ನಲಸಂ|| ಮಾರ್ಗಶಿರ) ಪೂರ್ಣಕಲಾ ೧೫೧ ಆದರೆ ಅಷ್ಟರಲ್ಲಿ ಮಧುಮಿತ್ರನ ವಿಚಾರವು ಅಡ್ಡ ಬಂದುದರಿಂದ ಮನಸ್ಸು ತುಂಬಾವ್ಯಾಕುಲಗೊಂಡಿದೆ. ಈಗ ಹೆಚ್ಚು ಹೇಳಲಾರೆ, ಮುಖ್ಯವಾಗಿ ನೀವೆಲ್ಲರೂ ಜಾಗರೂಕತೆಯಿಂದಲೂ, ಆಸಕ್ತಿಯಿಂ ದಲೂ ನಿಮ್ಮ ನಿಮ್ಮ ಅಭ್ಯಾಸಯೋಗವನ್ನು ಸಾಧಿಸಿಕೊಂಡು ಬರ ಬೇಕೆಂದು ಹೇಳುತ್ತೇನೆ. ನಿಮ್ಮಲ್ಲಿ ಆವ ಒಬ್ಬನು ದುರ್ಮಾ ರ್ಗಕ್ಕೆ ಬಿದ್ದರೂ ನಮಗೆ ಅಪಕೀರ್ತಿಯ ಅಂತಸ್ತಾಪವೂ ತಪ್ಪು ವುದಿಲ್ಲ, ನೀವು ಸತಿ ವಂತರಾಗಿ ಅಭ್ಯುದಯವನ್ನು ಹೊಂದಿ ಪ್ರಕಾಶಿಸುವುದನ್ನು ನೋಡಬೇಕೆಂಬುದೇ ನಮ್ಮ ಗುರಿಯಾಗಿದೆ. ಈ ನಮ್ಮ ಗುರಿಯನ್ನು ತಪ್ಪಿಸದೆ ಸಾಫಲ್ಯಗೊಳಿಸುವುದೇ ನೀವು ನಮಗೆ ಕೊಡಬೇಕಾದ ಗುರುದಕ್ಷಿಣೆ! ಇದನ್ನು ಚನ್ನಾಗಿ ತಿಳಿ ದುಕೊಳ್ಳಿರಿ. ಮಧುಮಿತ್ರನ ಈ ದಿನದ ವಿಚಾರವು ನಿಮಗೆ ಎಚ್ಚರಿಕೆಗಾಗಿ ಬಂದಿರುವದೆಂದು ತಿಳಿಯಿರಿ!! ಮತ್ತು ಮಧುಮಿ ತನೊಬ್ಬನ ಅಪಚಾರದಿಂದ ಇಷ್ಟು ವ್ಯಾಕುಲಪಡುತ್ತಿರುವ ನಮ್ಮನ್ನು ನೋಡಿ ನಮ್ಮ ಮನಸ್ಸಮಾಧಾನಮಾಡುವಂತೆ ಮಾ ಡಲು ನೀವೆಲ್ಲರೂ ಸದ್ವರ್ತನವನ್ನು ಹಿಡಿಯಿರಿ ಭಗವತಿಯು ನಿಮಗೆ ಬೆಂಬಲವಾಗಿರಲಿ. (ತಾರಾಕಾಂತ ಗೀತಾಚಾರ್ ರೊಡನೆ ಶಾರದೆಯ ಕಡೆಗೆ ತಿರುಗಿ) “ಹೇ, ಭಗವತಿ ! ಭಾರತಿ ! ಭಕ್ತಾತವನ್ನು ಕಟಾಕ್ಷೆಸು ಉದ್ಧರಿಸು.” -- ಎಂದು ಪ್ರಾರ್ಥಿಸಿದರು. ಆ ಬಳಿಕ ಗುರುಜನರ ಆಜ್ಞೆಯಂತೆ ಶಿಷ್ಯರೆಲ್ಲರೂ ಮಂಗಳ ಗೀತಗಳನ್ನು ಹೇಳಿದರು. ಉತ್ಸವಕಾಧ್ಯವೂ ಸಾಂಗವೆನ್ನಿಸಿತು. -~-
ಪುಟ:ಪೂರ್ಣಕಲಾ.djvu/೧೬೯
ಗೋಚರ