ವಿಷಯಕ್ಕೆ ಹೋಗು

ಪುಟ:ಪೂರ್ಣಕಲಾ.djvu/೧೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಲ ಸಂ|| ಮಾರ್ಗಶಿರ) ಪೂರ್ಣಕಲಾ ೧೩೯ ೧

    • \\\/

M ಲಾಧಿಕ್ಯದಿಂದ ಗುರುಗಳನ್ನೇ ನೋಡುತ್ತ ಕುಳಿತಿರುವರು. ಭಾಸ್ಕರಾ ಚಾಲ್ವರು ಸರಸ್ವತಿಯ ಮುಂದೆ ಬಲಗಡೆಗೆ ಕುಳಿತು, ಶಿಷ್ಯ ಮಂಡಳಿ ಯನ್ನು ಕೃಪಾದೃಷ್ಟಿಯಿಂದ ನೋಡುತ್ತಿದ್ದರು. ಶಾರದೆಯ ತಂದೆ ಯಾದ ಗೀತಾಚಾರರು ಭಾಸ್ಕರಾಚಾದ್ಯರ ಮುಂದೆ ಕುಳಿತಿದ್ದರು. ಪೂರ್ಣಕಲೆ, ಶಾರದೆ, ಕುಮುದೆ ಈ ಮೂವರೂ ಭಾಸ್ಕರಾಚಾದ್ಯರಿಗೆ ಎಡಗಡೆಯಾಗಿ ಕುಳಿತಿದ್ದರು, ಕುಮುದೆಯ ತಂದೆ ತಾರಾಕಾಂತನು ಮಗಳ ಬಳಿಯಲ್ಲಿ ಕುಳಿತಿದ್ದನು. ಶಾರದಾ ಉತ್ಸವವೆಂದರೆ ವಾರ್ಷಿಕೋತ್ಸವ ಅಥವಾ ನಾಣ್ಮಾಸಿ ಕೋತ್ಸವಗಳಲ್ಲ; ಮತ್ತು ಬರಿಯ ಮಂಗಳಾಷ್ಟಕ, ಗೀತಾ-ಸ್ತುತಿಗಳ ಲ್ಲಿಯೇ ಪರ್ಯವಸಾನ ಹೊಂದುವದಿಲ್ಲ. ಪ್ರತಿ ಭಾನುವಾರವೂ, ವಿದ್ಯಾ ರ್ಥಿಗಳೂ, ಉಪಾಧ್ಯಾಯರೂ ಸೇರಿ, ಶ್ರದ್ಧೆ, ಭಕ್ತಿ, ಗೌರವಗಳಿಂದ ಸಂಭ್ರಮವಾಗಿ ನಡೆಯಿಸುವ ಉತ್ಸವವಲ್ಲದೆ, ಅಧ್ಯಯನ, ಪಾರಾಯಣ, ಬೋಧನ, ಕೀರ್ತನ, ಸಮಾಲೋಚನಾದಿಗಳು ಸಾವಧಾನವಾಗಿ ನಡೆದು, ಶ್ರಾವಕರ, ವಿದ್ಯಾರ್ಥಿ ವರ್ಗಿಯರ, ಜಿಜ್ಞಾಸುಗಳ ಆತ್ಮವಿಚಾರ ಶಕ್ತಿ ಯನ್ನು ಹೆಚ್ಚಿಸಿ, ಉತ್ಸಾಹವನ್ನುಂಟುಮಾಡುವ ವಿಶ್ರಾಂತಿಸುಖಪ್ರದ ವಾದ ಕ್ರಿಯಾಕಲಾಪಗಳೂ ನಡೆಯುತ್ತಿವೆ. ವಿಶ್ರಾಂತಿ ಅಥವಾ ವಿರಾಮ ದಿನವೆಂದು ನಮ್ಮ ವರಲ್ಲಿ ಕೆಲವರು ಆ ದಿನವನ್ನು ಅಷ್ಟು ವಿಚಾರದೃಷ್ಟಿಯಿಂದ ನೋಡುತ್ತಿಲ್ಲ, ಅಂದು ಅವರು ಮಾಡುವ ಕೆಲಸವೆಂದರೆ, ಹಗಲುನಿದ್ದೆ, ಎಲೆಯಾಟ, ಪಗಡೆ, ಲಲ್ಲೆ, ಚಲ್ಲಾಟ, ಇವೇ ಮೊದಲಾದ ಕ್ಷುಲ್ಲಕ ವ್ಯಾಪಾರಗಳಲ್ಲಿ ನಿರತ ರಾಗುವುದು, ಇಲ್ಲವೆ ಬರಿಯ ವಾದ, ವಿವಾದ, ವಿಹಾರ ಇವುಗಳಿಂದ ಕಾಲ ಕಳೆಯುವುದು ಇತ್ಯಾದಿ.