ವಿಷಯಕ್ಕೆ ಹೋಗು

ಪುಟ:ಪೂರ್ಣಕಲಾ.djvu/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೦ ಸತೀಹಿತೈಷಿಣಿ | (ತ್ರೈಮಾಸಿಕ

  1. # # # # # # # # \/ \ / \/ \ \/ \ \ + * * \/\/ \ / \ # / + * * * * / 4 * # /\/ \ *
  • \r/\/\

ಅವರು ಹಾಗೇಕೆ ಮಾಡುವರೆಂದು ವಿಚಾರ ಮಾಡುವುದಾದರೆ, ಬಹುಶಃ ಅವರ ಅಭಿಪ್ರಾಯದಲ್ಲಿ ತಾವು ಹಿಂದಿನ ದಿನಗಳಲ್ಲಿ ಬಲು ದುಡಿ ದುದಾಗಿಯೂ, ಅದು ಕೂಡಿ ಬರುವುದಕ್ಕಾಗಿ ಒಂದು ದಿನದ ವಿರಾಮ ವನ್ನು ಪಡೆಯಬೇಕೆಂದೂ ಎಂದರೆ ಆಟ, ನೋಟ, ಕೂಟ-ಸವಿಯೂಟಗ ಳಿಂದ ಕಾಲ ಕಳೆವುದೆಂದೂ ತಿಳಿದಿರುವಂತೆ ತರ್ಕಿಸಬೇಕಾಗುತ್ತದೆ. ಹಾಗೆ ಅವರು ಕಳೆಯುವ ಕಾಲವು ಅವರ ಜೀವನಕ್ಕೆ ಅಷ್ಟಾಗಿ ಹಿತಕಾ ರಿಯಲ್ಲವೆಂದಾಗಲೀ, ತಮ್ಮ ಈ ರೀತಿಯಾದ ವಿರಾಮವು ಸರಿಯಾದ, ಮನೋಲ್ಲಾಸಪ್ರದವಾದ ಮತ್ತು ಉತ್ಸಾಹಜನಕವಾದ ವಿಶ್ರಾಂತಿಯಲ್ಲ ವೆಂದಾಗಲೀ ಸ್ವಲ್ಪಕ್ಕೆ ಸ್ವಲ್ಪ ವಿಚಾರ ಮಾಡಿದ್ದರೂ ಅವರು ತಮ್ಮ ಊಹಾಪೋಹ ಶಕ್ತಿಯನ್ನು ಹೀಗೆ ಕೆಡಿಸಿಕೊಳ್ಳುತಿರಲಿಲ್ಲ ! ಮತ್ತು ಅವರ ಈ ಬಗೆಯ ನಡೆವಳಿಕೆಯನ್ನು ನೋಡಿ ಅವರ ಕಿರಿಯರೂ ಅವರ ಚಾಳಿಯನ್ನು ಕಲಿತುಕೊಂಡು, ಜಡಜೀವಿಗಳೆಂಬ ಅಪವಾದಕ್ಕೆ ತುತ್ತಾಗುತ್ತಿರಲಿಲ್ಲ. ಮುಖ್ಯವಾಗಿ ಮೇಲೆ ಹೇಳಿದ ವ್ಯರ್ಥ ಕಾಲಕ್ಷೇ ಪವು ತಿಳಿಗಣೆರೆದಿರುವೆವೆಂದು ಹೇಳಿಕೊಳ್ಳುತ್ತಿರುವ ಮತ್ತು ಉಪದೇಶಕ, ಅಧ್ಯಾಪಕ, ಶಿಕ್ಷಕಸುಧಾರಕ,ಮಾಂಡಲಿಕ ವರ್ಗಗಳಲ್ಲಿ ಅಗ್ರಣಿಗಳೆಂದು ಅಭಿಮಾನದಿಂದ ಬೀಗಿರುವ ಮಹಾಶಯರೇ ಮೇಲೆ ಹೇಳಿದಂತೆ ತಮ್ಮ ಮಕ್ಕಳಿಗೆ ತಾವೇ ಈ ಬಗೆಯ ಮೇಲುಪಂಕ್ತಿಯನ್ನು ಹಾಕಿ ಕೊಡುತ್ತಿ ರುವರೆಂಬ ಮಾತು ಎಷ್ಟು ಶೋಚನೀಯವು ? ಇರಲಿ, ಪ್ರಕೃತಕ್ಕೆ ಈ ಪ್ರಸ್ತಾಪವನ್ನೆತ್ತಿದೆವಾದರೆ ಮೊದಲೇ ನಮ್ಮ ಮೇಲೆ ಕಿಡಿಕಿಡಿಯಾಗಿ ಸಿಡಿದು ಬೀಳುತ್ತಿರುವ ಮಹಾಶಯರು, ಮುಂದೆ ನಮ್ಮನ್ನು ತಮ್ಮ ದ್ವೇಷಕ್ಕೆ ಆಹುತಿಯಾಗಿ ತೆಗೆದುಕೊಳ್ಳು ವುದೇ ತಮ್ಮ ಪುರುಷಾರ್ಧವೆಂದು ಭಾವಿಸಿ, ತಮ್ಮ ಹಗೆತನವನ್ನು ಸಾಧಿ ಸುವುದಕ್ಕಾಗಿ ಉಳಿದಿದ್ದ ಅಲ್ಪಸ್ವಲ್ಪ ಕಾಲಧನವನ್ನೂ ಹಾಳುಮಾಡಿ