ನಲಸಂ|| ಮಾರ್ಗಶಿರ) ಪೂರ್ಣಕಲಾ ೧೦೭ \ \ / \ 1 1 1 ಹೇಳಲಾರೆನು (ಪಕ್ಕಕ್ಕೆ ತಿರುಗಿ) ನೀನು ಹೇಳು, ಕ್ರ ಮುದ ಮಿತ್ರ ! ನನಗೆ ಆಹ್ಲಾದಪಾತ್ರವಾವುದು ? ಶಕ್ಕು ತೇಜಕ ವಸ್ತುವಾವುದು? ಕುಮುದ-ನಿನಗೆ-ಎಂದರೆ, ನಿನ್ನ ಸಂದೇಶವು ನನಗೆ ಅರ್ಥವಾ ಗಲಿಲ್ಲ. ಸಾಮಾನ್ಯವಾಗಿ, ಆಹ್ವಾದ-ಉತ್ಸಾಹಗ ಇನ್ನು ಹೆಚ್ಚಿಸುವದೆಂದರೆ, ಜ್ಞಾನ-ಮನೋ?ಯ ಇವೇ ಸರಿಯೆಂದು ಹೇಳುತ್ತಾರೆ! ಅವೆರಡಕ್ಕೂ, ನಮಗೆ ಆಧಾ ರವಾದುದೆಂದರೆ ತಿಳಿದೇ ಇದೆ-ವಿದ್ಯಾಭ್ಯಾಸ! ನಳಿನೀಸಾಕಯ್ಯ, ನಮಗೆ ನಿನ್ನ ಈ ವೇದಾಂತವು ಬೇಕಾ ಗಿಲ್ಲ, ಈ ನಮ್ಮ ವಯಪ್ರಾಬಲ್ಯಕಾಲದಲ್ಲಿ, ಅದರಲ್ಲಿ ಯ, ರಸಿಕಸಮಾಜದಲ್ಲಿ, ಸುಧಾರಣಾವಾದಿಗಳ ಗುಂ ಪಿನಲ್ಲಿ ಸೇರುವ ನಮಗೆ, ಆವವು ಪ್ರೇಕ್ಷಣೀಯವ ಸುಗಳು? ಆಹ್ಲಾದದಾಯಕ ಪಾತ್ರವಾವುದು? ಸುರಾ ದೇವಿಗೆ ಮಿಂಚಿದ ಪಾತ್ರವೂ ಇರುವದೇ? ರಕ್ತಾಕ್ಷಿಯ ಕೃಪಾಕಟಾಕ್ಷ ಪಾತ್ರನಾಗುವ ಭಾಗ್ಯದಮುಂದೆ ಮ ತಾವ ಲಾಭವೇಆಗಲಿ, ಗಣನೀಯವೆ? ಕುಮುದ-ಜಹಾಸೆಯಿಂದ-ನಳಿನೀಕಾಂತ ! ಅವೆರಡು ಮಾತ್ರ ನ್ನು ಮಾತ್ರ ನನ್ನ ಮುಂದೆ ಹೇಳಬೇಡ ' ನನಗೆ ಅವೆರಡು ಹೆಸರೂ ಅಸಹ್ಯವಾಗಿ ತೋರುತ್ತವೆ. ಮತ್ತಾವ ಮೋಜುಗಾರಿಕೆಯನ್ನು ಬೇಕಾದರೂ ಹೇಳು, ಅವೆಲ್ಲ ಕ್ಕೂ ಮುಂದಾಗಿ ನಿಲ್ಲುವೆನು, ಅಧಃಪತನ ಹೇತುಗಳಾ ದ ಸುರಾಪಾನ-ವೇಶ್ಯಾರಾಧನ ಇವೆರಡನ್ನು ಮಾತ್ರ ನನ್ನ ಮುಂದೆ ಹೇಳಬೇಡ.
ಪುಟ:ಪೂರ್ಣಕಲಾ.djvu/೧೨೫
ಗೋಚರ