ವಿಷಯಕ್ಕೆ ಹೋಗು

ಪುಟ:ಪೂರ್ಣಕಲಾ.djvu/೧೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಲಸಂ|| ಮಾರ್ಗಶಿರ ಪೂರ್ಣಕಲಾ ೧೬೧

  • \\/ \

+ ಹೊರಡಲು ಸಿದ್ಧರಾಗಿರುವೆವು. ಕುಮಾರ! ಈವರೆಗೆ ನನ್ನಿಂದ ನಿಮಗೇನಾದರೂ ಕೆಡುಕುಗಳಾಗಿದ್ದರೂ – ಅಥವಾ - ನಾನು ಮರ್ಯಾದೆ ಮಾರಿ ನಿಮ್ಮನ್ನು ಅಪಮಾನಸಿಡಿಸಿದ್ದರೂ ನೀವು ಅದನ್ನು ಮರೆತುಬಿಡಬೇಕಲ್ಲದೆ ನನಗೆ ಪಯಣಕ್ಕೆ ಅನುಮತಿ ಯನ್ನು ಕೊಡಬೇಕು. ಕಲಾ-ಕೈಜೋಡಿಸಿ - ಗದ್ಧ ದಸ್ವರದಿಂದ- 'ಹಾಗೆಲ್ಲಾ ಆಡಬಾರದು, ತಮ್ಮನ್ನು ನಾವು ಹೇಗೂ ಬಿಡಲಾರೆವು, ಸುಧಾರಣಾ ವಿಚಾ ರದಲ್ಲಿ ಅಲ್ಪ ದೋಷಗಳೊಂದುವೇಳೆ ಕಂಡು ಬಂದಿದ್ದರೂ ತಮ್ಮ ಸುಗುಣಕ್ಕೆ ನಮ್ಮ ಶಿಷ್ಯವರ್ಗವು ಮಾತ್ರವೇಅಲ್ಲ-ನಮ್ಮ ಗುರು ಗಳೂ ಲುಬ್ಬರಾಗಿ ಹೋಗಿರುವರು, ಈ ಶಾಂತಿನಿಕೇತನಕ್ಕೆ ಬಲವಾದ ಶಕ್ತಿಯರಾಗಿರುವ ನಿಮ್ಮ ಮೂವರಲ್ಲಿ ಯಾರು ಕೈಬಿಟ್ಟರೂ ಇದರ ಸತ್ವ ಕುಂದುವದರಲ್ಲಿ ಸಂದೇಹವಿಲ್ಲ. ತಾರಾ.-ಆತುರದಿಂದ-'ಕುಮಾರ! ನನ್ನಿಂದ ನಿಮಗೆ ಸಾಧಕವೇನಾ ದರೂ ಉಂಟೇ? ಬಾಧಕವೇನೂ ಇಲ್ಲವೇ? ಶಿಷ್ಯವರ್ಗವು ನನ್ನನ್ನು ವಿಶ್ವಸನೀಯನೆಂದು ನಂಬಿರುವುದು ನಿಜವೇ? ನಿಮ್ಮ ಅಧ್ಯಕ್ಷಉಪಾಧ್ಯಕ್ಷರು ನನ್ನ ವಿಷಯದಲ್ಲಿ ಆಪ್ತಭಾವದಲ್ಲಿರುವರೆ ನಂಬಲೇ ? ಏನಾದರೂ ಆಧಾರವುಂಟೇ? ಕಲಾನನ್ನ ಮಾತಿನ ಆಧಾರವು ಸಾಕೆಂದರೆ ಸು, ಇಲ್ಲವಾದರೆ ಈ ಪತ್ರಾವಲೋಕನದಿಂದಾದರೂ ನಂಬಬಹುದು. ಹೆಚ್ಚಿಗೆ ಹೇಳುವ ಶಕ್ತಿ ನನಗಿಲ್ಲ' ಎಂದು ಹೇಳಿ, ತಾರಾಕಾಂತನ ಹೆಸರಿನಲ್ಲಿ ಬರೆದು ಅಂಟುಹಾಕಿದ್ದ ಪತ್ರವನ್ನು ತೆಗೆದು ಕೈಯಲ್ಲಿರಿಸಿದನು. ತಾರಾಕಾಂತನೂ ಅದನ್ನು ಆತುರದಿಂದ ಕೈಕೊಂಡು ಅದನ್ನು ಓದಿದನು. ಅದು ಹೀಗೆ ಬರೆಯಲ್ಪಟ್ಟಿತು, 21