ನಲಸಂ| ಮಾರ್ಗಶಿರ) ಪೂರ್ಣಕಲಾ ೧೬೫
- \ \ / \ / yr /Jvy Jy\\/\/ \ , v r\r f * vv \\\/ \/\r
ಅಥವಾ ವಿರಹಗಳಿಂದ ನಮ್ಮ ಶಿಷ್ಯವರ್ಗಕ್ಕೆ ಉತ್ಸಾಹ-ಅಥವಾ ನಿರಾಶೆ ಗಳುಂಟಾಗುವವೆಂತು? “ತಮ್ಮಯ್ಯ! ಈಗ ನೋಡು. ಜಗತ್ತಿನ ಎಲ್ಲಾ ಪ್ರಾಣಿಗಳ ಲ್ಲಿಯೂ ಒಂದೊಂದು ಅವಗುಣವಿದ್ದೇ ಇರುತ್ತದೆ. ಲೇಶಮಾತ್ರವೂ ಅವಗುಣವಿಲ್ಲದ ಪ್ರಾಣಿಯು ಈ ಜಗತ್ತಿನಲ್ಲಿಯೇ ಇಲ್ಲ. ಆದರೂ ಅವ ಗುಣಗಳನ್ನು ಗಣಿಸದೆ ಗುಣಗಳನ್ನು ಗ್ರಹಿಸುವುದೂ, ಅವಗುಣವು ಸುಗುಣವಾಗಿ ತಿರುಗುವಂತೆ ಪ್ರಯತ್ನ ಪಡುವುದೂ ಉತ್ತಮವರ್ಗದ ಎಂದರೆ ಮಹನೀಯರ ಲಕ್ಷಣವು, ವಸ್ತು ಸ್ಥಿತಿ ಹೀಗಿರುವಾಗ ತಾರಾ ಕಾಂತಬಾಬುಗಳಲ್ಲಿ ಒಂದೆರಡು ಅವಗುಣವಿದ್ದ ಮಾತ್ರಕ್ಕೆ ಅವರಲ್ಲಿರುವ ಉತ್ಕಟವಾದ ದೇಶಭಕ್ತಿ-ಶಿಷ್ಯವಾತ್ಸಲ್ಯ, ವಾಚಾಲಕತೆ, ಕಲ್ಪನಾಚಾತು ರ್ಯಗಳೇ ಮೊದಲಾದ ಸದ್ಗುಣಗಳೂ, ಶಿಷ್ಯರ ಪ್ರಕೃತಿಮಾನವನ್ನರಿತು ಬೋಧಿಸುವಂತಹ ಸೂಕ್ಷ್ಮಜ್ಞತೆಯ, ಶಿಷ್ಯವರ್ಗವು ತಮ್ಮ ಬೋಧ ನೆಯಕಡೆಗೆ ಕಿವಿಕೊಟ್ಟು ತದೇಕಧ್ಯಾನದಲ್ಲಿ ಕುಳ್ಳಿರುವಂತೆ ಮಾಡುವ ಆಕರ್ಷಣಾಶಕ್ತಿಯೂ ನಮ್ಮ ಸಂಭಾವನಾಯೋಗ್ಯವಲ್ಲವೆ? ಅವುಗಳಿಗೆ ನಾನು ಬೆಲೆ ಕಟ್ಟದೆ ದೋಷವನ್ನು ಉದ್ಘಾಟಿಸಿದುದು-ಹಾಗೂ ಶಿಷ್ಯ ಸಮೂಹದ ಮುಂದೆ-ಹೇಳಿದುದು ಅನ್ಯಾಯವಾದಂತಲ್ಲವೆ? “ನಿಜ, ಅದು ನ್ಯಾಯವನ್ನು ಮಾರಿದ್ದರೂ ಇರಬಹುದು-ಆದರೆ ಹಿಂದೆ ತಾವೇ ಎಷ್ಟು ಬಾರಿ ಅವರ ಆಡಂಬರ-ಅನುಕರಣಶೀಲದ ಹುಚ್ಚಾ ಟಗಳನ್ನು ನಿಷೇಧಿಸಿರಲಿಲ್ಲ ? ಅದೇನಾದರೂ ನಿಂತಿದ್ದಿತೇ? ಅದರಲ್ಲಿಯೂ ಮೊನ್ನೆ ನಡೆಯಿಸಿದ ಆಟವೆಂತಹದು ? ಇದು ತಪ್ಪೆಂದೂ-ತಮ್ಮ ಆರ್ಯ ಸಮಾಜಕ್ಕೆ-ಆರ್ಯ ಧರ್ಮಕ್ಕೆ ಇದು ಅನುಚಿತವೆಂದೂ ಅವರು ತಿಳಿಯ ಬೇಕಾದ ಉಪಾಯವೆಂದರೆ ಮನಸ್ಸಿಗೆ ಕೇಶವನ್ನುಂಟುಮಾಡುವುದೇ ಸರಿ! ಅದರಿಂದಲೇ ಅವರಲ್ಲಿ ಪಶ್ಚಾತ್ ಬುದ್ದಿಯುಂಟಾಗುವುದು.”