ಪುಟ:ಪಾಲಿಗೆ ಬಂದ ಪಂಚಾಮೃತ.pdf/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಪಾಲಿಗೆ ಬಂದ ಪಂಚಾಮೃತ

91

—ಎಂದು ಪುಟ್ಟಣ್ಣ ಕೇಳಿದ.
“ನಿಮಗೆ ಇಷ್ಟವಿರೋದು ಏನಾದರೂ ಸ್ವಲ್ಪ ತರಿಸಿ.”
....ತಿಂಡಿ ಕಾಫಿಗಳ ಸೇವನೆ ಮೌನವಾಗಿಯೆ ನಡೆಯಿತು.
ಹೊರಬಿದ್ದಾಗ ಮಾವ ಕೇಳಿದರು:
“ನೀವು ಮನೆ ಕಡೆ ತಾನೆ ಹೊರಟಿರೋದು?”
ಈ ದಿನವಾದರೂ ಆತ ಮನೆಗೆ ಬೇಗನೆ ಬರಬಹುದೆಂದು ಮಾವ ಭಾವಿಸಿದ್ದರು.
ಆದರೆ ಆತನ ಉತ್ತರ ಅವರ ಭಾವನೆಯನ್ನು ಸುಳ್ಳು ಮಾಡಿತು.
“ಇಲ್ಲ. ಬೇರೆ ಸ್ವಲ್ಪ ಕೆಲಸ ಇದೆ.”
ಇಷ್ಟು ಹೇಳಿದ ಪುಟ್ಟಣ್ಣನಿಗೆ ಸಂತೋಷವೆನಿಸಿತು. 'ಇನ್ನು ಮಾತಿನಲ್ಲಿ ಬಿಟ್ಟು
ಕೊಡೋದಿಲ್ಲ' ಎಂದು ತೀರ್ಮಾನ ಮಾಡಿದ.
“ಹಾಗಾದರೆ ಸ್ವಲ್ಪದೂರ ಈ ರಸ್ತೇಲೆ ಮಾತನಾಡ್ತಾ ನಡಕೊಂಡು
ಹೋಗೋಣವೇ?”
“ಆಗಲಿ."
ಅವರು ನಡೆಯತೊಡಗಿದಂತೆ ಮಾವ ಹೇಳಿದರು:
“ಅದೇ ನಿಮ್ಮಗೃಹಕೃತ್ಯದ ವಿಷಯ_”
ಪುಟ್ಟಣ್ಣ ನಾಲಗೆಯನ್ನು ಮೊನಚುಗೊಳಿಸಿ ಸಿದ್ಧನಾದ.
“ಆ ವಿಷಯವೆಲ್ಲ ತಿಳಿಸಿ ಸುನಂದಾ ಆಗಲೇ ನಿಮಗೆ ಕಾಗದ ಬರೆದಿರ್ಬೇಕು,
ಅಲ್ವೆ?”
“ಇಲ್ಲ. ಅವಳೇನೂ ಬರೆದಿಲ್ಲ.”
“ಇಲ್ಲಿ ಬಂದ ಮೇಲೆ ಹೇಳಿದ್ಲೋ?”
“ಸ್ವಲ್ಪ ಅವಳು ಹೇಳಿದ್ಲು. ಸ್ವಲ್ಪ ನಾನೇ ಊಹಿಸ್ಕೊಂಡೆ.”
“ಸಂತೋಷ. ಏನು ಹೇಳ್ಬೇಕೂಂತಿದೀರಾ ಈಗ?”
ತೀವ್ರ ಖಂಡನೆಯ ಮಾತನ್ನು ಪುಟ್ಟಣ್ಣ ನಿರೀಕ್ಷಿಸಿದ್ದ. ಆದರೆ ಬಂದ ಉತ್ತರ
ಬೇರೆಯೇ.
“ಸುನಂದಾಗೆ ಯಾವಾಗಲೂ ಸ್ವಲ್ಪ ದುಡುಕು ಜಾಸ್ತಿ. ಅಪ್ಪಿ ತಪ್ಪಿ ಏನಾದರೂ
ಮಾಡೋದು ಅವಳ ಸ್ವಭಾವ. ಅದನ್ನೆಲ್ಲ ನೀವು ಮನಸ್ಸಿಗೆ ಹಚ್ಕೋಬಾರದು.”
ಮನಸ್ಸಾಕ್ಷಿಗೆ ವಿರುದ್ಧವಾಗಿ ಮಗಳನ್ನೆ ಟೀಕಿಸುತಿದ್ದರು ತಂದೆ. ಈ ಮಾತು
ಸಹಜವೆ, ವ್ಯಂಗ್ಯವೆ, ಎಂದು ನಿರ್ಧರಿಸುವುದು ಪುಟ್ಟಣ್ಣನಿಗೆ ಕಷ್ಟವಾಯಿತು.
“ಅಂಥಾದ್ದೇನೂ ಆಗಿಲ್ವಲ್ಲಾ!”
“ಗಂಡ ಹೆಂಡಿರ ಜಗಳ ಅನ್ನೋದು ಯಾವಾಗಲೂ ಅಷ್ಟೆ. ಯಾವುದೋ
ಸಣ್ಣ ವಿಷಯದಿಂದಲೆ ಮಹಾ ರಾದ್ಧಾಂತವಾಗುತ್ತೆ. ನನಗೆ ವಯಸ್ಸಾಯ್ತು. ಸಂಸಾರ
ಸುಖ ಅನುಭವಿಸಿ, ಲೋಕದ ಅವಸ್ಥೆಯನ್ನೆಲ್ಲ ನೋಡಿ ನೋಡಿ, ನನ್ನ ಕೂದಲು