ಪುಟ:ಪಾಲಿಗೆ ಬಂದ ಪಂಚಾಮೃತ.pdf/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

78

ಕನಸು

ಬೆಳಗು.
ಸುನಂದಾ ಪಕ್ಕಕ್ಕೆ ದೃಷ್ಟಿ ಹೊರಳಿಸಿದಳು. ಹೊರಗಿನಿಂದ ಬೆಳಕು ಒಳಗಿನ
ವಿದ್ಯುದ್ದೀಪಕ್ಕೆ ಸವಾಲು ಹಾಕುತ್ತ ತೂರಿ ಬರುತ್ತಿತ್ತು.
ಗಂಡ ರಾತ್ರಿ ಮನೆಗೆ ಬಂದೇ ಇರಲಿಲ್ಲ.

೧೨

ಎದುರು ಭಾಗದಲ್ಲಿ ಆ ಬೀದಿಯ ಆಚೆಗೆ ಖಾಲಿಯಾಗಿದ್ದ ಮನೆಗೆ ಹೊಸ
ಬಿಡಾರ ಬಂತು-ಶ್ರೀಮಂತರದು. ಯುವಕ ದಂಪತಿ ಹಿರಿಯರು ಮತ್ತು ಬಳಗ, ಮನೆ
ತುಂಬ ಊಳಿಗದವರು.
ನಿರ್ವಿಕಾರವಾದ ಸಹಜ ಕುತೂಹಲದಿಂದ ರಾಧಮ್ಮ ಆ ಸಂಸಾರವನ್ನು
ನೋಡಿದರು.
ತನ್ನ ಮೌನಸಂಕಟದಲ್ಲಿ ದಿನ ಕಳೆಯುತಿದ್ದ ಸುನಂದೆಯೂ ಹೊರಗೆ ನೋಡಲು
ದೊರೆತ ಹೊಸ ಆಕರ್ಷಣೆಯತ್ತ ದೃಷ್ಟಿ ಬೀರಿದಳು.
ಆ ಮನೆ ಅಲಂಕೃತವಾಯಿತು. ಕಿಟಿಕಿ ಬಾಗಿಲುಗಳಿಗೆ ತೆಳುವಾದ ನೀಲಿ ಪರದೆ;
ಮಹಡಿಯ ಗೋಪುರದಲ್ಲಿ ಕುಳಿತುಕೊಳ್ಳಲು ಆಸನಗಳು; ವಿದ್ಯುತ್ ದೀಪಗಳು-ಆ
ದೀಪಗಳಿಗೆ ಮೃದುವರ್ಣದ ಆವರಣ; ಇದೆಯೋ ಇಲ್ಲವೋ ಎನ್ನುವಷ್ಟು ಮಧುರ
ವಾಗಿ ಸದ್ದು ಮಾಡುತ್ತಿದ್ದ ರೇಡಿಯೋ; ಗದ್ದಲ ಮಾಡುವುದೇ ಈ ಜನರಿಗೆ ತಿಳಿಯ
ದೇನೋ ಎನ್ನುವಂತಹ ವಾತಾವರಣ... ಆ ವಿಶಿಷ್ಟತೆಯಿಂದಲೇ ಮನೆ ಯಾರ ಗಮನ
ವನ್ನಾದರೂ ಒಂದು ಕ್ಷಣ ಸೆಳೆಯುವಂತಾಯಿತು.
ಹಿಂದೆ ಅಲ್ಲಿ ಬಿಡಾರವಿದ್ದವರಿಗೆ ಕಾರಿರಲಿಲ್ಲ. ಗ್ಯಾರೇಜು, ಸೌದೆ ಇಜ್ಜಲು
ಮೂಟೆಗಳಿಗೆ ಆವಾಸವಾಗಿತ್ತು. ಈಗ ಆ ಜಾಗದಲ್ಲಿ ಮನೆಯವರ ಫಿಯೆಟ್ ಕಾರು
ಬಂದು ನಿಂತಿತು.
ಮೊದಲ ದಿನವೇ ರಾಧಮ್ಮ ಹೇಳಿದರು:
“ಸುನಂದಾ, ಆಕೆ ಗರ್ಭಿಣಿ.”
ಸುನಂದೆಯ ನೋಟಕ್ಕೆ ಅದು ಸ್ಪಷ್ಟವಾಗಲಿಲ್ಲ.
“ಇರಲಾರದು ರಾಧಮ್ಮ.”
“ನನಗೆ ಹೇಳ್ತೀರಾ! ಸರಿ, ಸರಿ. ಇನ್ನೂ ಸ್ವಲ್ಪ ದಿವಸ ಹೋಗಲಿ, ನಿಮಗೆ
ಗೊತ್ತಾಗುತ್ತೆ.”
“ಏನೋಮ್ಮ, ಇದ್ದರೂ ಇರಬಹುದು.”