ನ ಸಂ|| ಮಾರ್ಗಶಿರ) ಪೂರ್ಣಕಲಾ ೮೫ + \/\y Y \'\ * 14 ಕುಲವು ಸಿದ್ಧಾರ್ಥಿಗಳಾಗುವುದರಲ್ಲಿ ಏನೂ ಸಂಶಯ ವಿರುವುದಿಲ್ಲ, ಮತ್ತೇನು ? " ಮತ್ತೇನೂ ಇಲ್ಲ. ನೀವೆಲ್ಲರೂ ಸಿದ್ದಾರ್ಥಿಗಳೇ ಅಹು ದಷ್ಟೆ ? ) ಪ್ರಭಾಕರನ ಪ್ರಶ್ನೆಗೆ ಹೊರಗಣಿನಿಂದ ದೊರೆತ ಉತ್ತರವನ್ನು ಕೇಳಿ, ಇಬ್ಬರೂ ಚಕಿತರಾಗಿ ತಲೆಯೆತ್ತಿ ಬಾಗಿಲಕಡೆಗೆ ತಿರುಗಿನೋಡಿದರು. ಸ್ವಯಂ ಕಲಾಧವ ಕುಮಾರನೇ ಕೈ ಕಟ್ಟಿ ನಿಂತಿರುವನು. ಕುಮಾರನ ಮುಖದಲ್ಲಿ ಉತ್ಸಾಹವು ಉಕ್ಕಿ ಸುರಿಯುತ್ತಿರುವುದು, ಇಬ್ಬರೂ ನೋಡಿದರು. ಧಿಗ್ಗನೆದ್ದು ಬಂದು ಕುಮಾರನ ಬೆನ್ನ ಮೇಲೆ ಇಬ್ಬರೂ ಎ ಕಕಾಲದಲ್ಲಿ ಚಪ್ಪರಿಸಿದರು. ಕಲಾಧವ ಕುಮಾರನು ಕೂಡ ತನ್ನ ಮಿತ್ರರ ಗಾದರಾಥಿತ್ಯಕ್ಕೆ ಪ್ರತಿಯಾಗಿ ತನ್ನೆರಡು ನಳಿದೋಳುಗಳಿಂದ ಇಬ್ಬರ ಕೊರಳನ್ನೂ ಸುತ್ತಿ, ಇಬ್ಬರನ್ನೂ ಕರೆತಂದು ಮೊದಲಿದ್ದೆಡೆಯಲ್ಲಿಯೇ ಕುಳ್ಳಿ, ರಿಸಿ ತಾನೂ ಅವರಿಬ್ಬರ ನಡುವೆ ಕುಳಿತು “ ಮಿತ್ರರೇ! ಈಗ ನಾನಾರು? ನೀವೇನಾಗಿರುವಿರಿ? ಹೇಳಬಲ್ಲಿರೋ? ಪ್ರಭಾ-ಓಹೋ ! ಧಾರಾಳವಾಗಿ !! ಈಗ ನೀನೇ ಸಾಕ್ಷಾ 3 ಸ್ಥಿತಿಕತ೯ನಾದ ವಿಷ್ಣು, ನಿನ್ನ ಪಾರ್ಶ್ವ.... ..... ಅಲ್ಲವೇ ? ಅಕ್ಷಯ-ಹಾಗೆನ್ನು ವದಕ್ಕೂ, ಕಲಾಧವಕುಮಾರನೇ ಕ್ಷಮಾ ದೀನನೆಂದೂ, ನಾವಿಬ್ಬರೂ ಆತನ ಅನುಗಾಮಿಗಳಾದ ......ರೆಂದೂ ಹೇಳುವುದರಿಂದ ಹೆಚ್ಚಿನ ಗುಣವುಂಟು.
ಪುಟ:ಪೂರ್ಣಕಲಾ.djvu/೧೦೧
ಗೋಚರ