ಹೃದಯವನ್ನು ವಿಕಲ್ಪಕ್ಕೆ ತಿರುಗಿಸಬಹುದೆಂದೋ-ನಮ್ಮ ಬಂಧು ಭಗಿನಿ ಯರಲ್ಲಿ ಅಪೇಕ್ಷಿಸುವವರಿದ್ದರೆ-ಅಂತಹವರಲ್ಲಿ ನಮ್ಮ ನಿವೇದನವಿಷ್ಟು ಒಂದು ಶುದ್ಧ ವಸ್ತುವಿನ ಉತ್ಕೃಷ್ಟ ಗುಣವನ್ನು ಸ್ಪಷ್ಟಪಡಿಸಬೇಕಾದರೆ, ಅದಕ್ಕೆ ವಿರುದ್ಧ ಸ್ವಭಾವದ ವಸ್ತುವಿನಲ್ಲಿರುವ ಕೆಟ್ಟ ಗುಣಗಳನ್ನೂ ಅದರ ದೆಸೆಯಿಂದಾಗಬಹುದಾದ ಬಾಧಕಗಳನ್ನೂ ತೋರಿಸಲೇ ಬೇಕಾಗುವಂತೆ ಯೂ ಬೆಳಕಿನ ಉಪಯೋಗವನ್ನು ತಿಳಿಯಬೇಕಾದರೆ ಕತ್ತಲೆಯ ಪ್ರಾಬ ಲ್ಯವನ್ನು ತಿಳಿದಿರಬೇಕಾದಂತೆಯೂ ಆ ಪಾತ್ರಗಳೆರಡರ ವಿಚಾರವನ್ನೂ ಇದರಲ್ಲಿ ವ್ಯಕ್ತಗೊಳಿಸಿರುವುದು. ಇದಕ್ಕೂ ಅವರಿಗೆ ವಿರೋಧಾರ್ಥವೇ ಕಂಡುಬಂದರೆ ಅಂತಹರಲ್ಲಿ ನಾವು ವಿಜ್ಞಾಪಿಸಲಾರೆವು. ಈ ಗ್ರಂಥದಲ್ಲಿ ಬಂದಿರುವ ಪಾತ್ರಗಳಿಗೆ ಕೊಟ್ಟಿರುವ ಹೆಸರುಗ ಳು ಕೂಡ ಆ-ಆ ಪಾತ್ರಗಳ ಗುಣ-ಸ್ವಭಾವ-ವರ್ತನಗಳಿಗೆ ಅನ್ವಯಿಸು ವಂತಹುದಾಗಿರುವುದಲ್ಲದೆ, ಅನ್ಯದೇಶೀಯರ ಹೆಸರನ್ನು ರೂಢಿಗೆ ತಂದು, ಅನ್ಯದೇಶದವರ ಆಚಾರವಿಚಾರಗಳನ್ನು ಅನುಕರಣಕ್ಕೆ ತಂದು, ಅವರಂ ತಾಗಲು ಕುಣಿಯಬೇಕೆಂಬ ಅಭಿಲಾಷೆಯೇನೂ ಇಲ್ಲ. ಇದಲ್ಲದೆ ನನ್ನ ಇತರ ಪುಸ್ತಕಗಳಲ್ಲಿ ಬಂದಿರುವ ಹೆಸರುಗಳೂ ಕೂಡ, ಕೆಲವು ಪಾತ್ರಗಳ ಸ್ವಭಾವಗಳನ್ನು ಅನುಸರಿಸುವಂತಹವೂ, ಮತ್ತೆ ಕೆಲವು ಹೆಸರುಗಳು, ನಮ್ಮ ಪೂರ್ವಜರಿಂದ ಆದರಿಸಲ್ಪಟ್ಟವುಗಳೂ, ಇನ್ನು ಕೆಲವು ಭಗವ ನಾ ಮಾಂಕಿತಗಳೂ ಆಗಿರತಕ್ಕವುಗಳಾಗಿವೆ. ಅಂತಹ ಹೆಸರುಗಳನ್ನು ಕೊಡುವುದರಿಂದ ವಾಚಕರ ಮನಸ್ಸಿಗೆ ಕೌತುಕಪ್ರದವಾಗಿಯ-ಶ್ರದ್ಯೆ ಯನ್ನುಂಟುಮಾಡುವಂತಹವಾಗಿಯೂ ಇರುವುವೆಂದು ಭಾವಿಸಿ ಹಾಗೆ ಬರೆದಿದೆ. ಇದನ್ನೂ ರೂಢಬಾಹಿರವೆಂದು ನಿಂದಿಸಿ, ವಿಪರೀತಾರ್ಥಕ ಲ್ಪನೆಯಿಂದ ಶಂಕಾಸವಾದವನ್ನು ಹೊರೆಯಿಸುತ್ತಿರುವ ನಮ್ಮ ಬಂಧುವ ರ್ಗಕ್ಕೆ ನಾವು ಹೇಳುವುದೇನಿದೆ ? “ಲೋಕೋಭಿನ್ನರುಚಿಃ', ಕುತ ರ್ಕಿಗೆ ಕಮಲಾಕಾಂತನಲ್ಲಿಯೂ ಕಲಂಕನೇ ಕಾಣುವುದು, ಸಂಶಯಗ್ರ
ಪುಟ:ಪೂರ್ಣಕಲಾ.djvu/೧೫
ಗೋಚರ