ವಿಷಯಕ್ಕೆ ಹೋಗು

ಪುಟ:ಪೂರ್ಣಕಲಾ.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಲಸಂ|| ಮಾರ್ಗಶಿರ] ಪೂರ್ಣಕಲಾ ಆಲೆ ಆ \r\\ VV14 | V'/VARNA/\/\/ \/\//vy -ಅಕ್ಷಯ-ಅಹುದು ಅದರಿಂದಲೇ ಇಷ್ಟು ವಾದವಿವಾದಗಳಾದುವು. ಪ್ರಭಾಕರ-ಈ ಪತ್ರಪಠಣದಿಂದ ಗುರುಪುತ್ರಿ,ಭಯಪಟ್ಟಿರಬಹುದಲ್ಲವೆ? ಅಕ್ಷಯ-ಭಯಪಟ್ಟಿರುವುದು ಮಾತ್ರವಲ್ಲ, ಎಂದೋ ಕಾಲವಾದ ತಾಯಿಯನ್ನು ನೆನೆನೆನೆದು ಕೇಶಪಡುತ್ತಿರುವಳು. ಕಲಾಧವ-ಏನನ್ನೋ ಜ್ಞಾಪಿಸಿಕೊಂಡು ತಲೆಯೆತ್ತಿ-“ಇರಬಹುದು, ಹಾಗಾಗಿರುವುದರಿಂದಲೇ ಇಂದು ಗುರುವಿಯು ತಂದೆಯ ಬಳಿಯಲ್ಲಿ ಮಾತನಾಡುತ್ತಿದ್ದಳೆಂದು ಭಾವಿಸುವೆನು.' ಅಕ್ಷಯ-ಗುರುಪುತ್ರಿ, ತಂದೆಯೊಡನೆ ಮಾತನಾಡುತ್ತಿದ್ದುದನ್ನು ನೀ ನಾವಾಗ ನೋಡಿದೆ ? ಕಲಾಧವ-ಪ್ರಾತಃಕಾಲದಲ್ಲಿ ಗುರುಪಾದ ವಂದನೆಗಾಗಿ ಹೋಗಿದ್ದೆನಷ್ಟೆ; ಆಗ ಗುರುಗಳು ಕಾಲಕ್ಷೇಪದ ಮಂದಿರಕ್ಕೆ ಬರಲು ವಿಳಂಬವಾ ದುದರಿಂದ ಕಾರಣವೇನಿರಬಹುದೆಂದು ಶಂಕಿಸಿ, ನಾನೇ ಅವರ ಆ ಕಮಂದಿರಕ್ಕೆ ಹೋದೆನು. ಆ ವೇಳೆಯಲ್ಲಿ ಗುರುಗಳು ಸುಕುಮಾರಿಯೊಡನೆ ಸಂಭಾಷಿಸುತ್ತಿದ್ದುದನ್ನು ನೋಡಿದೆನು ಅಕ್ಷಯಕುತೂಹಲದಿಂದ ಕಲಾಧವನನ್ನು ನೋಡುತ್ತ 'ಕಲಾಧವ ಹಾಗಿದ್ದರೆ, ನೀನು ಗುರುಪುತ್ರಿಯನ್ನು ಚನ್ನಾಗಿ ನೋಡಿರುವೆ. ಆ ವೇಳೆಯಲ್ಲಿ ಸುಕುಮಾರಿ ಹೇಗಿದ್ದಳು ? ಅವಳ ಮುಖ ಭಾವವು ಹೇಗೆ ಕಾಣುತ್ತಿದ್ದಿತು. ಸಮಾಧಾನದಿಂದ ಮಾ ತನಾಡುತ್ತಿದ್ದಳೆ ? ಅಥವಾ ದುಗುಡದಿಂದ ಮಾತನಾಡು ತಿದ್ದಳೇ