಾವತಿಯಾಗಿದ್ದ ಸುನಂದೆಗೆ ಆ ಯೋಚನೆ ವಿಚಿತ್ರವಾಗಿತ್ತು.
ಹೆಣ್ಣು ಯಾವಾಗಲೂ ನಾಲ್ಕು ಗೋಡೆಗಳ ನಡುವಿನ ಸೆರೆಯಾಳು ಎಂದು, ಹಿಂದೆ
ಅವಳು ಭಾವಿಸಿರಲಿಲ್ಲ. ಒಂದು ದಿನ ತನಗೆ ಅಂತಹ ಬಾಳ್ವೆ ಲಭಿಸಬಹುದೆಂದು
ಯೋಚಿಸಿಯೂ ಇರಲಿಲ್ಲ. ಆದರೆ ಈಗಿನ ಪರಿಸ್ಥಿತಿಯೊ? ಯೋಚಿಸಿ ಬಯಸಿದ್ದುದು
ದೊರೆತಿರಲಿಲ್ಲ. ಯೋಚಿಸದೆ ಇದ್ದುದು—ಬಯಸದೇ ಇದ್ದುದು—ದೊರೆತಿತ್ತು,