ಪುಟ:ಪಾಲಿಗೆ ಬಂದ ಪಂಚಾಮೃತ.pdf/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಪಾಲಿಗೆ ಬಂದ ಪಂಚಾಮೃತ

77

ಹಾಗೆ ಮಾಡುವುದರಲ್ಲಿ ತಪ್ಪೇನೂ-ಇಲ್ಲ ಎಂದುಕೊಂಡಳು ಸುನಂದಾ.
ಅಲ್ಲದೆ, ರಾಧಮ್ಮ ಹೇಳಿದ್ದ ಹಾಗೆ ಆತ ಬರುವನೆಂಬ ಭರವಸೆಯಾದರೂ
ಏನು?
ಸುಮ್ಮನಿರುವುದೇ ಸರಿ ಎಂದು, ಬಹಳ ಹೊತ್ತು ಗೋಡೆಗೊರಗಿ ಸುನಂದಾ
ಕುಳಿತಳು.
ತಣ್ಣನೆ ಗಾಳಿ ಹೊರಗಿಂದ ಬೀಸಿತು.
ಆಕೆಯ ಮನೋನಿರ್ಧಾರವೂ ಮೆಲ್ಲಮೆಲ್ಲನೆ ಸಡಿಲಿತು.
ಎದ್ದು, ಅಡುಗೆ ಮನೆಯೊಳ ಹೊಕ್ಕು, ಇಜ್ಜಲು ಒಲೆಯಲ್ಲಿ ಆಕೆ ಉರಿಮಾಡಿ,
ಗಂಡನಿಗೋಸ್ಕರ-ಆತನೊಬ್ಬನಿಗೋಸ್ಕರ-ಅನ್ನಕ್ಕೆ ನೀರಿಟ್ಟಳು. ಅನ್ನ ಬೆಂದಾಗ
ಅದನ್ನಿಳಿಸಿ ಒಂದಿಷ್ಟು ಸಾರು ಮಾಡಿದಳು.
ಆ ಕೆಲಸ ಮುಗಿಸಿ ಆಕೆ ಬೆಂಕಿ ಆರಿಸುತ್ತಿದ್ದಾಗ, ಹೆಪ್ಪು ಹಾಕಿದ ಹಾಲಿನೊಡನೆ
ಬಂದು ಬಿಟ್ಟರು ರಾಧಮ್ಮ. ಆವಿಯೇಳುತ್ತಿದ್ದ ಅಡುಗೆಯನ್ನು ಕಂಡು ಅವರು
ಅವಾಕ್ಕಾದರು.
ಕೆಂಡಗಳ ಕೊನೆಯ ಹೊಗೆ ಚಿಮಿಣಿಯ ಮೇಲಕ್ಕೆ ಹೋದಾಗ ರಾಧಮ್ಮ
ಕೇಳಿದರು:
“ನಮ್ಮನೆ ಅಡುಗೆ ಹಿಡಿಸಲಿಲ್ವೆ ಸುನಂದಾ?”
“ಹಾಗೆ ಹೇಳ್ಬೇಡಿ ರಾಧಮ್ಮ. ನನಗೆ ಹಸಿವಿಲ್ಲ, ನಿಜವಾಗಿಯೂ ಹಸಿವಿಲ್ಲ.”
ರಾಧಮ್ಮ ಆಶ್ಚರ್ಯದಿಂದ ಸುನಂದೆಯನ್ನೆ ನೋಡಿದರು. ಹಾಗಾದರೆ ಗಂಡನಿ
ಗೋಸ್ಕರ ಅಡುಗೆ ಮಾಡಿದೀರಾ? ಎಂದು ಕೇಳಬೇಕೆನ್ನಿಸಿತು. ಆದರೆ ಹಾಗೆ ಕೇಳು
ವುದು ಔಚಿತ್ಯವಲ್ಲವೆಂದು ಸುಮ್ಮನಾದರು.
“ಆಗಲಮ್ಮ. ನಿಮ್ಮಿಷ್ಟ”
—ಎಂದಷ್ಟೆ ಹೇಳಿ ತಮ್ಮ ಮನೆಗೆ ಹೋದರು.
....ಸುನಂದಾ ಹೊರಗಿನ ಬಾಗಿಲಿಗೆ ಅಗಣಿಹಾಕಿ ಮಲಗಿಕೊಂಡಳು. ಆಕೆಯ
ಅಂಗಾಂಗಗಳೆಲ್ಲ 'ನಿದ್ದೆ ಬೇಕು' ಎಂದುವು.
ದೀಪ ಉರಿಯುತ್ತಿದ್ದಂತೆಯೇ ಸುನಂದಾ ನಿದ್ದೆ ಹೋದಳು.

****

ಬಾಗಿಲು ತಟ್ಟಿದ ಸದ್ದು. ಕರೆದ ಸ್ವರ.
ಸುನಂದಾ ಕಣ್ಣು ತೆರೆದಳು. ಗಂಡ ಬಂದನೇನೋ ಎಂದು ಆಕೆ ಏಳಬಯಸಿ
ದಳು. ಆದರೆ ಮೈ ಕೈ, ಅಲುಗಿಸುವುದೂ ಸಾಧ್ಯವಾಗದ ಹಾಗೆ ನೋಯುತ್ತಿದ್ದುವು.
ಮತ್ತೆ ಬಾಗಿಲಿಗೆ ಬಡಿತ.
“ಅವ್ವಾ! ಆಲು ಆಕಿಸ್ಕೊಳ್ರೆವ್ವಾ...”
ಹಾಲವ್ವ ಬಂದಿದ್ದಳು-ಗಂಡನಲ್ಲ. ಇದು ರಾತ್ರೆಯಲ್ಲ ಹಾಗಾದರೆ-ಇದು