೧೫೬ ಸತೀಹಿತೈಷಿಣಿ (ತ್ರೈಮಾಸಿಕ M ತಾರಾ-ನಿಟ್ಟುಸಿರಿಟ್ಟು 'ತಾಯಿ' ! ಕುಮುದಾ! ಸ್ವಲ್ಪ ಸುಮ್ಮನಿರು. ಇನ್ನು ನಾಲ್ಕಾರುದಿನಗಳಲ್ಲಿ ನಾವು ಬೇರೆಕಡೆಗೆ ಹೋಗುವವರಾ ಗಿದ್ದೇವೆ. ಅಲ್ಲಿ ನಿನಗೆ ಬೇಕಾದಂತೆ ಆಡಿ ಪಾಡಲು ಅಣಿಮಾಡಿ ಕೊಡುತ್ತೇನೆ. ಕುಮುದಮಿತ್ರ, ನಿನಗೂ ಅದೇತು ಇನ್ನೂ ಉತ್ತಮ ವರ್ಗದ ಕಲಾಶಾಲೆಗೆ ನಿನ್ನನ್ನು ಸೇರಿಸುವೆನು, ಸುಮ್ಮನಿರು, ಕು, ಮಿ-ಇಷ್ಟು ಜಹಾಸೆಗೂ ಕಾರಣವೇನೆಂಬುದು ನನಗೆ ಈಗ ತಿಳಿ ಯಿತು. ಅಪ್ಪ! ತಾವೇನೋ ನನ್ನನ್ನು ಇನ್ನೂ ಘನಹೊಂದಿದ ಕಲಾಶಾಲೆ (College) ಯಲ್ಲಿ ಬಿಡುವಿರಿ; ಆದರೆ ವಿಚಾರ ಮಾಡಿನೋಡಿರಿ, ನಾನೂ ತಕ್ಕಮಟ್ಟಿಗೆ ದೇಶಾಟನೆಯನ್ನು ಮಾಡಿ ತಕ್ಕಷ್ಟು ವಿಷಯ ಸಂಗ್ರಹಮಾಡಿಯೇ ಬಂದಿರುತ್ತೇನೆ. ನಾನು ನೋಡಿ ವಿಚಾರಮಾಡಿ ಅನುಭವಕ್ಕೆ ತೆಗೆದುಕೊಂಡು ಬಂದಿರುವ ಮಹಾನಗರಗಳ ಮತ್ತು ಕಲಾಶಾಲೆಗಳ ವಿಚಾರವು ಬಾಹ್ಯರಂಗ ದಲ್ಲಿ ಸುಮನೋಹರವೂ ಸ್ತುತ್ಯವೂಆಗಿ ತೋರುತ್ತಿರಬಹುದಾ ದರೂ-ಈ ನಮ್ಮ ಶಾಂತಿನಿಲಯದಲ್ಲಿ ಕಾಣುತ್ತಿರುವ ಅಂತರಂಗ ಸೌಂದರ್ಯವೂ, ಈ ನಿರ್ಮಲ ಪ್ರೇಮಭಾಮವೂ ನನಗೆ ಅಲ್ಲಿ ನೋಡಿದರೂ ಸಿಕ್ಕುವಂತೆ ಕಾಣಬರಲಿಲ್ಲ, ನನಗೆ ಮೋಜು ಬಲವಾಗಿದ್ದರೂ ಇರಬಹುದು. ಆದರೆ ಅವಿದ್ಯೆ ಎಂದರೆ ವಿಪ ರೀತ ಪ್ರಜ್ಞೆಯ ಅತ್ಯಾಚಾರವು ಬೇಕಾಗಿಲ್ಲ, ಇದಕ್ಕಾಗಿ ದಯೆ ಯಿಟ್ಟು ನನ್ನನ್ನು ನೋಡಿಯಾದರೂ ತಾವು ಶಾಂತಚಿತ್ತರಾಗಿ ಮೊದಲಿನಂತಿರಬೇಕೆಂದು ಪ್ರಾರ್ಥಿ ಸುವೆನು. ನಮ್ಮ ಅಧ್ಯಕ್ಷರ ವಿಷಯದಲ್ಲಿ ತಾವು ಇಷ್ಟು ವಿರಸ, ........ ತಾರಾ-ಕರ್ಕ ಶಸ್ವರದಿಂದ ಕುಮುದಮಿತ್ರ! ನಿನಗೆ ಆ ನಿನ್ನ ಅಧ್ಯಕ್ಷ
ಪುಟ:ಪೂರ್ಣಕಲಾ.djvu/೧೭೪
ಗೋಚರ