ಪುಟ:ಪಾಲಿಗೆ ಬಂದ ಪಂಚಾಮೃತ.pdf/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

82

ಕನಸು

ಸುನಂದಾ ದೃಷ್ಟಿ ತಿರುಗಿಸಿ ನೋಡಿದಳು. ಎದುರುಮನೆಯಾಕೆ ಮಹಡಿಯ ಮೇಲೆ
ನಿಂತಿದ್ದವಳು ಕೈ ಚಾಚಿ ಸರಸ್ವತಿಯನ್ನು 'ಬಾ ಬಾ' ಎಂದು ಸನ್ನೆ ಮಾಡಿ ಕರೆಯು
ತಿದ್ದಳು. ಸುನಂದೆಯನ್ನು ಕಂಡಾಗ ಆಕೆ ನಕ್ಕಳು. ಪ್ರತಿಯಾಗಿ ಸುನಂದೆಯೂ
ಮುಗುಳುನಗಬೇಕಾಯಿತು.
ಅದು ಪೀಠಿಕೆ.
ಆಕೆ, ತಾಯಿ ಮಗಳಿಬ್ಬರನ್ನೂ ಕರೆದಳು. ಸುನಂದಾ ಮಗುವಿನ ಕಡೆಗೂ ಮನೆ
ಯೊಳಕ್ಕೂ ಬೊಟ್ಟು ಮಾಡಿ, 'ಕೆಲಸವಿದೆ' ಎಂದು ಸಂಜ್ಞೆಯ ಭಾಷೆಯಲ್ಲಿ ತಿಳಿಸಿದಳು.
'ಬನ್ನಿ' ಎಂದು ಒತ್ತಾಯದ ಪ್ರತಿಸಂಜ್ಞೆ ಮತ್ತೂ ಬಂತು.
'ಒಲ್ಲೆ' ಎಂದೇನೋ ತಲೆಯಾಡಿಸಿ ತಿಳಿಸಿದಳು ಸುನಂದಾ. ಆದರೆ 'ಕ್ಷಮಿಸಿ'
ಎಂಬ ಪದಕ್ಕೆ ಸಂಕೇತ ತಿಳಿಯಲಿಲ್ಲ.
ಆಕೆ ಮಹಡಿಯ ಮೇಲೆ ನಿಂತಿದ್ದವಳು ಒಳಹೋದಂತೆ ಕಂಡಿತು. ಸದ್ಯಃ
ತಪ್ಪಿಸಿಕೊಂಡೆ-ಎಂದು ಸುನಂದೆಗೆ ಅನಿಸಿದರೂ ಬೇಸರ ಹೆಚ್ಚಿತು.
ಆದರೆ ಆ ಕ್ಷಣವೆ ಎದುರು ಮನೆಯಾಕೆ ಬೀದಿಗಿಳಿದು ಬಂದುದನ್ನು ಸುನಂದಾ
ಕಂಡಳು. ತನ್ನ ಮನೆಯ ಕಡೆಗೇ ಆಕೆ ಹೊರಟಿದ್ದಂತೆ ತೋರಿತು. ಏನು ಮಾಡ
ಬೇಕೆಂದು ತೋಚದೆ ಸುನಂದಾ ಅತ್ತಿತ್ತ ನೋಡಿ ಬಾಗಿಲೆಳೆದುಕೊಂಡು ತಾನೂ
ಬೀದಿಯ ಕಡೆಗೆ ನಡೆದಳು. ಹಿತ್ತಿಲ ಗೋಡೆಯಾಚೆ ಅವರು ಸಂಧಿಸಿದರು.
ಆಕೆ ಕೈಯಲ್ಲಿದ್ದ ಪೊಟ್ಟಣದಿಂದ ಪುಟ್ಟ ಬಿಸ್ಕತ್ತನ್ನೆತ್ತಿ ಮಗುವಿನ ಬಾಯಿಗೆ ಇಡ
ಹೋದಳು. ತಾಯಿಯತ್ತ ಒಮ್ಮೆ ನೋಡಿ ಸರಸ್ವತಿ ಬಾಯಿ ತೆರೆದಳು. ಆಕೆ
ಪೊಟ್ಟಣವನ್ನು ಗೋಡೆಯ ಮೇಲಿಟ್ಟು, ಕೈ ಚಾಚಿ ಮಗುವನ್ನೆತ್ತಿಕೊಂಡಳು.
“ಸೀರೆ ಕೊಳೆಯಾಗುತ್ತೆ” :
—ಎಂದಳು ಸುನಂದಾ.
“ಪರವಾಗಿಲ್ಲರೀ.”
ವಿಶಿಷ್ಟ ಪದೋಚ್ಚಾರದ ಕನ್ನಡ. ಮಧುರ ಕಂಠ.
ಸುನಂದಾ ಆಕೆಯನ್ನೇ ವಾತ್ಸಲ್ಯದ ದೃಷ್ಟಿಯಿಂದ ನೋಡಿದಳು. ಆ ಸ್ವರ
ಮತ್ತೂ ಕೇಳಿಸಿತು.
“ನಿಮ್ಮ ಮಗು ತುಂಬಾ ಮುದ್ದಾಗಿದೆ.”
ಸುನಂದಾ ಮುಗುಳು ನಕ್ಕಳು.
“ಎಷ್ಟು ತಿಂಗಳು?”
“ಒಂಭತ್ತು ನಡೀತಿದೆ.”
“ಎಷ್ಟು ಪೌಂಡು?”
ಭಾರ. ಸುನಂದೆಗೆ ಅದು ಗೊತ್ತಿರಲಿಲ್ಲ. ಅವರು ಆಗಾಗ್ಗೆ ಮಗುವಿನ ತೂಕ
ನೋಡುವಷ್ಟು ಶ್ರೀಮಂತರಾಗಿರಲಿಲ್ಲ.