ಪುಟ:ಪಾಲಿಗೆ ಬಂದ ಪಂಚಾಮೃತ.pdf/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪಾಲಿಗೆ ಬಂದ ಪಂಚಾಮೃತ

89

“ಕೂಡಿಬರುತ್ತೋ ಇಲ್ವೋ ನನಗೆ ಗೊತ್ತಿಲ್ಲ. ಹುಡುಗೀನ ನೋಡಬೇಕೂಂತ
ಅವರು ಅಂದರೆ, ಮುಂದಿನ ವಾರ ವಿಜಯಾನ್ನ ಕರಕೊಂಡು ಬರ್ತೀನಿ.
... ಅದಕ್ಕಿಂತ ಮುಖ್ಯವಾಗಿ, ನಿನ್ನ ಗಂಡನ್ನ ಕಂಡು ಮಾತಾಡ್ತೀನಿ.”
ಸುನಂದಾ ಕೇಳಿದಳು:
“ಏನು ಮಾತಾಡ್ತೀಯ ಅಪ್ಪಾ?”
“ಭಗವಂತ ಅದೇನು ಬುದ್ಧಿ ಕೊಡ್ತಾನೋ ಅದನ್ನ ಮಾತಾಡ್ತೀನಿ ಸುಂದಾ.
ಹೆದರಬೇಡ. ನಿನ್ನ ಮತ್ತು ಈ ಕಂದಮ್ಮನ ಸುಖ ಮರೆತು ಯಾವತ್ತೂ
ಮಾತಾಡೊಲ್ಲ.”
“ಊರಿಗೆ ಇವತ್ತೇ ಹೊರಡ್ತೀಯಾ ?”
“ಹೂಂ. ರಾತ್ರೆ ಗಾಡೀಲೆ ಹೊರಡ್ತೀನಿ. ಅದಕ್ಮುಂಚೆ ಇಲ್ಲಿಗೆ ಬಂದು
ಹೋಗ್ತೀನಿ.”

****

ಅವರು ಹೊರಟುಹೋದ ಸ್ವಲ್ಪ ಹೊತ್ತಿನಲ್ಲೆ ರಾಧಮ್ಮ ಬಂದರು. ಪ್ರಸನ್ನ
ಚಿತ್ತಳಾಗಿ ಕುಳಿತಿದ್ದ ಸುನಂದೆಯನ್ನು ಕಂಡು ಅವರಿಗೆ ಸಂತೋಷವಾಯ್ತು. ರಾಧಮ್ಮ
ಪ್ರಶ್ನೆ ಕೇಳುವುದಕ್ಕೆ ಮುಂಚಿತವಾಗಿ ಸುನಂದೆಯೇ ಅಂದಳು:
“ನಮ್ಮ ತಂದೆ ಬಂದಿದ್ರು ರಾಧಮ್ಮ.”
“ನೋಡ್ದೆ. ಅವರಿಗೆಲ್ಲ ಹೇಳಿದಿರಾ?”
“ಸ್ವಲ್ಪ ಹೇಳ್ದೆ. ಸ್ವಲ್ಪ ಊಹಿಸ್ಕೊಂಡ್ರು...... ಸಾಮಾನ್ಯವಾಗಿ ಹುಡುಗೀನ
ಮದುವೆಮಾಡಿ ಕೊಟ್ಮೇಲೆ ಹೆತ್ತವರ ಭಾರ ಇಳಿಯುತ್ತೆ; ನಾನು ಮಾತ್ರ ಇನ್ನೂ
ಹೊರೆಯಾಗಿಯೇ ಇದೀನಿ. ಅಲ್ವೆ ರಾಧಮ್ಮ?”.
ಅಳಿಯ-ಮಾವನ ಭೇಟಿಯಿಂದ ಸುನಂದೆಗೆ ಹಿತವಾಗುವಂಥದು ಏನಾದರೂ
ಇದೆಯೇ ಎಂದು ರಾಧಮ್ಮ ಲೆಕ್ಕ ಹಾಕಿದರು.
“ನಿಮ್ಮವರ್ನ ನೋಡ್ಕೊಂಡು ಹೋಗ್ತಾರಾ?”
“ಹೂಂ ರಾಧಮ್ಮ. ನನ್ನ ತಂಗಿಗೆ ವರ ನೋಡೋಕೆ ಅಂತ ಬಂದ್ರು. ಬಂದವ
ರಿಗೆ ಈ ಕೆಲಸಾನೂ ಕೊಟ್ಟೆ.”

೧೪

ಸುನಂದೆಯ ತಂಗಿ ವಿಜಯಾಗೆ ವರ ಗೊತ್ತುಮಾಡುವ ಕೆಲಸ ಕೈಗೂಡಲಿಲ್ಲ.
ಹುಡುಗಿಯನ್ನು ನೋಡುವ ಮಾತಿಗೆ ಮುಂಚೆಯೇ ವರನ ಕಡೆಯಿಂದ ಸವಾಲು
ಬಂದಿತ್ತು

12