೧೩೬ ಸತೀಮಿತೈಷಿಣಿ (ತ್ರೈಮಾಸಿಕ
- * * * \ /\/
ತುಣಕುಮಿಣುಕಿದೆಯೆ? ಎಲ್ಲವೂ ಮುಗಿದುಹೋಯಿತು, ಅವೆ ಇವೂ ಎಲ್ಲಿದೆಯೋ ಅಲ್ಲಿಗೆ ಹೋಗಬಹುದು. ಮಧು-ಹಾಗೆನ್ನ ಬೇಡ. ನೀನು ಹೀಗೆ ಹಾರಾಡುವದು ಸರಿಯಲ್ಲ, ನನಗೆ ನಿನ್ನೆ ನಿಜವಾಗಿಯೂ ಆರೋಗ್ಯವಿರಲಿಲ್ಲ, ಜಡತೆಯಿಂದ ಹೊರಗೆ ಎಲ್ಲಿಗೂ ಬಾರದೆ ಕುಳಿತಲ್ಲಿಯೇ ಒರಗಿದ್ದೆನು. ಈದಿನ ಎಂದಿನಂತೆ ಬಂದೆನು. ರಕ್ತಾಕ್ಷಿ-ವಿಕೃತಸ್ವರದಿಂದ-ಕೃತಮ್ಮ ! ತೊಲಗತ್ಯ.ಇನ್ನು ಮುಂದೆ ನಿನ್ನ ಮುಖಾವಲೋಕನವೂ ನನಗೆ ಬೇಡ. ನಾನಾಗಿ ನಿನ್ನನ್ನು ಕಾಡಿ ಬೇಡಿ-ಕರೆತರಲಿಲ್ಲ, ಆತುರಗೊಂಡು ನೀ ನಾಗಿ ಬಂದು ಕಾಲಿಗೆ ಬಿದ್ದು ನನ್ನಲ್ಲಿ ಆಶ್ರಯವನ್ನು ಬೇಡಿದೆ ; ಬೇಕಾದಷ್ಟು ಸುಖವನ್ನೂ ಅನುಭವಿಸಿದೆ; ಈಗ ನಿನಗೆ ಬೇಡವಾ ಯಿತು, ವಂಚಿಸಿದೆ.ಇದೆಲ್ಲವನ್ನೂ ನಾನು ಕಾಣದವಳೆಂದು ನನ್ನಲ್ಲಿ ಬೆಂಕಿದೆ. ನನಗೀ ದ್ರೋಹವು ರುಚಿಸದು. ಹೋಗು-ಹೊ ರಟುಹೋಗು, (ನಳಿನೀಕಾಂತನನ್ನು ನೋಡಿ) -:ಹೋಗು ಹೋಗು! ನೀನೂ ಹೊರಟುಹೋಗು. ಇನ್ನು ಮೇಲೆ ನಿನ್ನ ಮದ್ಯಸ್ಥಿಕೆಯೂ ನನಗೆ ಬೇಕಾಗಿಲ್ಲ. ಮತ್ತೆ ನಾನು ಬರುವು ದರೊಳಗೆ ನೀವು ತೊಲಗಿದ್ದರೆ ಸರಿ-ಇಲ್ಲವಾದರೆ-ಎಂದು ಹೇಳಿ, ನಿಲ್ಲದೆ-ಮಧುಮಿತ್ರ-ನಳಿನೀಕಾಂತರು ನೋಡುತ್ತಿದ್ದಂತೆಯೇ ಕೆಳ ಗಿಳಿದು ಹೊರಟುಹೋದಳು. ಮಧುಮಿತ್ರ-ನಿಟ್ಟುಸಿರಿಟ್ಟು - ನೋಡಿದೆಯಾ? ನಳಿನೀಕಾಂತ? ನಿನ್ನ ಬಲಾತ್ಕಾರದಿಂದ ನಾನು ಬಂದುದಕ್ಕೆ ನನಗಾದ ಸನ್ಮಾನವಿದು! ಇದಕ್ಕಲ್ಲವೇ ಕುಮುದಮಿತ್ರನು ನಿನ್ನೆ ಅಷ್ಟು ಬಗೆಯಾಗಿ ನನಗೆ ಹೇಳದುದು? ನಾವಾತನ ಹಿತಬೋಧೆಯನ್ನು ನಿರಾಕರಿಸಿ, ಕಳ್ಳ