ಪುಟ:ಪಾಲಿಗೆ ಬಂದ ಪಂಚಾಮೃತ.pdf/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪಾಲಿಗೆ ಬಂದ ಪಂಚಾಮೃತ

95

ಆಕೆಗೆ ತಿನ್ನಿಸಿದರು.
ಯಾರೋ ಬೇರೆಯವರಿಗೆ ಸಂಬಂಧಿಸಿದ ಯಾವುದೋ ಹಳೆಯ ಕತೆ ಎಂಬಂತೆ,
ಹುಡುಗನ ಕಡೆಯವರು ಕೇಳಿದುದನ್ನೆಲ್ಲ ಅವರು ಮಗಳಿಗೆ ತಿಳಿಸಿದರು.
“ಹೋಗಲಿ, ನಮಗೆ ಭಾಗ್ಯವಿಲ್ಲ”
—ಎಂದಳು ಸುನಂದಾ, ಆ ಮಾತು ಮುಕ್ತಾಯವಾಗಲೆಂದು.
“ಭಾಗ್ಯವಿಲ್ಲವೋ ದೌರ್ಭಾಗ್ಯವಿಲ್ಲವೋ ಯಾರಿಗೆ ಗೊತ್ತು? ಆ ಹುಡುಗ ಎಂಥ
ವನೋ ಯಾರು ಬಲ್ಲ?”
—ಎಂದು ತಂದೆ ಕಹಿ ಮಾತನ್ನಾಡಿದರು.
ಆ ಮಾತೇ ತನಗೆ ಸಂಬಂಧಿಸಿದ ಪ್ರಸ್ತಾಪಕ್ಕೆ ಪೀಠಿಕೆಯಾಯಿತು.
“ಅವರು ಸಿಕ್ಕಿದರಾ?”
“ಸಿಕ್ಕಿದ್ದ.”
ಏನು ಮಾತುಕತೆಯಾಯಿತೆಂದು ತಿಳಿಯಲು ಸುನಂದಾ ಕುತೂಹಲಿಯಾಗಿದ್ದಳು.
ಆದರೆ, ತನ್ನ ಕೊಗು ಹೆಚ್ಚಿಸುವ ಉತ್ತರವೇ ಬರಬಹುದು ಎಂಬ ಭಯದಿಂದ,
ಮುಂದೆ ಪ್ರಶ್ನೆ ಕೇಳಲಿಲ್ಲ.
ಆ ವಿಷಯವನ್ನು ಸ್ವಲ್ಪ ಹೊತ್ತಿನ ಮಟ್ಟಿಗಾದರೂ ಮುಂದಕ್ಕೆ ತಳ್ಳಲೆಂದು
ಆಕೆಯೆಂದಳು:
“ಊಟಕ್ಕೆ ಎದ್ಬಿಡು ಅಪ್ಪಾ. ಅಡುಗೆ ಮಾಡಿಟ್ಟಿದೀನಿ.”
“ಏನೂ ಹಸಿವಿಲ್ಲ ಸುಂದಾ. ಒಮ್ಮೆ ಮನೆ ಸೇರಿದರೆ ಸಾಕಾಗಿದೆ ಸದ್ಯಃ.”
“ಜಾಸ್ತಿ ಬಡಿಸೊಲ್ಲ....ನಿನ್ನೆ ರಾತ್ರೆಯೂ ನಿನಗೆ ನಿದ್ದೆ ಇಲ್ಲ. ಇವತ್ತು ರಾತ್ರೇನೂ
ಇರೋದಿಲ್ಲ....ಬರೀ ಹೊಟ್ಟೇಲಿ ಹೋಗ್ಬೇಡ.”
“ನಿನ್ನಿಷ್ಟ. ಒಂದು ತುತ್ತು ಬಡಿಸ್ಬಿಡು ಹಾಗಾದರೆ.”
ಆಗಲೆ ಕತ್ತಲಾಗಿತ್ತು. ಸುನಂದಾ ದೀಪ ಹಾಕಿ ಅಡುಗೆ ಮನೆಗೆ ನಡೆದಳು...
...ಮಗಳು ಬಡಿಸಿದುದನ್ನು ಉಣ್ಣುತ್ತಲಿದ್ದಂತೆ ತಂದೆ, ಅಳಿಯನೊಡನೆ ತಾನು
ನಡೆಸಿದ ಮಾತುಕತೆಯನ್ನು ವಿವರಿಸಿದರು.
ತಂದೆ ತನ್ನ ಪಕ್ಷವಹಿಸಿ ಗಂಡನಿಗೆ ಛೀಮಾರಿ ಹಾಕಬಹುದೆಂದು ಸುನಂದಾ ಭಾವಿ
ಸಿದ್ದಳು. ಹಾಗೆ ಆಗಿರಲಿಲ್ಲ. ಹಾಗೆಂದು ಆಕೆಗೆ ನಿರಾಸೆಯಾದರೂ ಸಂಭಾಷಣೆ ಶಾಂತ
ರೀತಿಯಲ್ಲೇ ಮುಕ್ತಾಯವಾಯಿತಲ್ಲ-ಎಂಬ ಸಮಾಧಾನ ಮೂಡಿತು.
ತಂದೆ ಹೇಳಿದರು:
“ಸಂಸಾರದ ವಿರಸ ಬಹಳ ಕ್ಲಿಷ್ಟವಾದದ್ದು ಸುಂದಾ. ಸ್ವಲ್ಪ ಹೆಚ್ಚು ಒತ್ತಿದರೆ
ಮುರಿಯುತ್ತೆ. ತಾಳಿಕೊಂಡು ನಡೆದಷ್ಟೂ ಮೇಲು. ಗಂಡಸು ಏನು ತಪ್ಪು ಮಾಡಿ
ದರೂ ನಡೆದು ಹೋಗುತ್ತೆ. ನರಕ ಅನುಭವಿಸ್ಬೇಕಾದ್ದು ಹೆಂಗಸೊಬ್ಬಳೇ. ನೀನು
ತುಂಬಾ ಹುಷಾರಾಗಿರ್ಬೇಕಮ್ಮಾ.”